100 Rs Coin: ಕೇಂದ್ರ ಸರ್ಕಾರದಿಂದ 100 ರೂ ನಾಣ್ಯ ಬಿಡುಗಡೆ, ಇಲ್ಲಿದೆ ನೋಡಿ ನಾಣ್ಯದ ವಿಶೇಷತೆ.
ಕೇಂದ್ರ ಸರ್ಕಾರ 100 ರೂಪಾಯಿ ನಾಣ್ಯಗಳನ್ನ ಬಿಡುಗಡೆ ಮಾಡಲು ಮುಂದಾಗಿದೆ, ನಾಣ್ಯದ ವಿಶೇಷತೆ ತಿಳಿದುಕೊಳ್ಳಿ.
100 Rs Coin Features: ಇತ್ತೀಚಿನ ದಿನಗಳಲ್ಲಿ ನೋಟ್ ಹಾಗೂ ನಾಣ್ಯ ಚಲಾವಣೆಯ ಸಂಬಂಧಿತ ಅನೇಕ ಸುದ್ದಿಗಳು ವೈರಲ್ ಆಗುತ್ತಿವೆ. ಇದೀಗ ನಾಣ್ಯಕ್ಕೆ ಸಂಭಂದಿಸಿದಂತೆ ಸುದ್ದಿಯೊಂದು ಹರಿದಾಡುತ್ತಿದೆ. ಪ್ರಸ್ತುತ 1 ,2 ,5 ,10 ರೂ. ಮುಖಬೆಲೆಯ ನಾಣ್ಯಗಳು ಚಲಾವಣೆಯಲ್ಲಿದೆ. ಇನ್ನು ಮುಂದಿನ ದಿನಗಳಲ್ಲಿ 100 ರೂ. ಮುಖಬೆಲೆಯ ನಾಣ್ಯ ಚಲಾವಣೆಗೆ ಬರಲಿದೆ ಎನ್ನಲಾಗುತ್ತಿದೆ.
ಚಲಾವಣೆಗೆ ಬರಲಿದೆ 100 ರೂ. ನಾಣ್ಯ
ಇನ್ನು ಕೇಂದ್ರ ಸರ್ಕಾರ ಕೆಲವೇ ದಿನಗಳಲ್ಲಿ 100 ರೂ. ಮುಖಬೆಲೆಯ ನಾಣ್ಯವನ್ನು ಚಲಾವಣೆಗೆ ತರಲು ನಿರ್ಧರಿಸಿದೆ. ಇನ್ನು 100 .ರೂ ಮುಖಬೆಲೆಯ ನಾಣ್ಯವನ್ನು ಬಿಡಿಗಡೆ ಮಾಡಲು ಕಾರಣ ಏನು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.
100 ರೂ. ನಾಣ್ಯವನ್ನು ಬಿಡುಗಡೆ ಮಾಡಲು ಕಾರಣವೇನು
ಕೇಂದ್ರ ಸರ್ಕಾರವು 100 ರೂ. ನಾಣ್ಯವನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಈ ನಾಣ್ಯ ಬಿಡುಗಡೆ ಮಾಡಲು ಮುಖ್ಯ ಕಾರಣವನ್ನು ತಿಳಿಸಿದೆ. ದೇಶದಲ್ಲಿ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿ (Narendra Modi) ಮನ್ ಕಿ ಬಾತ್ (Mann Ki Baat) ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಮನ್ ಕಿ ಬಾತ್ ಕಾರ್ಯಕ್ರಮವು ದೇಶದಲ್ಲಿ ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿದೆ.
ಇನ್ನು ಮನ್ ಕಿ ಬಾತ್ ಕಾರ್ಯಕ್ರಮದ 100 ನೇ ಕಂತು ಈ ತಿಂಗಳ ಅಂತ್ಯದಲ್ಲಿ ಪ್ರಸಾರವಾಗಲಿದೆ. 100 ನೇ ಕಂತಿನ ಪ್ರಯುಕ್ತ ಕೇಂದ್ರ ಸರ್ಕಾರ 100 ರೂ. ನಾಣ್ಯಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದೆ. ಏಪ್ರಿಲ್ 30 ರಿಂದ ಮಾರುಕಟ್ಟೆಯಲ್ಲಿ 100 ರೂ. ನಾಣ್ಯಗಳು ಜನರಿಗೆ ಸಿಗಲಿದೆ.
ಇನ್ನು ಮನ್ ಕಿ ಬಾತ್ 100 ನೇ ಕಂತಿನ ವಿಶೇಷ ನಾಣ್ಯವಾಗಿರುವ ಕಾರಣ ನಾಣ್ಯದಲ್ಲಿ ಮ್ಯಾನ್ ಕಿ ಬಾತ್ 100 ಹಗಯೂ ಮ್ಯಾನ್ ಕಿ ಬಾತ್ ಮೈಕ್ರೊಫೋನ್ ಚಿಹ್ನೆ ಇರಿಸಲಾಗಿದೆ.
100 ರೂ. ನಾಣ್ಯದ ವಿಶೇಷತೆ
100 ರೂ. ನಾಣ್ಯವು 44 mm ಡಯಾಮೀಟರ್ ಹಾಗೂ 200 ಸೇರೇಷನ್ ಗಾತ್ರ ಹೊಂದಿರಲಿದೆ. 35 ಗ್ರಾಂ ಲೋಹದ ನಾಣ್ಯದಲ್ಲಿ ಶೇ. 50 ರಷ್ಟು ಬೆಳ್ಳಿ, ತಾಮ್ರ ಶೇ. 50 , ಜಿಂಕ್ ಶೇ. 5 ಹಾಗೂ ನಿಕೆಲ್ ಶೇ. 5 ರಷ್ಟು ಮಿಶ್ರಣವಾಗಿದೆ. 100 ರೂ. ನಾಣ್ಯದಲ್ಲಿ ಅಶೋಕ ಸ್ಥಂಭದ ಮುದ್ರೆ ಇರಲಿದೆ. ಕೆಳಗಡೆ ಸತ್ಯ ಮೇವ ಜಯತೆ ಎಂದು ಬರೆಯಲಾಗಿದೆ. ದೇವನಾಗರಿ ಲಿಪಿಯಲ್ಲಿ ಭಾರತ್, ಎಡಭಾಗದಲ್ಲಿ ಇಂಗ್ಲಿಷ್ ನಲ್ಲಿ ಇಂಡಿಯಾ ಎಂದು ಬರೆಯಲಾಗಿದೆ.