ಐಕಾನ್ ಸ್ಟಾರ್ ಅಲ್ಲು ಅರ್ಜುನ್ , ರಶ್ಮಿಕಾ ಮಂದಣ್ಣ , ಡಾಲಿ ಧನಂಜಯ್ ಅಭಿನಯದ ಪುಷ್ಪ ಸಿನಿಮಾ 3ನೇ ವಾರವೂ ದೇಶದ್ಯಂತ , ಭರ್ಜರಿ ಪ್ರದರ್ಶನ ಕಾಣ್ತಿದ್ದು , ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ಈ ಸಿನಿಮಾ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ತಿದೆ. ಅದ್ರಲ್ಲೂ ಮೊದಲ ಬಾರಿಗೆ ಸಮಂತಾ ಈ ಸಿನಿಮಾದಲ್ಲಿ ಐಟಂ ಸಾಂಗ್ ಗೆ ಹೆಜ್ಜೆ ಹಾಕಿದ್ದು , ಪ್ರೇಪ್ಷರನ್ನ ಬೆರಗಾಗಿಸಿದ್ದಾರೆ.. ವರ್ಲ್ಡ್ ವೈಡ್ ಸಿನಿಮಾದ ಗಳಿಕೆ 250 ಕೋಟಿಯತ್ತ ಸಾಗ್ತಿದೆ. ಅಂದ್ಹಾಗೆ ಇಷ್ಟು ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸಿರುವ ನಟರ ಸಂಭಾವನೆ ಎಷ್ಟಿರಬಹುದು ಅನ್ನೋ ಕ್ಯೂರಿಯಾಸಿಟಿ ಸಹಜವಾಗಿಯೇ ಪ್ರೇಕ್ಷಕರನ್ನ ಕಾಡ್ತಿರುತ್ತೆ.
ಸುಮಾರು 250 ಕೋಟಿ ಬಜೆಟ್ ನ ಈ ಸಿನಿಮಾದಲ್ಲಿ ‘ಪುಷ್ಪರಾಜ್’ ಪಾತ್ರದಲ್ಲಿ ನಟಿಸೋದಕ್ಕೆ ಅಲ್ಲು ಅರ್ಜುನ್ ಅಂದಾಜು 20 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಇನ್ನೂ ರಶ್ಮಿಕಾ ಮಂದಣ್ಣ ಸಂಭಾವನೆ ಕೇಳಿದ್ರೆ ತಲೆತಿರುಗುತ್ತೆ , ಮೂಲಗಳ ಪ್ರಕಾರ ರಶ್ಮಿಕಾ ಸುಮಾರು 7 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರಂತೆ.. ಆದ್ರೆ ಇದೂ ಎರೆಡೂ ಚಾಪ್ಟರ್ ಗಳಿಗೂ ಸೇರಿ ಎನ್ನಲಾಗಿದೆ.. ಇತ್ತ ಸಮಂತಾ ಕೇವಲ ಒಂದು ಹಾಡಿಗೆ ಹೆಜ್ಜೆ ಹಾಕಲು ಬರೋಬ್ಬರಿ 1.5 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಇನ್ನೂ ಸಿನಿಮಾದ ಹಾರ್ಟ್ ಬೀಟ್ ಡೈರೆಕ್ಟರ್ ಸುಕುಮಾರ್ ಅವರಿಗೆ ಬರೋಬ್ಬರಿ 25 ಕೋಟಿ ರೂಪಾಯಿ ಸಂಭಾವನೆ ಸಿಕ್ಕಿದೆ ಎನ್ನಲಾಗಿದೆ.
ರಶ್ಮಿಕಾ ಮಂದಣ್ಣ ಅವರು ಕನ್ನಡದ ಸೂಪರ್ ಹಿಟ್ ಸಿನಿಮಾ ಕಿರಿಕ್ ಪಾರ್ಟಿಯ ಮೂಲಕ ಭರ್ಜರಿ ಬ್ರೇಕ್ ಪಡೆದುಕೊಂಡಿದ್ದು ಆನಂತರ ಅವರಿಗೆ ಕನ್ನಡದಲ್ಲೇ ಪುನೀತ್ ರಾಜ್‌ಕುಮಾರ್ ಗಣೇಶ್ ಹಾಗೂ ದರ್ಶಮ್ ನಂತಹ ಸ್ಟಾರ್ ನಟರ ಜೊತೆ ನಟಿಸುವ ಅವಕಾಶ ಪಡೆದುಕೊಳ್ಳುತ್ತಾರೆ. ಅಷ್ಟರಲ್ಲಾಗಲೇ ಅವರಿಗೆ ಟಾಲಿವುಡ್‌ನಲ್ಲಿ ಅವಕಾಶದ ಬಾಗಿಲು ತೆರೆದಿದ್ದು ಸದ್ಯ ತೆಲುಗು ಚಿತ್ರರಂಗದ ಸ್ಟಾರ್ ನಟಿಯಾಗಿ ರಶ್ಮಿಕಾ ಮಿಂಚುತ್ತಿದ್ದಾರೆ. ಅವರಿಗೆ ಅಲ್ಲಿ ಬಹಳಾನೇ ಬೇಡಿಕೆ ಇದೆ. ಕೇವಲ 5-6 ವರ್ಷಗಳ ಹಿಂದೆ ರಶ್ಮಿಕಾ ಮಂದಣ್ಣ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ.
ಆದರೆ ಇಂದು ಅವರು ನ್ಯಾಷನಲ್ ಕ್ರಶ್ ಎನಿಸಿಕೊಳ್ಳುವ ಮಟ್ಟಕ್ಕೆ ಬೆಳೆದುನಿಂತಿದ್ದಾರೆ. ಹಾಗಂತ ಅವರ ಈ ಸಾಧನೆಯ ಹಾದಿ ಸುಗಮವಾಗಿ ಇರಲಿಲ್ಲ. ಅನೇಕ ಸವಾಲುಗಳನ್ನು ಸ್ವೀಕರಿಸಿ ಅವರು ಬಣ್ಣದ ಲೋಕದಲ್ಲಿ ಯಶಸ್ವಿ ಆಗಿದ್ದಾರೆ. ಹಲವು ವಿವಾದಗಳನ್ನು ಎದುರಿಸಿ ತಮ್ಮನ್ನು ತಾವು ಸಾಬೀತು ಪಡಿಸಿದ್ದಾರೆ.ಇದೀಗ ದಕ್ಷಿಣ ಭಾರತದ ನಟಿಯರನ್ನೇ ಬೀಟ್ ಮಾಡಿ ನಂಬರ್ 1 ಸ್ಥಾನ ಅಲಂಕರಿಸಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ಅವರು ಬಾಲಿವುಡ್‌ಗೂ ಕೂಡ ಎಂಟ್ರಿ ಕೊಟ್ಟಿದ್ದಾರೆ. ಈ ಮಧ್ಯೆ ಸಂಭಾವನೆ ಕೂಡ ಸಖತ್ ಜಾಸ್ತಿ ಆಗಿದೆ. ಸದ್ಯ ರಶ್ಮಿಕಾ ಕೈಯಲ್ಲಿ ಸಿಕ್ಕಾಪಟ್ಟೆ ಸಿನಿಮಾಗಳಿವೆ. ಅವರ ಕಾಲ್‌ಶೀಟ್ ಸಿಗಬೇಕೆಂದರೆ, ನಿರ್ಮಾಪಕರು ಕಾಯಬೇಕಾದ ಪರಿಸ್ಥಿತಿ ಇದೆ.
ಹೌದು ಈಗಾಗಲೇ ರಶ್ಮಿಕಾ ಮಂದಣ್ಣ ಅವರಿಗೆ ಭಾರಿ ಜನಪ್ರಿಯತೆ ಸಿಕ್ಕಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿಯೂ ಕೂಡ ದೊಡ್ಡ ಹವಾ ಕ್ರಿಯೇಟ್ ಮಾಡಿದ್ದಾರೆ. ಹೌದು ಇನ್‌ಸ್ಟಾಗ್ರಾಮ್‌ನಲ್ಲಿ ರಶ್ಮಿಕಾಗೆ 19.4 ಮಿಲಿಯನ್ ಫಾಲೋವರ್ಸ್ ಗಳಿದ್ದು ಈವರೆಗೂ ಕಾಜಲ್ ಅಗರ್ವಾಲ್ ಮೊದಲ ಸ್ಥಾನದಲ್ಲಿದ್ದರು. ಹೌದು ಕಾಜಲ್ ಅವರಿಗೆ 1.9 ಮಿಲಿಯನ್ ಫಾಲೋವರ್ಸ್ ಗಳಿದ್ದು ಇದೀಗ ರಶ್ಮಿಕಾ 1.94 ಕೋಟಿ ಬೆಂಬಲಿಗರನ್ನು ಪಡೆದುಕೊಂಡು ಮೊದಲ ಸ್ಥಾನಕ್ಕೆ ಏರಿದ್ದಾರೆ. ಆ ಮೂಲಕ ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿರುವ ನಟಿ ಎಂಬ ಕೀರ್ತಿಗೆ ರಶ್ಮಿಕಾ ಪಾತ್ರರಾಗಿದ್ದಾರೆ.