ಕತ್ರಿನಾ ಕೈಫ್ ಬಾಲಿವುಡ್ ನಟ ವಿಕ್ಕಿ ಕೌಶಲ್ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಾರೆ ಎನ್ನುವ ಗುಸುಗುಸು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿತ್ತು.ಇದೆಲ್ಲವೂ ಇದೀಗ ಮದುವೆವರೆಗೂ ಬಂದು ತಲುಪಿದೆ. ಹೌದು,ಅಂದಹಾಗೆ, ಕತ್ರಿನಾ ಕೈಫ್ ಅವರು ವಿಕ್ಕಿ ಕೌಶಲ್ ನಟನೆಯನ್ನು ನೋಡಿ ಮೆಚ್ಚಿಕೊಂಡಿದ್ದರು. ಅವರ ಜತೆ ನಟಿಸಬೇಕು ಎನ್ನುವ ಬಯಕೆಯನ್ನೂ ವ್ಯಕ್ತಪಡಿಸಿದ್ದರು. ಇದಾದ ನಂತರದಲ್ಲಿ ಇಬ್ಬರೂ ಭೇಟಿ ಆದರು. ಇವರಿಬ್ಬರ ಗೆಳೆತನ ಪ್ರೀತಿಗೆ ತಿರುಗಿತ್ತು. ಅಷ್ಟೇ ಅಲ್ಲದೇ,ತದ ನಂತರ ಬಾಲಿವುಡ್ ಅಂಗಳದಲ್ಲಿ ಇವರ ಕುರಿತಾದ ಒಂದಷ್ಟು ಸುದ್ದಿಗಳು ಹರಿದಾಡಲು ಶುರು ಮಾಡಿದವು.ಆದರೆ,ಕತ್ರಿನಾ ಕೈಫ್ ಕಳೆದ ಕೆಲವು ವರ್ಷಗಳ ಹಿಂದೆ ಸಲ್ಮಾನ್ ಖಾನ್ ಜೊತೆ ಇವರ ಹೆಸರು ಕೇಳಿಬರುತ್ತಿತ್ತು.
ಬಳಿಕ ನಟ ರಣಬೀರ್ ಕಪೂರ್ ಜೊತೆ ಡೇಟಿಂಗ್ ನಲ್ಲಿದ್ದರು. ಆದಾದ ನಂತರ ಬಾಲಿವುಡ್ ಕತ್ರಿನಾ ಕೈಫ್,ರಣಬೀರ್ ಕಪೂರ್ ಅವರಿಂದನೂ ದೂರ ಆಗಿದ್ದರು. ಆಮೇಲೆ ತಳುಕು ಹಾಕಿಕೊಂಡದ್ದೆ ವಿಕ್ಕಿ ಕೌಶಲ್ ಹೆಸರಿನ ಜೊತೆಯಲ್ಲಿ.ಇದಕ್ಕೆ ಸಾಕ್ಷಿ ಎಂಬಂತೆ ಇವರಿಬ್ಬರು ಆಗಾಗ ಕ್ಯಾಮರಾ ಕಣ್ಣಿಗೆ ಸೆರೆಯಾಗುತ್ತಿರುತ್ತಿದ್ದರು.ಔಟಿಂಗ್, ವಿದೇಶಿ ಪ್ರವಾಸ ಅಂತ ಒಟ್ಟಿಗೆ ಓಡಾಡುತ್ತಿದ್ದರು.ಅಷ್ಟೇ ಅಲ್ಲದೇ, ಕಳೆದ ಕೆಲವು ತಿಂಗಳ ಹಿಂದೆ,ಕತ್ರೀನಾ ಕೈಫ್ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಒಂದು ಸೆಲ್ಫಿ ಶೇರ್ ಮಾಡಿದ್ದರು.
ಈ ಸೆಲ್ಫಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕತ್ರಿನಾ ತಬ್ಬಿಕೊಂಡಿರುವುದು ಯಾರನ್ನು ಎನ್ನುವ ಚರ್ಚೆ ನಡೆದಿತ್ತು.ಈ ಫೋಟೋ ಶೇರ್ ಮಾಡುತ್ತಿದ್ದಂತೆ ನೆಟ್ಟಿಗರು ಫೋಟೋದಲ್ಲಿ ಇರುವುದು ನಟ ವಿಕ್ಕಿ ಕೌಶಲ್ ಎಂದು ಕಾಮೆಂಟ್ ಮಾಡಿದ್ದರು.ಇದೀಗ ಇವರಿಬ್ಬರೂ ಮದುವೆಯಾಗುತ್ತಿದ್ದಾರೆ ಎಂಬ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ.
ತಾರೆಯರ ಮದುವೆ ಎಂದರೆ ಅಲ್ಲಿ ಅದ್ದೂರಿತನ ಇರಲೇಬೇಕು. ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಅವರ ಮದುವೆ ಕೂಡ ಅದ್ದೂರಿಯಾಗಿ ನಡೆಯಲಿದೆ. ಡಿಸೆಂಬರ್ ನಲ್ಲಿ ಇವರಿಬ್ಬರ ಮದುವೆ ನೆರವೇರಲಿದ್ದು, ಭರ್ಜರಿ ತಯಾರಿ ನಡೆಯುತ್ತಿದೆ. ಇದಕ್ಕೆಲ್ಲ ಕೋಟ್ಯಂತರ ರೂಪಾಯಿ ಮೀಸಲು ಇಡಲಾಗಿದೆ. ಮದುವೆಗೂ ಮುನ್ನ ನಡೆಯುವ ಮೆಹಂದಿ ಶಾಸ್ತ್ರಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಲಕ್ಷಾಂತರ ರೂ. ಬೆಲೆಯ ಮೆಹಂದಿ ತರಿಸಲಾಗುತ್ತಿರುವುದು ಇನ್ನೂ ವಿಶೇಷವಾಗಿದೆ. ಈ ವಿಚಾರದ ಬಗ್ಗೆ ಗುಸುಗುಸು ಕೇಳಿಬರುತ್ತಿದೆ.
ಬರೋಬ್ಬರಿ 1 ಲಕ್ಷ ರೂಪಾಯಿಯನ್ನು ಮೆಹಂದಿಗಾಗಿ ಖರ್ಚು ಮಾಡಲಾಗುತ್ತಿದೆ.
ವಿಕ್ಕಿ ಕೌಶಲ್ ಹಿಂದು, ಕತ್ರಿನಾ ಕೈಫ್ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಎರಡೂ ಧರ್ಮದ ಸಂಪ್ರದಾಯದ ಪ್ರಕಾರ ಮದುವೆ ನಡೆಯಲಿದೆ. ರಾಜಸ್ಥಾನದ ಐಷಾರಾಮಿ ಹೋಟೆಲ್ ಬುಕ್ ಆಗಿದೆ. ಜೋಧ್ಪುರದ ಪಾಲಿ ಜಿಲ್ಲೆಯಿಂದ ವಿಶೇಷ ಮೆಹಂದಿಯನ್ನು ತರಿಸಲಾಗುತ್ತಿದೆ ಎಂದು ಸುದ್ದಿ ಆಗಿದೆ. ಈ ಮೆಹಂದಿ ಬೆಲೆ ಒಂದು ಲಕ್ಷ ರೂಪಾಯಿ ಎಂಬುವುದನ್ನು ತಿಳಿದು ಅಭಿಮಾನಿಗಳು ಕಣ್ಣರಳಿಸುತ್ತಿದ್ದಾರೆ.