ಚೆಂದನವನದ ಎಲ್ಲರ ಮೆಚ್ಚಿನ ನಟನಾಗಿ ಮಿಂಚುತ್ತಿದ್ದ ಪುನೀತ್ ರಾಜ್ಕುಮಾರ್ ರವರು ಇದೀಗ ಇಹಲೋಕ ತ್ಯಜಿಸಿ 30 ದಿನ ಕಳೆದಿದ್ದು ಅವರಿಲ್ಲ ಎಂಬ ಕಹಿ ಸತ್ಯವನ್ನು ಒಪ್ಪಿಕೊಳ್ಳುವುದು ನಿಜಕ್ಕೂ ಕಷ್ಟವಾಗುತ್ತಿದೆ. ಹೌದು ಅ.29ರಂದು ಇಡೀ ಕರುನಾಡಿಗೆ ಸಿಡಿಲಿನಂತಹ ಸುದ್ದಿ ಕೇಳಿಬಂದಿದ್ದು ಹೃದಯಾಘಾತದಿಂದ ಪುನೀತ್ ರಾಜ್ಕುಮಾರ್ ಇನ್ನಿಲ್ಲ ಎಂಬ ಮಾಹಿತಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಹೌದು ಆ ಕರಾಳ ದಿನ ಎದುರಾಗಿ ಇಂದಿಗೆ (ನ.29) ಒಂದು ತಿಂಗಳು ಕಳೆದಿದ್ದು ಎಲ್ಲರಿಗೂ ಅಪ್ಪು ಪ್ರೀತಿಪಾತ್ರರಾಗಿದ್ದರು.
ಚಿತ್ರರಂಗದಲ್ಲಿ ಅವರು ಅಜಾತಶತ್ರು ಆಗಿದ್ದರು. ಯಾರ ಜೊತೆಗೂ ಕಿರಿಕ್ ಮಾಡಿಕೊಂಡಿರಲಿಲ್ಲ. ಅವರ ಅಗಲಿಕೆ ನಂತರ ಕೆಲವು ಮಹತ್ವದ ಘಟನೆಗಳು ನಡೆದಿದ್ದು ಅಪ್ಪು ಅಗಲಿಕೆಯಿಂದ ಲಕ್ಷಾಂತರ ಮಂದಿಯ ಬದುಕಿನ ಮೇಲೆ ಪರಿಣಾಮ ಬೀರಿದ್ದು ಕೆಲವರು ಜಿಮ್ ತೊರೆದಿದ್ದಾರೆ. ಅನೇಕರು ಹೃದಯದ ತಪಾಸಣೆಗೆ ಮುಗಿ ಬಿದ್ದಿದ್ದಾರೆ. ನೇತ್ರದಾನಕ್ಕೆ ಲಕ್ಷಾಂತರ ಜನರು ಪ್ರತಿಜ್ಞೆ ಮಾಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಭೂತಾಯಿಯ ಮಡಿಲು ಸೇರಿ ಇಪ್ಪತ್ತಾಮೂರು ದಿನಗಳು ಕಳೆದರೂ ಕೂಡ ಜನರ ಮನಸ್ಸಿನಿಂದ ಇನ್ನೂ ಮಾಸಿಲ್ಲ ಎನ್ನಬಹುದು. ಅಪ್ಪು ಎಂದರೆ ಹಸಿಗೂಸಿನಿಂದ ಹಿಡಿದು ಹಿರಿಯರವರೆಗೂ ಕೂಡ ಬಹಳ ಅಚ್ಚುಮೆಚ್ಚು.
ಸದ್ಯ ಇದೀಗ ಪುನೀತ್ ರಾಜ್ ಕುಮಾರ್ ಅವರ ದೀಡೀರ್ ಅಗಲಿಕೆಯಿಂದ ಕೋಟ್ಯಂತರ ಅಭಿಮಾನಿಗಳಿಗೆ ದೊಡ್ಡ ಮಟ್ಟದಲ್ಲಿ ಆಘಾತವಾಗಿದ್ದು ಪುನೀತ್ ರಾಜ್ ಕುಮಾರ್ ರವರ ಪ್ರೀತಿಯ ಸಹೋದರ ಶಿವರಾಜ್ ಕುಮಾರ್ ರವರು ಬಹಳ ನೊಂದುಕೊಂಡಿದ್ದಾರೆ. ಹೌದು ತಮ್ಮ ಪ್ರೀತಿಯ ಸಹೋದರ ಇನ್ನಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳುವುದು ಶಿವಣ್ಣನಿಗೆ ಕಷ್ಟವಾಗುತ್ತಿದ್ದು ಇತ್ತೀಚಿಗೆ ನಡೆದ ಪುನೀತ ನಮನ ಕಾರ್ಯಕ್ರಮದ ಆರಂಭದಿಂದಲೂ ಶಿವರಾಜ್‌ಕುಮಾರ್ ಮಂಕಾಗಿಯೇ ಇದ್ದರು. ಅದರಲ್ಲೂ ತಮ್ಮನ ಕುರಿತಾದ ವಿಡಿಯೋ ಪ್ರದರ್ಶನವಾಗುತ್ತಿದ್ದಂತೆ ಶಿವಣ್ಣ ಬಿಕ್ಕಿ ಬಿಕ್ಕಿ ಅತ್ತಿದ್ದು ಆ ನಂತರ ಕಾರ್ಯಕ್ರಮದಲ್ಲಿ ಮಾತನಾಡುವಾಗಲೂ ಶಿವಣ್ಣನಿಗೆ ದುಃಖ ತಡೆಯಲಾಗಲಿಲ್ಲ.
ಹೌದು ಪುನೀತ್ ರವರು ಆಸ್ಪತ್ರೆಯಲ್ಲಿ ಅಗಲಿದ ಬಳಿಕ ಅವರ ಮೊಬೈಲನ್ನು ಅಶ್ವಿನಿ ಅವರ ಕೈಗೆ ಕೋಡಲಾಗಿತ್ತು ಈ ಸನ್ನಿವೇಶವನ್ನು ಕೂಡ ವೀಕ್ಷಿಸಿರಲಿಲ್ಲ.ಕೊನೆಯ ವಿಧಿವಿಧಾನಗಳೆಲ್ಲ ಮುಗಿದಮೇಲೆ ಮನೆಗೆ ಹೋದ ನಂತರ ಅಶ್ವಿನಿಯವರು ಪುನೀತ್ ರವರ ಮೊಬೈಲಲ್ಲಿರುವ ರಹಸ್ಯಗಳನ್ನು ನೋಡಿ ಶಾಕ್ ಆಗಿದ್ದಾರೆ. ಹೌದು ಯಾಕೆಂದರೆ ಪುನೀತ್ ರವರ ಟ್ರಾನ್ಸಾಕ್ಷನ್ ಗಳು ಟ್ರಸ್ಟ್ ಗಳಿಗೆ ಮಾಡಿರುವ ಸಹಾಯಗಳು ಬೇರೆ ಬೇರೆ ಶಾಲೆಗಳಿಗೆ ಹಾಗೂ ಅನಾಥಾಶ್ರಮಗಳಿಗೆ ಕಳಿಸಿರುವಂತಹ ಅಕೌಂಟ್ ಡೀಟೇಲ್ಸ್ ಗಳನ್ನ ನೋಡಿ ನಿಜಕ್ಕೂ ಅಚ್ಚರಿಗೊಂಡಿದ್ದಾರೆ. ಯಾಕೆಂದರೆ ಈ ವಿಚಾರಗಳು ಸ್ವತಃ ಅಶ್ವಿನಿ ಅವರ ಬಳಿಯೂ ಕೂಡ ಪುನೀತ್ ಹೇಳಿಕೊಂಡಿರಲಿಲ್ಲ. ಸದ್ಯ ಇದನ್ನೆಲ್ಲ ನೋಡಿದ ಅಶ್ವಿನಿಯವರು ಖುಷಿಪಡುವುದರ ಜೊತೆಗೆ ಕಣ್ಣೀರು ಹಾಕಿದ್ದಾರೆ.