ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಅಜಾತಶತ್ರು. ಅಪ್ಪು ಅಂದರೆ ಕನ್ನಡ ಚಿತ್ರರಂಗದ ಪ್ರತಿಯೊಬ್ಬರಿಗೂ ಇಷ್ಟ. ಸದಾ ನಗು ನಗುತ್ತಲೇ ಎಲ್ಲರೊಂದಿಗೂ ಮಾತಾಡುತ್ತಿದ್ದ ಪುನೀತ್ ಕಂಡರೆ ಚಿತ್ರರಂಗಕ್ಕೂ ಅಷ್ಟೇ ಗೌರವ. ಇನ್ನು ಪುನೀತ್ ಹಾಗೂ ದರ್ಶನ್ ದೋಸ್ತಿ ಇಂದು ನಿನ್ನೆಯದಲ್ಲ. ಬಾಲ್ಯದಿಂದಲೂ ಇಬ್ಬರಿಗೂ ಒಡನಾಟವಿತ್ತು. ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಅಣ್ಣಾವ್ರ ಸಿನಿಮಾಗಳಲ್ಲಿ ನಟಿಸುತ್ತಿದ್ದರಿಂದ ಪರಿಚಯವಿತ್ತು. ದರ್ಶನ್ ನಾಯಕರಾಗಿ ಚಿತ್ರರಂಗಕ್ಕೆ ಕಾಲಿಟ್ಟಾಗ ಇಬ್ಬರ ಸ್ನೇಹ ಇನ್ನಷ್ಟು ಗಾಢವಾಗಿತ್ತು. ಮೇಲ್ನೋಟಕ್ಕೆ ದರ್ಶನ್ ಹಾಗೂ ಪುನೀತ್ ಕಾಂಪಿಟೇಟರ್ ಅಂತ ಎಲ್ಲರಿಗೂ ಅನಿಸುತ್ತಿತ್ತು. ಆದರೆ ದರ್ಶನ್ ಹಾಗೂ ಅಪ್ಪು ಇಬ್ಬರೂ ಸ್ನೇಹಿತರಂತೆ ಇದ್ದರು. ಇತ್ತೀಚೆಗೆ ಇಬ್ಬರ ಭೇಟಿ ಕಡಿಮೆ ಆಗಿದ್ದಿರಬಹುದು ಆದರೆ ಸೋದರರಂತೆ ಇದ್ದರು.
ಈ ಕಾರಣಕ್ಕೆ ಪುನೀತ್ ರಾಜ್‌ಕುಮಾರ್ ಅಗಲಿಕೆಯ ಸುದ್ದಿ ಕೇಳಿದ ಕೂಡಲೇ ದರ್ಶನ್ ತುಂಬಾನೇ ಡಿಸ್ಟರ್ಬ್ ಆಗಿದ್ದು ಕ್ರಾಂತಿ ಚಿತ್ರ ಚಿತ್ರೀಕರಣದಲ್ಲಿದ್ದ ದರ್ಶನ್‌ಗೆ ಅಪ್ಪು ಸುದ್ದಿ ತಿಳಿದಾಗ ಅಕ್ಷರಶಃ ಕುಸಿದು ಬಿದ್ದಿದ್ದರು.ತಕ್ಷಣವೇ ಚಿತ್ರೀಕರಣ ನಿಲ್ಲಿಸಿದ ದರ್ಶನ್ ರವರು ಆಸ್ಪತ್ರೆಯ ಬಳಿ ಓಡೋಡಿ ಬಂದವು ಪ್ರೀತಿಯ ಗೆಳೆಯ ತಂದುಡ್ಡು ಗುಡಿ ಕಣ್ಣೀರಿಟ್ಟು ದುಃಖ ತಡೆಯಲಾರದೆ ಮನೆಗೆ ಹಿಂತಿರುಗಿದರು. ನಗುವಿನ ಒಡೆಯ, ಮಗುವಿನ ಮನಸ್ಸಿನ ವ್ಯಕ್ತಿ,ಕಾಣದಂತೆ ಮಾಯಾವಾಗಿದ್ದಾರೆ. ಆದರೆ, ಅಪ್ಪು ನೆನಪಿನಂಗಳದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಇನ್ನು, ಎಲ್ಲರೊಂದಿಗೆ ಸಾಮಾನ್ಯರಂತೆ ಇರುತ್ತಿದ್ದ ವ್ಯಕ್ತಿ. ಬೆಳೆದದ್ದು ಕೂಡ ಸಾಮಾನ್ಯರಂತೆ ದೊಡ್ಮನೆಯ ಕೂಸದಾರೂ ಒಂದಷ್ಟು ಆದರ್ಶಗಳು,ಸಾಮಾಜಿಕ ಕಳಕಳಿಯ ಕೆಲಸಗಳಿಗೆ ಕೊರತೆ ಇರಲಿಲ್ಲ.
ಎಲ್ಲರೂ ಚೆನ್ನಾಗಿ ಇರಬೇಕು ಎಂದು ಬಯಸಿದ ವ್ಯಕ್ತಿ ಮಣ್ಣಲ್ಲಿ ಮಣ್ಣಾಗಿ ಹೋಗಿ ಬಿಟ್ಟರು. ದೇವರಿಗೆ ಬಲು ಇಷ್ಟ ಆಗಿರಬಹುದು, ಹಾಗಾಗಿ ಬಹುಬೇಗನೆ ಅಪ್ಪುವನ್ನು ಕಸಿದುಕೊಂಡು ಬಿಟ್ಟ ಎಂಬುದು ಒಮ್ಮೊಮ್ಮೆ ಅನಿಸುತ್ತದೆ.ದೊಡ್ಮನೆಯಲ್ಲಿ ಚಿನ್ನದ ಚಮಚ ಬಾಯಿಗೆ ಇಟ್ಟು ಬೆಳೆದರೂ ಕೂಡ, ಇವರಿಗೆ ಸ್ವಲ್ಪದ ಹಮ್ಮು ಬಿಮ್ಮು ಇರಲಿಲ್ಲ.ಇವರ ಸರಳವಾದ ವ್ಯಕ್ತಿತ್ವ ಹಾಗೂ ಇವರು ಮಾಡಿರುವ ಸಾಮಾಜಿಕ ಸೇವೆಗಳು, ಇವರ ಆದರ್ಶಗಳು ಎಂದಿಗೂ ಶಾಶ್ವತ ವಾಗಿದೆ.
ಅಂದಹಾಗೆ ಕಷ್ಟಗಳಿಗೆ ಅಂತ್ಯ ಕಾಣಿಸಬೇಕು ಎಂದು ಕನ್ನಡದ ಕೋಟ್ಯಧಿಪತಿ ಆಡಲು ಬರುವವರಿಗೆ ಅಪ್ಪು ಸೋತರೂ, ಗೆದ್ದರೂ ಚೆಕ್ ಬರೆದು ಕೊಡುತ್ತಿದ್ದರು ಎಂಬ ಸಂಗತಿ ತಿಳಿದು ಬಂದಿದೆ.ಇಲ್ಲಿಗೆ ಬಂದು ಹಣ ಗೆಲ್ಲಲು ಸಾಧ್ಯವಾಗದೆ ಇದ್ದರೆ ಅಂತಹ ಸಂದರ್ಭದಲ್ಲಿ ಅಪ್ಪು, ಚೆಕ್ ಬರೆದು ಕೊಡುತ್ತಿದ್ದು ಎಂಬ ಉದಾಹರಣೆ ಕೇಳಿ ಬಂದಿದೆ. ಪುನೀತ್ ರಾಜ್ಕುಮಾರ್ ನಟನೆಯೊಂದಿಗೆ ಸಾಕಷ್ಟು ಸಾಮಾಜಿಕ ಕೆಲಸಗಳಲ್ಲಿಯೂ ತೊಡಗಿಕೊಂಡಿದ್ದರು.
ಆದರೆ, ಅವರು ಮಾಡಿದ ಸಹಾಯವನ್ನು ಎಂದೂ, ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ನಿಧನ ಹೊಂದಿದ ನಂತರ ಅಂತಹ ಸಂಗತಿಗಳು ಬಯಲಿಗೆ ಬರುತ್ತಿವೆ. ಕನ್ನಡದ ಕೋಟ್ಯಧಿಪತಿ ಆಡಲು ಬಂದು ಸೋತವರಿಗೂ ಪುನೀತ್ ತಾವೇ ಚೆಕ್ ಬರೆದು ಕೊಡುತ್ತಿರುವ ಉದಾಹರಣೆ ಇದೆ ಎಂದು ಪುನೀತ್ ಮಾಜಿ ಮ್ಯಾನೇಜರ್ ವಜ್ರೇಶ್ವರಿ ಕುಮಾರ್ ಹೇಳಿದ್ದಾರೆ.