ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡು ಚಿತ್ರರಂಗ ಸಾಕಷ್ಟು ನೋವನ್ನು ಅನುಭವಿಸುತ್ತಿದ್ದು ಅವರನ್ನು ನೆನಪಿಸಿಕೊಳ್ಳುವುದಕಕ್ಕೆ ಪುನೀತ್ ನಮನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪುನೀತ್ ಅವರನ್ನು ನೆನಪಿಸಿಕೊಳ್ಳುವ ಕಾರ್ಯ ನಡೆದಿದ್ದು ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹತ್ವದ ಘೋಷಣೆ ಒಂದನ್ನು ಮಾಡಿದ್ದಾರೆ. ಹೌದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ರವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಾಗಿ ಅವರು ತಿಳಿಸಿದ್ದು ಪುನೀತ್ ನಮ್ಮೆಲ್ಲರಿಗೂ ಬಹಳ ಆತ್ಮೀಯ. ಅವನನ್ನು ನಾನು ಬಾಲ್ಯದಿಂದ ಬಲ್ಲೆ. ಬಾಲ್ಯದಲ್ಲಿಯೇ ಪ್ರತಿಭೆಯ ಚಿಲುಮೆ ಹೊಂದಿದ ವ್ಯಕ್ತಿ.
ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಸೇರಿದಂತೆ ತಮಿಳು ಮತ್ತು ತೆಲುಗು ಚಿತ್ರರಂಗದ ಖ್ಯಾತ ನಟರು ಸೇರುದಂತೆ ಅನೇಕರು ಆಗಮಿಸಿದ್ದು ಕರ್ನಾಟಕ ರಾಜ್ಯದ ಖ್ಯಾತ ರಾಜಕಾರಣಿಗಳು ಕೂಡ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ನಿರೂಪಿಸಿದ್ದು ಕನ್ನಡ ಚಿತ್ರರಂಗದ ಖ್ಯಾತ ನಿರೂಪಕರಾಗಿರುವ ಅಪರ್ಣ ರವರು. ಸಾಮಾನ್ಯವಾಗಿ ಕನ್ನಡದ ಯಾವುದೇ ಕಾರ್ಯಕ್ರಮಗಳಿದ್ದರೂ ಕೂಡ ಪ್ರಮುಖವಾಗಿ ಅಪರ್ಣ ರವರೆ ನಿರೂಪಣೆ ಮಾಡುತ್ತಾರೆ ಎನ್ನವಹುದು.
ಇನ್ನು ಅಪರ್ಣ ರವರ ಸುಲಲಿತವಾದ ಕನ್ನಡದ ಬಳಕೆ ಪ್ರತಿಯೊಬ್ಬರಿಗೂ ಕೂಡ ಮೆಚ್ಚುಗೆಯಾಗುತ್ತಿದ್ದು ಅಪ್ಪು ಅವರ ಪುನೀತ್ ನಮನ ಕಾರ್ಯಕ್ರಮದಲ್ಲಿ ಬರೋಬ್ಬರಿ 10 ಗಂಟೆಗಳ ಕಾಲ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದಾರೆ ನಮ್ಮ ಅಪರ್ಣ. ನಟಿ ನಿರೂಪಕಿ ಅಪರ್ಣಾ ರವರು ಕನ್ನಡ ಚಿತ್ರರಂಗದ ಅಗ್ರಗಣ್ಯ ನಿರೂಪಕರಾಗಿದ್ದರಿಂದ ಯಾವುದೇ ಕಾರ್ಯಕ್ರಮಗಳಿಗೂ ಹೋದರು ಕೂಡ ಸರಿ ಸುಮಾರು 50 ಸಾವಿರದಿಂದ ಒಂದು ಲಕ್ಷ ರೂಪಾಯಿ ಸಂಭಾವನೆ ಪಡೆದು ಕೊಳ್ಳುತ್ತಾರೆ.
ಆದರೆ ಪುನೀತ್ ನಮನ ಕಾರ್ಯಕ್ರಮವನ್ನು ಯಾವುದೇ ಸಂಭಾವನೆ ಇಲ್ಲದೆ ಉಚಿತವಾಗಿ ಮಾಡಿಕೊಟ್ಟಿದ್ದು ಇಷ್ಟು ಮಾತ್ರವಲ್ಲದೆ ಪುನೀತ್ ರವರನ್ನು ಕಳೆದುಕೊಂಡಿರುವ ದುಃಖ ಕೂಡ ಅವರ ಮನಸ್ಸಿನಲ್ಲಿರುವುದನ್ನು ತೋರಿಸಿದ್ದತು. ಈ ಕಾರ್ಯಕ್ರಮದಲ್ಲಿ ಸಾಕಷ್ಟು ಭಾವುಕರಾಗಿ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಇಂತಹ ಕಾರ್ಯಕ್ರಮವನ್ನು ಇನ್ನು ಮುಂದೆ ನಡೆಸದಂತಾಗಲಿ ಎಂಬ ಅಭಿಪ್ರಾಯವನ್ನು ಕೂಡ ಹಂಚಿಕೊಂಡಿದ್ದರು. ಇನ್ನು ಪುನೀತ್ ರವರ ಚಿತ್ರದ ಯಶಸ್ವಿ ಕಾರ್ಯಕ್ರಮವನ್ನು ನಡೆಸಿಕೊಡುವ ಬದಲು ಅಗಲಿಕೆಯ ನಂತರ ಸಲ್ಲಿಸುವ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವುದಕ್ಕಾಗಿ ಸಾಕಷ್ಟು ಬೇಸರವನ್ನು ಕೂಡ ವ್ಯಕ್ತಪಡಿಸಿದ್ದು ಕಣ್ಣೀರು ಕೂಡ ಸುರಿಸಿದರು.