ಹೃದಯಾಘಾತದಿಂದ ನಿಧನರಾದ ನಂತ್ರ, ನಟ ಪುನೀತ್ ರಾಜ್ ಕುಮಾರ್ ( Puneet Rajkumar ) ಅವರು ನೇತ್ರದಾನ ಮಾಡಿದ್ದಾರೆ. ಅವರ ಕಣ್ಣುಗಳನ್ನು ಇಬ್ಬರಿಗಲ್ಲ, ನಾಲ್ವರು ಕಣ್ಣಿನ ತೊಂದರೆ ( Eye Problem ) ಎದುರಿಸುತ್ತಿರುವಂತ ಜನರಿಗೆ ಅಳವಡಿಸಲಾಗಿದೆ. ಇದು ಹೊಸ ತಂತ್ರಜ್ಞಾನದ ಮೂಲಕ ಅಳವಡಿಸುವಂತೆ ಆಯ್ತು. ಈ ಮೂಲಕ ನಟ ಪುನೀತ್ ರಾಜ್ ಕುಮಾರ್ ಸಾವನ್ನಪ್ಪಿದರು ನಾಲ್ವರ ಬಾಳಿಗೆ ಬೆಳಕಾಗಿದ್ದಾರೆ ಎಂದು ನಾರಾಯಣ ನೇತ್ರಾಲಯದ ( Narayana Netralaya ) ಮುಖ್ಯಸ್ಥ ಡಾ.ಭುಜಂಗಶೆಟ್ಟಿ ( Dr.Bhujangashetty ) ತಿಳಿಸಿದ್ದಾರೆ.
ಈ ಕುರಿತಂತೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ನಾಲ್ಕು ಮಂದಿಗೆ ಕಣ್ಣುಗಳನ್ನು ಅಳವಡಿಸಲಾಗಿದೆ. ಇದು ಹೇಗೆ ಆಗುತ್ತದೆ ಅಂತ ಯೋಚಿಸಿದ್ರೇ, ಹೊಸ ರೀತಿಯ ತಂತ್ರಜ್ಞಾನದ ಮೂಲಕ ನಾಲ್ವರಿಗೆ ಅಳವಡಿಸಲಾಗಿದೆ. ಮುಂದಿನ ಭಾಗ ಒಬ್ಬರಿಗೆ, ಅದರ ಹಿಂದಿನ ಭಾಗವನ್ನು ಮತ್ತೊಬ್ಬರಿಗೆ ಜೋಡಿಸಲಾಗಿದೆ. ಹೀಗೆ ಒಂದು ಕಣ್ಣನ್ನು ಇಬ್ಬರಿಗೆ, ಮತ್ತೊಂದು ಕಣ್ಣನ್ನು ಇಬ್ಬರಿಗೆ ಸೇರಿಸಿದಂತೆ ನಾಲ್ವರಿಗೆ ಪುನೀತ್ ರಾಜ್ ಕುಮಾರ್ ಕಣ್ಣನ್ನು ಅಳವಡಿಸಲಾಗಿದೆ ಎಂದರು.
ಇದು ರಾಜ್ಯದಲ್ಲೇ ಹೊಸ ಪ್ರಯೋಗವಾಗಿದೆ. ಒಂದೇ ದಿನದಲ್ಲಿ ನಾಲ್ವರಿಗೆ ಪುನೀತ್ ರಾಜ್ ಕುಮಾರ್ ಅವರ ಕಣ್ಣುಗಳನ್ನು ಅಳವಡಿಸಲಾಗಿದೆ. ನಾಲ್ವರು ಕಣ್ಣಿನ ತೊಂದರೆ ಅನುಭವಿಸುತ್ತಿದ್ದಂತವರಿಗೆ ಪುನೀತ್ ರಾಜ್ ಕುಮಾರ್ ಕಣ್ಣು ಅಳವಡಿಸಿದ ನಂತ್ರ ತುಂಬಾ ಚೆನ್ನಾಗಿದ್ದಾರೆ. ಹೀಗೆ ಶಸ್ತ್ರ ಚಿಕಿತ್ಸೆಯ ಮೂಲಕ ನಾಲ್ವರು ಅಂದರ ಭಾಳಿಗೆ ನಟ ಪುನೀತ್ ರಾಜ್ ಕುಮಾರ್ ಬೆಳಕಾಗಿದ್ದಾರೆ ಎಂದು ತಿಳಿಸಿದರು.
ಕನ್ನಡ ಮೇರು ನಟ ಡಾ.ರಾಜ್ ಕುಮಾರ್ ಅವರಂತೆ, ನಟ ಪುನೀತ್ ರಾಜ್ ಕುಮಾರ್ ತಮ್ಮ ಅಮೂಲ್ಯ ಕಣ್ಣುಗಳನ್ನು ನೇತ್ರದಾನ ಮಾಡಿದ್ದಾರೆ. ಇದರಿಂದ ನಾಲ್ವರು ಅಂದರ ಬಾಳಿನಲ್ಲಿ ಬೆಳಕಾಗಿದ್ದಾರೆ. ಅವರ ಕುಟುಂಬಕ್ಕೆ ಧನ್ಯವಾದಗಳು. ಇಂತಹ ಕಾರ್ಯಕ್ಕೆ ಎಲ್ಲರೂ ಮುಂದಾಗಬೇಕು ಎಂಬುದಾಗಿ ಡಾ.ಭುಜಂಗಶೆಟ್ಟಿಯವರು ಮನವಿ ಮಾಡಿದರು.
ಅಂದಹಾಗೇ ಬಹುತೇಕರ ಪ್ರಶ್ನೆ ಪುನೀತ್ ರಾಜ್ ಕುಮಾರ್ ಎರಡು ಕಣ್ಣುಗಳನ್ನು ನಾಲ್ವರಿಗೆ ಹೇಗೆ ಹಾಕೋಕೆ ಸಾಧ್ಯ ಎಂಬುದಾಗಿದೆ. ಆದ್ರೇ. ಒಂದೊಂದು ಕಣ್ಣಿನ ಕಾರ್ನಿಯಾದ ಮೇಲ್ಭಾಗ, ಅದರ ಕೆಳಭಾಗ ಎರಡು ಲೇಯರ್ ಗಳು ಹಾನಿಕೊಂಡಿರುವಂತ ರೋಗಿಗಳಿಗೆ ಒಂದೊಂದು ಭಾಗವನ್ನು ಶಸ್ತ್ರ ಚಿಕಿತ್ಸೆ ಮೂಲಕ ಅಳವಡಿಕೆ ಮಾಡಲಾಗಿದೆ. ಹೀಗೆ ಒಂದೊಂದು ಕಣ್ಣಿನಿಂದ ಎರಡು ಭಾಗಗಳನ್ನು ಆಧುನಿಕ ತಂತ್ರಜ್ಞಾನದಿಂದ ನಾಲ್ವರು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದಂತ ರೋಗಿಗಳಿಗೆ ಅಳವಡಿಸೋ ಮೂಲಕ ನಾಲ್ವರು ಅಂದರ ಭಾಳಿನಲ್ಲಿ ನಟ ಪುನೀತ್ ರಾಜ್ ಕುಮಾರ್ ಬೆಳಕಾಗಿದ್ದಾರೆ.