ದೇಶದಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ ಗಗನಕ್ಕೇರಿದ್ ನಂತರ ಹಲವಾರು ಸರಕುಗಳ ಬೆಲೆ ಕೂಡ ಮುಗಿಲು ಮುಟ್ಟಿದ್ದವು . ಇದರ ಬೆನ್ನಲ್ಲೇ ಸರಕಾರ ಎಚ್ಚೆತ್ತು ಜನರಿಗೆ ದೀಪಾವಳಿ ಗಿಫ್ಟ್ ಎಂದು ಸುಂಕ ಕಡಿಮೆ ಮಾಡಿ ಸಲ್ಪ ಮಟ್ಟಿನ ದರ ಇಳಿಸಿತು . ಇದೇನು ದೊಡ್ಡ ಮಟ್ಟದಲ್ಲಿ ಅಲ್ಲದಿದ್ದರೂ ಜನರ ಭಾರ ಸ್ವಲ್ಪ ಮಟ್ಟಿಗೆ ಇಳಿಸಿತ್ತು . ಆದ್ರೆ ಇದೀಗ ಸದ್ದಿಲ್ಲದೇ ಮತ್ತೊಂದು ಸಂಕಷ್ಟ ಜನರನ್ನು ಕಾಡುತ್ತಿದೆ. ಹೌದು ಕರೆಂಟ್ ಬಳಕೆದಾರರರಿಗೆ ಈ ಸುದ್ದಿ ನಿಜಕ್ಕೂ ಶಾಕ್ ನೀಡುತ್ತಿದೆ
ಹೆಚ್ಚುತ್ತಿರುವ ಹಣದುಬ್ಬರ ಸಾಮಾನ್ಯ ಜನರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪೆಟ್ರೋಲ್, ಡೀಸೆಲ್ʼನಿಂದ ಹಿಡಿದು ಆಹಾರ ಪದಾರ್ಥಗಳವರೆಗೆ ಎಲ್ಲವೂ ದುಬಾರಿಯಾಗ್ತಿದೆ. ಏತನ್ಮಧ್ಯೆ, ಸಾರ್ವಜನಿಕರು ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ಸಧ್ಯದಲ್ಲೇ ವಿದ್ಯುತ್ ಸುಂಕ ಹೆಚ್ಚಳವಾಗಲಿದೆ.ಹೌದು, ದೇಶದ ವಿದ್ಯುತ್ ಉತ್ಪಾದನಾ ಕಂಪನಿಗಳೊಂದಿಗೆ, ವಿದ್ಯುತ್ ವಿತರಣಾ ಕಂಪನಿಗಳು (discoms) ಭಾರಿ ನಷ್ಟವನ್ನ ಎದುರಿಸುತ್ತಿದ್ದು, ದೇಶದಲ್ಲಿ ವಿದ್ಯುತ್ ಕ್ಷೇತ್ರ ಕೆಟ್ಟ ಸ್ಥಿತಿಯಲ್ಲಿದೆ ಎನ್ನಲಾಗ್ತಿದೆ.
ಭಾರತವು ದೊಡ್ಡ ಪ್ರಮಾಣದಲ್ಲಿ ಕಲ್ಲಿದ್ದಲನ್ನ ಆಮದು ಮಾಡಿಸುತ್ತದೆ ಮತ್ತು ಕಲ್ಲಿದ್ದಲು ದೇಶದ ಪ್ರಮುಖ ಇಂಧನ ಮೂಲವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನದ ಬೆಲೆ ಹೆಚ್ಚಾದಾಗ ವಿದ್ಯುತ್ ಉತ್ಪಾದನಾ ವೆಚ್ಚವೂ ಹೆಚ್ಚಾಗುವದು ಸಹಜ. ಕಲ್ಲಿದ್ದಲು ಬಿಕ್ಕಟ್ಟಿನ ಘಟನೆಯ ನಂತ್ರ, ವಿದ್ಯುತ್ ಸಚಿವಾಲಯವು ಸ್ವಯಂಚಾಲಿತ ಪಾಸ್-ಥ್ರೂ ಮಾದರಿಗೆ ಸಂಬಂಧಿಸಿದಂತೆ ಸೂಚನೆಗಳನ್ನ ನೀಡಿದೆ.
ಸ್ವಯಂಚಾಲಿತ ಪಾಸ್-ಥ್ರೂ ಮಾದರಿಯ ಅಡಿಯಲ್ಲಿ, ಫ್ಯೂಚರ್ಸ್ ಒಪ್ಪಂದದ ನಂತ್ರ ಇಂಧನ ದರವು ಹೆಚ್ಚಾದ್ರೆ, ಸರ್ಕಾರದ ಡಿಸ್ಕಾಂಗಳ ಮೇಲೆ ಹೆಚ್ಚುವರಿ ಹೊರೆ ಇರುತ್ತೆ. ಆರಂಭಿಕ ಒಪ್ಪಂದಕ್ಕಿಂತ ಡಿಸ್ಕಾಂ ವಿದ್ಯುತ್ ಸ್ಥಾವರಗಳಿಗೆ ಹೆಚ್ಚಿನ ಬೆಲೆಯನ್ನ ಪಾವತಿಸಬೇಕಾಗುತ್ತದೆ. ಈ ಕ್ರಮವು ವಿದ್ಯುತ್ ಉತ್ಪಾದಿಸುವ ಕಂಪನಿಗಳ ಆರ್ಥಿಕ ಸ್ಥಿತಿಯನ್ನ ಸುಧಾರಿಸುತ್ತದೆ. ಯಾಕಂದ್ರೆ, ಅವ್ರಿಗೆ ಹೆಚ್ಚಿನ ಹಣ ಸಿಗುತ್ತೆ. ಆದ್ರೆ, ಸರ್ಕಾರದ ಈ ನಿರ್ಧಾರದಿಂದ, ವಿದ್ಯುತ್ ವಿತರಣಾ ಕಂಪನಿಗಳ ಆರ್ಥಿಕ ಸ್ಥಿತಿಯೂ ಹದಗೆಡಬಹುದು.
ಡಿಸ್ಕಾಂನ ಕೆಲಸವೆಂದ್ರೆ ವಿದ್ಯುತ್ ವಿತರಣೆ ಮತ್ತು ಪ್ರತಿಯಾಗಿ ಸಾರ್ವಜನಿಕರಿಂದ ಹಣವನ್ನ ಸಂಗ್ರಹಿಸುವುದು. ಇಂತಹ ಪರಿಸ್ಥಿತಿಯಲ್ಲಿ ಇಂಧನ ದರ ಹೆಚ್ಚಾದಾಗ ಡಿಸ್ಕಾಂಗಳು ವಿದ್ಯುತ್ ಖರೀದಿಸಲು ವಿದ್ಯುತ್ ಉತ್ಪಾದಿಸುವ ಕಂಪನಿಗಳಿಗೆ ಹೆಚ್ಚಿನ ದರ ತೆರಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಡಿಸ್ಕಾಂಗಳು ಗ್ರಾಹಕರಿಗೆ ಹೊರೆಯನ್ನ ರವಾನಿಸಬಹುದು ಮತ್ತು ವಿದ್ಯುತ್ ಸುಂಕವನ್ನ ಹೆಚ್ಚಿಸಬಹುದು.