ಸರ್ಕಾರಿ ಸ್ವಾಮ್ಯದ ಬ್ಯಾಂಕಿಂಗ್ ದೈತ್ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಇತ್ತೀಚೆಗೆ ತನ್ನ ಗ್ರಾಹಕರಿಗೆ ಎರಡು ಪ್ರಮುಖ ಘೋಷಣೆಗಳನ್ನು ತಿಳಿಸಿದೆ. ಒಂದು ಪ್ಯಾನ್-ಆಧಾರ್ ಸಂಪರ್ಕ ಮತ್ತು ಇನ್ನೊಂದು ಡಿಜಿಟಲ್ ವಹಿವಾಟು ಶುಲ್ಕದ ಬಗ್ಗೆ.ಎಸ್‌ಬಿಐ ಬ್ಯಾಂಕ್ ಗ್ರಾಹಕರು ಎಂದಿನಂತೆ ಅಡೆತಡೆಯಿಲ್ಲದ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ತಕ್ಷಣವೇ ಪ್ಯಾನ್-ಆಧಾರ್ ಸಂಪರ್ಕವನ್ನು ಪೂರ್ಣಗೊಳಿಸುವಂತೆ ಎಸ್‌ಬಿಐ ಗ್ರಾಹಕರಿಗೆ ಸಲಹೆ ನೀಡಿದೆ. ಇದಲ್ಲದೇ ಪ್ಯಾನ್-ಆಧಾರ್ ಸಂಪರ್ಕವನ್ನು ತಕ್ಷಣವೇ ಪೂರ್ಣಗೊಳಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸಂಪರ್ಕವು ಪೂರ್ಣವಾಗಿಲ್ಲದಿದ್ದರೆ ನಿಮ್ಮ ಬ್ಯಾಂಕ್ ಅಕೌಂಟ್ ಅನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗುವುದು.ಕರೋನಾ ಸಂದರ್ಭದಲ್ಲಿ PANA ಆಧಾರಿತ ಏಕೀಕರಣದ ಗಡುವನ್ನು ಕೇಂದ್ರವು ಮಾರ್ಚ್ 31, 2022 ಕ್ಕೆ ವಿಸ್ತರಿಸಿದೆ. ಸಾಮಾನ್ಯ ಬ್ಯಾಂಕ್ ಖಾತೆಯನ್ನು ತೆರೆಯಲು, ಡಿಮ್ಯಾಟ್ ಖಾತೆ ಅಥವಾ ಹಣವನ್ನು ಠೇವಣಿ ಮಾಡಲು ಪ್ಯಾನ್ ಅತ್ಯಗತ್ಯ . PAN-Aadhaar ನೊಂದಿಗೆ ಇನ್ನೂ ಸೇರಿಸದವರುಮ, incometax.gov.in ವೆಬ್‌ಸೈಟ್‌ನಲ್ಲಿ ಜೋಡಿಸಬಹುದಾಗಿದೆ.
ಉಳಿತಾಯ ಬ್ಯಾಂಕ್ ಠೇವಣಿದಾರರ ಡಿಜಿಟಲ್ ವಹಿವಾಟಿಗೆ ಸಂಬಂಧಿಸಿದಂತೆ ಎಸ್‌ಬಿಐ ಮತ್ತೊಂದು ಘೋಷಣೆ ಮಾಡಿದೆ. ಡಿಜಿಟಲ್ ವಹಿವಾಟಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ರುಪೇ ಡೆಬಿಟ್ ಕಾರ್ಡ್ ಮತ್ತು UPI ಪಾವತಿ ವಹಿವಾಟುಗಳನ್ನು ಜನವರಿ 1, 2020 ರಿಂದ ಉಚಿತವಾಗಿ ನೀಡಲಾಗುವುದು ಅಂತ ತಿಳಿಸಿದೆ.ಆದಾಯ ತೆರಿಗೆ ಸಲ್ಲಿಸುವ ಗಡುವು ಸ್ವಲ್ಪ ಸಮಯದ ಸಮೀಪದಲ್ಲಿರುವುದರಿಂದ ನಿಮ್ಮ ಪ್ಯಾನ್ (PAN) ಕಾರ್ಡ್ ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಸಂಪರ್ಕ ಹೊಂದಿದೆಯೆ ಎಂದು ನೀವು ಖಚಿತಪಡಿಸಿಕೊಳ್ಳಬೇಕು.
ತೆರಿಗೆ ಪಾವತಿದಾರರು 2019-20ನೇ ಹಣಕಾಸು ವರ್ಷಕ್ಕೆ (FY 2020-21) ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಲಿದ್ದಾರೆ. ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸಲು ಹಾಗೂ ಹೊಸ ಪ್ಯಾನ್ ಪಡೆಯಲು ಸರ್ಕಾರವು ಆಧಾರ್ ಉಲ್ಲೇಖವನ್ನು ಕಡ್ಡಾಯಗೊಳಿಸಿದೆ.ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139 ಎಎ (2) ರ ಪ್ರಕಾರ, ಪ್ಯಾನ್ ಹೊಂದಿರುವ ಮತ್ತು ಆಧಾರ್ (Aadhaar) ಪಡೆಯಲು ಅರ್ಹರಾಗಿರುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ಆಧಾರ್ ಸಂಖ್ಯೆಯನ್ನು ತೆರಿಗೆ ಅಧಿಕಾರಿಗಳಿಗೆ ತಿಳಿಸಬೇಕು.