ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಇದೀಗ ಪೆಟ್ರೋಲ್ ಬಳಿಕ ಟೊಮೊಟೊ (Tomato) ಬೆಲೆ ಶತಕದಾಟಿದೆ. ಬೆಂಗಳೂರಿನಲ್ಲಿ 1 ಕೆಜಿ ಟೊಮೊಟೊ ಬೆಲೆ 100 ರೂ. ಗಡಿ ದಾಟಿದೆ.ಗಡಿ ದಾಟಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ 1 ಕೆ.ಜಿ ಬೆಲೆ 98-100 ರೂ. ಮತ್ತು ಹಾಪ್‌ಕಾಮ್ಸ್ ಮಳಿಗೆಗಳಲ್ಲಿ 93 ರೂ. ಗೆ ಏರಿಕೆಯಾಗಿದೆ.ಭಾರೀ ಮಳೆಯಿಂದಾಗಿ ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಟೊಮೊಟೊ ಬೆಳೆ ಹಾನಿಯಾಗಿದೆ. ಹೀಗಾಗಿ ಟೊಮೊಟೊ ಬೆಲೆ ಏರಿಕೆಯಾಗುತ್ತಿದೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಬೀನ್ಸ್, ಈರುಳ್ಳಿ, ಟೊಮೊಟೊ, ಹೀರೇಕಾಯಿ, ತೊಗರಿ ಕಾಯಿ, ಬೆಂಡೆಕಾಯಿ, ಬದನೆಕಾಯಿ ಸೇರಿದಂತೆ ಕೆಲ ತರಕಾರಿಗಳ ಬೆಲೆ 100 ರೂ ಗಡಿ ದಾಟಿದೆ. ಕ್ಯಾಪ್ಸಿಕಾಂ, ತೊಂಡೆಕಾಯಿ, ಕ್ಯಾರೇಟ್, ನುಗ್ಗೇಕಾಯಿ ಬೆಲೆ, ಸೊಪ್ಪಿನ ದರಗಳಲ್ಲಿಯೂ ಏರಿಕೆ ಕಂಡಿವೆ.ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆಯ ಶಾಕ್ ಎದುರಾಗಿದ್ದು, ಮುಂದಿನ ವರ್ಷದಿಂದ ಜವಳಿ, ಪಾದರಕ್ಷೆಗಳು, ಉಡುಪುಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ( Heavy Rain in Karnataka ) ಒಂದೆಡೆ ಜನ ಜೀವನ ಅಸ್ತವ್ಯಸ್ಥಗೊಂಡಿದ್ದರೇ, ಮತ್ತೊಂದೆಡೆ ರೈತರು ಬೆಳೆದಂತ ಬಳೆ ನೀರು ಪಾಲಾಗಿದೆ. ಸಮಯಕ್ಕೆ ಸರಿಯಾಗಿ ಕೊಯ್ಲಿಗೆ ಬಂದ ಬೆಳೆ ನೀರಲ್ಲಿ ಮುಳುಗಿ ಹೋಗಿದೆ. ಇದೇ ಸಂದರ್ಭದಲ್ಲಿ ಸೊಪ್ಪು, ತರಕಾರಿ ಸಮಯಕ್ಕೆ ಸರಿಯಾಗಿ ಪೂರೈಕೆಯಾಗದೇ, ಬೆಲೆಗಳ ದರದಲ್ಲಿ ( Vegetables Price Hike ) ಹೆಚ್ಚಳ ಕಂಡಿದೆ. ಈ ಮೂಲಕ ಜನಸಾಮಾನ್ಯರ ಜೇಬಿಗೆ ಬೆಲೆ ಏರಿಕೆಯ ಬರೆ ಬಿದ್ದಿದೆ.
ಇದೇ ಕಾರಣದಿಂದಾಗಿ ಬೆಂಗಳೂರಿನಲ್ಲಿ ಬೀನ್ಸ್, ಈರುಳ್ಳಿ, ಟೊಮ್ಮಾಯೋ, ಹೀರೇಕಾಯಿ, ತೊಗರಿ ಕಾಯಿ, ಬೆಂಡೆಕಾಯಿ, ಬದನೆಕಾಯಿ ಸೇರಿದಂತೆ ಕೆಲ ತರಕಾರಿಗಳ ಬೆಲೆ 100 ರೂ ಗಡಿ ದಾಟಿದೆ. ಕ್ಯಾಪ್ಸಿಕಾಂ, ತೊಂಡೆಕಾಯಿ, ಕ್ಯಾರೇಟ್, ನುಗ್ಗೇಕಾಯಿ ಬೆಲೆ, ಸೊಪ್ಪಿನ ದರಗಳಲ್ಲಿಯೂ ಏರಿಕೆ ಕಂಡಿವೆ.ಕಾರ್ತೀಕ ಮಾಸದ ಹಿನ್ನಲೆಯಲ್ಲಿ ಎಲ್ಲೆಡೆ ಮದುವೆ, ಗೃಹಪ್ರವೇಶ, ನಾಮಕರಣದಂತ ಕಾರ್ಯಮಗಳು ನಡೆಯುತ್ತಿವೆ. ಬೇಡಿಕೆಯಷ್ಟು ಸೊಪ್ಪು, ತರಕಾರಿ ಮಳೆಯಿಂದಾಗಿ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಆಗದೇ ಇರೋದೆ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.
ಇನ್ನೊಂದು ಶಾಕ್ ಎಂದರೆ ಕೇಂದ್ರೀಯ ಪರೋಕ್ಷ ತೆರಿಗೆಗಳ ಮಂಡಳಿಯು ಸರಕು ಮತ್ತು ಸೇವಾ ತೆರಿಗೆ ದರವನ್ನು ಶೇ 5ರಿಂದ ಶೇ 12ಕ್ಕೆ ಹೆಚ್ಚಿಸಿದೆ ಹೀಗಾಗಿ 2022 ರ ಜನವರಿ 1 ರಿಂದ ಜವಳಿ, ಪಾದರಕ್ಷೆಗಳು, ಉಡುಪುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.ಜಿಎಸ್ಟಿ ಸಮಿತಿಯು ತನ್ನ ಸೆಪ್ಟೆಂಬರ್ ಸಭೆಯಲ್ಲಿ ಜವಳಿ ಮತ್ತು ಪಾದರಕ್ಷೆಗಳಲ್ಲಿನ ಇನ್ವರ್ಟೆಡ್ ಸುಂಕ ರಚನೆಯನ್ನು ಸರಿಪಡಿಸಲು ತೀರ್ಮಾನ ಮಾಡಿತು. ಇದು ಜನವರಿ 1, 2022ರಂದು ಜಾರಿಗೆ ಬರಲಿದೆ ಎಂದು ಹೇಳಿದೆ.