ಪುನೀತ್ ರಾಜ್ ಕುಮಾರ್ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ‘ಅಪ್ಪು’ವಿನ ಆಸೆಯಂತೆಯೇ ಅಭಿಮಾನಿಗಳಿಗೆ, ಗಣ್ಯರಿಗೆ ದೊಡ್ಮನೆ ಕುಟುಂಬ ಸದಸ್ಯರು ಅನ್ನ ಸಂತರ್ಪಣೆ ಮಾಡಿದ್ದು, ಅಪ್ಪು ಫ್ಯಾನ್ಸ್ ಗೆ ಸ್ವತಃ ಪುನೀತ್ ಪತ್ನಿ ಅಶ್ವಿನಿ, ಸಹೋದರ ಶಿವರಾಜ್ ಕುಮಾರ್ ಊಟ ಬಡಿಸುವ ಮೂಲಕ ಅನ್ನದಾನ ಮಾಡಿದರು.ಅಭಿಮಾನಿಗಳಿಗೆ ಊಟ ಬಡಿಸಿ ಅರಮನೆ ಮೈದಾನದಲ್ಲಿ ಮಾತನಾಡಿದ ನಟ ಶಿವರಾಜ್ ಕುಮಾರ್, ಇಂಥದ್ದೊಂದು ಸಂದರ್ಭ ಈ ರೀತಿ ಬಂದಿದ್ದು ನೋವಾಗಿದೆ. ಈ ರೀತಿ ಅಪ್ಪು ಆಸೆ ನೆರವೇರಿಸುವಂತಾಯಿತಲ್ಲ ಎಂಬ ನೋವಿದೆ.
ಆದರೆ ಅಪ್ಪುವಿನ ಆಸೆಯಂತೆಯೇ ಅಭಿಮಾನಿಗಳಿಗೆ ಊಟ ಬಡಿಸುತ್ತೇವೆ ಎಂದರು. ಅಭಿಮಾನಿಗಳ ಪ್ರೀತಿಗೆ ಮಾತು ಬರುತ್ತಿಲ್ಲ. ಅದಕ್ಕೆ ಅವರನ್ನು ಅಭಿಮಾನಿ ದೇವರುಗಳು ಎಂದು ಕರೆಯುವುದು. ಅಪ್ಪು ಆಸೆಯನ್ನು ನಾವು ನೆರವೇರಿಸುತ್ತಿದ್ದೇವೆ. ನೂಕು ನುಗ್ಗಲು ಮಾಡದೇ ನಿಧಾನವಾಗಿ ಬಂದು ಎಲ್ಲರೂ ಊಟ ಮಾಡಬೇಕು. ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಗದ್ದಲವಾಗದಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದಾರೆ.
ಅಪ್ಪುನಂತ ತಮ್ಮನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ. ಬಲಗೈ ಮಾಡಿದ ಸಹಾಯ ಎಡಗೈಗೆ ಗೊತ್ತಾಗದಂತೆ ನೋಡಿಕೊಳ್ಳುತ್ತಿದ್ದ. ಅವನ ಒಳ್ಳೆಯ ಗುಣಗಳನ್ನು ನಾವು ಅನುಸರಿಸಬೇಕು ಎಂದು ಹೇಳಿದರು.ಈ ವೇಳೆ ಮಾತನಾಡಿದ ರಾಘವೇಂದ್ರ ರಾಜಕುಮಾರ್, ಜನರಿಗೆ ಊಟ ಹಾಕಬೇಕು ಎಂಬುದು ಅಪ್ಪು ಕನಸು. ಅಭಿಮಾನಿಗಳು ನಿಧಾನವಾಗಿ ಬಂದು ಊಟ ಮಾಡಿ ಹೋಗಬೇಕು. ಆತನ ಒಳ್ಳೆಯತನವನ್ನು ನಾವೆಲ್ಲರೂ ಫಾಲೋಮಾಡೋಣ ಎಂದು ಹೇಳಿದರು.ಇದೇ ವೇಳೆ ಶಿವರಾಜ್ ಕುಮಾರ್ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು, ರಕ್ತದಾನ ಮಾಡಿದರು.
ಇತ್ತ ರಾಘಣ್ಣ ನಿನ್ನ ಚಿಂತನೆಗಳಿಂದಾಗಿ ಎಂದಿಗೂ ನಮ್ಮ ಜೊತೆ ಇರುವೆ ಎಂದು ಸಹೋದರ ಪುನೀತ್ ರಾಜಕುಮಾರ್ ಅವರನ್ನು ನೆನೆದು ರಾಘವೇಂದ್ರ ರಾಜಕುಮಾರ್ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ.
ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ದೂರವಾಗಿ ಇಂದಿಗೆ 12 ದಿನಗಳಾಗಿವೆ. ಅಭಿಮಾನಿಗಳ ನೋವು ಕಡಿಮೆಯಾಗಿಲ್ಲ.ಯಾರಿಗೂ ಗೊತ್ತಾಗದಂತೆ ಮಾಡಿದ ಸಮಾಜಸೇವೆ ಅಪ್ಪು ಅವರ ನಿಧನದ ನಂತರ ಗೊತ್ತಾಗಿ ಅಪ್ಪು ವ್ಯಕ್ತಿತ್ವವನ್ನು ಜನರೆಲ್ಲ ಕೊಂಡಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ರಾಘವೇಂದ್ರ ರಾಜಕುಮಾರ್, ತಮ್ಮ ಪುನೀತ್ ಅವರನ್ನು ನೆನೆದು ಫೇಸ್ಬುಕ್ ನಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ.
ಇನ್ನು ಅಭಿಮಾನಿಗಳ ಅನ್ನಸಂತರ್ಪಣಗೆ ರಾಜ್ ಕುಟುಂಬ ಕೋಟಿಗಟ್ಟಲೆ ಹಣ ಜೆಕರ್ಚು ಮಾಡಿದ ಸಂಗತಿ ಎಲ್ಲರಿಗು ತಿಳಿದೇ ಇದೆ . ಆದರೆ ಹಲವರ ಮನಸ್ಸಿನಲ್ಲಿ ಈ ಅನ್ನಸಂತರ್ಪಣಾಗೆ ಹಣ ಕೊಟ್ಟಿದ್ದು ಅಶ್ವಿನಿಯವರ ಅಥವಾ ಶಿವಣ್ಣನನ ಅನ್ನುವ ಪ್ರಶ್ನೆ ಕಾಡಿತ್ತು. ಇದಕ್ಕೆ ಉತ್ತರ ಕೊನೆಗೂ ಸಿಕ್ಕಿದೆ . ಈ ಕಾರ್ಯಕ್ಕೆ ಇಡೀ ರಾಜ್ ಕುಟುಂಬವೇ ಕೈ ಜೋಡಿಸಿ ಅಣ್ಣ ಸಂತರ್ಪಣೆ ಮಾಡಿದೆ ಎನ್ನವ ಸಂಗತಿ ಹೊರಬಿದ್ದಿದೆ.