Addhar Facilities: 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಇದ್ದವರಿಗೆ ಕೇಂದ್ರದಿಂದ ಗುಡ್ ನ್ಯೂಸ್, ಇನ್ನುಮುಂದೆ ಈ ಸೇವೆ ಉಚಿತ.
10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಇದ್ದವರಿಗೆ ಇನ್ನುಮುಂದೆ ಈ ಸೇವೆ ಉಚಿತ.
Old Aadhaar Card Update: ಆಧಾರ್ ಕಾರ್ಡ್ (Aadhaar Card) ಜನರ ಪ್ರಮುಖ ಗುರುತಿನ ಚೀಟಿ ಆಗಿದೆ. ಸಾಮಾನ್ಯವಾಗಿ ಎಲ್ಲಾ ಕೆಲಸಗಳಿಗೆ ಈಗ ಆಧಾರ್ ಕಾರ್ಡ್ ಪ್ರಮುಖವಾದ ದಾಖಲೆಯಾಗುತ್ತಿದೆ ಎಂದು ಹೇಳಬಹುದು. ಇದರ ನಡುವೆ ಆಧಾರ್ ಕಾರ್ಡ್ ವಿಷಯವಾಗಿ ಕೆಲವು ಹೊಸ ಯೋಜನೆಯನ್ನ ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಆಧಾರ್ ಕಾರ್ಡ್ ಹೊಂದಿರುವ ಜನರು ಕೇಂದ್ರ ಸರ್ಕಾರದ ಕೆಲವು ಸೌಲಭ್ಯಗಳನ್ನ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ ಎಂದು ಕೇಂದ್ರ ಸರ್ಕಾರ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಸದ್ಯ ಹತ್ತು ವರ್ಷ ಅಥವಾ ಅದಕ್ಕಿಂತ ಹಳೆಯ ಆಧಾರ್ ಕಾರ್ಡ್ ಕಾರ್ಡ್ ಹೊಂದಿರುವ ಜನರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು ಇನ್ನುಮುಂದೆ ಸೇವೆ ಉಚಿತವಾಗಿ ಸಿಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಹತ್ತು ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್
ಹೌದು ಆಧಾರ್ ಕಾರ್ಡ್ ಅನ್ನು ನವೀಕರಣ ಮಾಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಈಗಾಗಲೇ ಆದೇಶವನ್ನ ಹೊರಡಿಸಿದ್ದು ಸಾಕಷ್ಟು ಜನರು ಇನ್ನೂ ಕೂಡ ತಮ್ಮ ಆಧಾರ್ ಕಾರ್ಡ್ ನವೀಕರಣ ಮಾಡಿಲ್ಲ ಎಂದು ಹೇಳಬಹುದು. ಹತ್ತು ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಇದ್ದವರು ತಮ್ಮ ಆಧಾರ್ ಕಾರ್ಡ್ ಅನ್ನು ನವೀಕರಣ ಮಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ಹೇಳಬಹುದು. ಕೇಂದ್ರ ನೀಡಿರುವ ಹೊಸ ಮಾಹಿತಿಯ ಪ್ರಕಾರ ಜನರು ತಮ್ಮ ಮನೆಯಲ್ಲಿಯೇ ಕುಳಿತುಕೊಂಡು ಹಳೆಯ ಆಧಾರ್ ಕಾರ್ಡ್ ಅನ್ನು ನವೀಕರಣ ಮಾಡಿಕೊಳ್ಳಬಹುದು.
ಸುಲಭವಾಗಿ ಹಳೆಯ ಆಧಾರ್ ಕಾರ್ಡ್ ನವೀಕರಣ ಮಾಡಬಹುದು
ಹೌದು ಹತ್ತು ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಹೊಂದಿರುವವರು ಈಗ ಉಚಿತವಾಗಿ ತಮ್ಮ ಆಧಾರ್ ಕಾರ್ಡ್ ಅನ್ನು ನವೀಕರಣ ಮಾಡಿಕೊಳ್ಳಬಹುದು. ಇದೆ ಡಿಸೆಂಬರ್ 14 ರ ತನಕ ಈ ಸೇವೆ ಉಚಿತವಾಗಿ ಸಿಗಲಿದ್ದು ಜನರು ಸುಲಭವಾಗಿ ತಮ್ಮ ಆಧಾರ್ ಕಾರ್ಡ್ ನವೀಕರಣ ಮಾಡಿಕೊಳ್ಳಬಹುದು. ಹಿಂದೆ ಇದಕ್ಕೆ 25 ರೂಪಾಯಿ ಶುಲ್ಕ ನಿಗದಿ ಮಾಡಲಾಗಿದ್ದು ಈಗ ಈ ಶುಲ್ಕವನ್ನ ಕೇಂದ್ರ ಸರ್ಕಾರ ರದ್ದು ಮಾಡಿದೆ. ಡಿಸೆಂಬರ್ 14 ರ ತನಕ ಈ ಸೇವೆ ಉಚಿತವಾಗಿ ಸಿಗಲಿದ್ದು ಜನರು ಆದಷ್ಟು ಬೇಗ ತಮ್ಮ ಹಳೆಯ ಆಧಾರ್ ಕಾರ್ಡ್ ಅನ್ನು ನವೀಕರಣ ಮಾಡಿಕೊಳ್ಳುವುದು ಉತ್ತಮ ಆಗಿದೆ.
ಆಧಾರ್ ಕಾರ್ಡ್ ನವೀಕರಣ ಮಾಡದಿದ್ದರೆ ಹಲವು ಸಮಸ್ಯೆ
ಹೌದು ಹಳೆಯ ಆಧಾರ್ ಕಾರ್ಡ್ ಅನ್ನು ನವೀಕರಣ ಮಾಡದಿದ್ದರೆ ವ್ಯಾವಹಾರಿಕವಾಗಿ ಅನೇಕ ಸಮಸ್ಯೆಯನ್ನ ಎದುರಿಸಬೇಕಾಗುತ್ತದೆ ಎಂದು ಹೇಳಬಹುದು. ಬ್ಯಾಂಕಿಂಗ್ ಕ್ಷೇತ್ರದಲ್ಲಿ, ಮ್ಯೂಚುಯಲ್ ಫಂಡ್ಸ್, ಪೋಸ್ಟ್ ಆಫೀಸ್ ಸ್ಕೀಮ್ ಸೇರಿದಂತೆ ಅನೇಕ ಕ್ಷೇತ್ರದಲ್ಲಿ ನೀವು ಸಮಸ್ಯೆಯನ್ನ ಎದುರಿಸಬೇಕಾಗುತ್ತದೆ. ಸದ್ಯ ಆಧಾರ್ ಕಾರ್ಡ್ ಹೊಂದಿರುವವರು ಬಯೋ ಮೆಟ್ರಿಕ್ ಅಪ್ಡೇಟ್ ಮಾಡುವುದರ ಮೂಲಕ ತಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಬೇಕಾಗಿದೆ.