ಅಸಂಖ್ಯಾತ ಅಭಿಮಾನಿಗಳ ಮನದಲ್ಲಿ ‘ರಾಜಕುಮಾರ’ನಂತೆ ಮೆರೆದಿದ್ದ ಕರುನಾಡಿನ ‘ವೀರ ಕನ್ನಡಿಗ’, ಸ್ಯಾಂಡಲ್ವುಡ್ನ ‘ಪವರ್ಸ್ಟಾರ್’, ಕನ್ನಡಿಗರ ಪ್ರೀತಿಯ ಅಪ್ಪು ನಮ್ಮನ್ನಗಲಿ ಇಂದಿಗೆ ಐದು ದಿನಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ರಾಜ್ ಕುಟುಂಬ ಅಪ್ಪು ಸಮಾಧಿಗೆ 5ನೇ ದಿನದ ಹಾಲು-ತುಪ್ಪ ಕಾರ್ಯ ನೇರವೇರಿಸಿದೆ.ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಕಂಠೀರವ ಸ್ಟುಡಿಯೋಗೆ ತೆರಳಿದ ರಾಜ್ ಕುಟುಂಬ ಅಪ್ಪು ಸಮಾಧಿಗೆ ಹಾಲು-ತುಪ್ಪ ಬಿಡುವ ಕಾರ್ಯ ನೆರವೇರಿಸಿದೆ. ಪುನೀತ್ಗೆ ತುಂಬಾ ಇಷ್ಟ ಅಂತಾ ಇಡ್ಲಿ, ಮುದ್ದೆ ಮತ್ತು ನಾಟಿಕೋಳಿ ಸಾಂಬರ್ ಅನ್ನು ಮಾಡಿಕೊಂಡು ಬಂದಿರುವ ಸಂಬಂಧಿಕರು ಅದನ್ನು ಅಪ್ಪು ಸಮಾಧಿಯ ಮೇಲಿಟ್ಟು ಪೂಜೆ ಸಲ್ಲಿಸಿದ್ದಾರೆ.
ಅಪ್ಪುಗೆ ಇಷ್ಟವಾದ ಇನ್ನಿತರ ತಿಂಡಿಗಳನ್ನು ಮಾಡಿಕೊಂಡು ಬಂದು ಎಡೆ ಇಟ್ಟಿದ್ದಾರೆ.ಇಡೀ ರಾಜ್ ಕುಟುಂಬವೇ ಹಾಲು-ತುಪ್ಪ ಕಾರ್ಯದಲ್ಲಿ ಪಾಲ್ಗೊಂಡಿದ್ದು, ಪೂಜೆ ಸಲ್ಲಿಸಿದ್ದಾರೆ. ಬಹುಬೇಗನೇ ಪುನೀತ್ರನ್ನು ಕಳೆದುಕೊಂಡ ದುಃಖದಲ್ಲಿರುವ ಕಟುಂಬವೂ ಶೋಕ ಸಾಗರದಲ್ಲಿ ಮುಳುಗಿದ್ದು, ಅಪ್ಪು ನೆನೆದು ಕಣ್ಣೀರಾಕುತ್ತಿದೆ. ಚಿತ್ರರಂಗದ ಅನೇಕ ಗಣ್ಯರು ಕೂಡ ಕಂಠೀರವ ಸ್ಟುಡಿಯೋಗೆ ಆಗಮಿಸಿದ್ದು, ಅಪ್ಪು ಸಮಾಧಿಗೆ ಪೂಜೆ ಸಲ್ಲಿಸುತ್ತಿದ್ದಾರೆ.
ಇದರ ಬೆನ್ನಲ್ಲೇ ಚಿತ್ರರಂಗಕ್ಕೆ ಮತ್ತೊಂದು ಆಘಾತ ಎದುರಾಗಿದೆ. ದೂರದರ್ಶನ (television) ಮತ್ತು ಚಲನಚಿತ್ರ ನಟ ಯೂಸುಫ್ ಹುಸೇನ್ ಅವರು ಇಂದು ಬೆಳಿಗ್ಗೆ ಕೊನೆಯುಸಿರೆಳೆದರು. ಚಲನಚಿತ್ರ ನಿರ್ಮಾಪಕ (film producer) ಹನ್ಸಲ್ ಮೆಹ್ತಾ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಮಾವನ ಕುರಿತು ಬರೆದು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಅವರ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ.ಯೂಸುಫ್ ಹುಸೇನ್ ಹಿಂದಿ ದೂರದರ್ಶನ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಅನೇಕ ದಶಕಗಳ ಕಾಲ ಕೆಲಸ ಮಾಡಿದರು. ಅವರು ಹಲವಾರು ಯೋಜನೆಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದರು. ರಯೀಸ್, ಧೂಮ್ 2, ದಿಲ್ ಚಾಹ್ತಾ ಹೈ, ರಾಜ್, ಹಜಾರೋನ್ ಖ್ವಾಯ್ಶೆನ್ ಐಸಿ, ಧೂಮ್, ಶಾಹಿದ್, OMG: ಓ ಮೈ ಗಾಡ್, ಕ್ರಿಶ್ 3, ದಬಾಂಗ್ 3, ದಿ ತಾಷ್ಕೆಂಟ್ ಫಿಲ್ಮ್ಸ್, ಜಿಲೇಬಿ ಸೇರಿದಂತೆ ಅವರ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ.
ಅವರು ಮುಲ್ಲಾ ನಸ್ರುದ್ದೀನ್, ಕುಂಕುಮ್: ಏಕ್ ಪ್ಯಾರಾ ಸಾ ಬಂಧನ್, ಶ್ ಕೋಯಿ ಹೈ, ಸಿ.ಐ.ಡಿ. ತುಮ್ ಬಿನ್ ಜಾನೂನ್ ಕಹಾನ್ ಇತ್ಯಾದಿ ಜನಪ್ರಿಯ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು.ಬಾಲಿವುಡ್ ಹಿರಿಯ ನಟ ಯೂಸುಫ್ ಹುಸೇನ್ ನಿಧನರಾಗಿದ್ದಾರೆ. ಚಿತ್ರ ನಿರ್ಮಾಪಕ ಹನ್ಸಲ್ ಮೆಹ್ತಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಜೊತೆಗೆ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಈ ಮಾಹಿತಿಯನ್ನು ನೀಡಿದ್ದಾರೆ. ಯೂಸುಫ್ ಖಾನ್ ತಮ್ಮ ನಟನಾ ವೃತ್ತಿಜೀವನದಲ್ಲಿ ಅನೇಕ ಚಲನಚಿತ್ರಗಳು ಮತ್ತು ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ.