6 ದಿನದಲ್ಲಿ ರಮೇಶ್ ಅಭಿನಯದ 100 ಚಿತ್ರ ಮಾಡಿದ ಭರ್ಜರಿ ಕಲೆಕ್ಷನ್ ಎಷ್ಟು ಗೊತ್ತಾ, ಸುಧಾಮೂರ್ತಿಯವರು ಹೇಳಿದ್ದೇನು ನೋಡಿ.
ರಮೇಶ್ ಅರವಿಂದ್ ಕನ್ನಡ ಚಿತ್ರರಂಗ ಕಂಡ ಹೆಮ್ಮೆಯ ನಟ ಎಂದು ಹೇಳಬಹುದು. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ತಮ್ಮನ್ನ ತಾವು ಗುರುತಿಸಿಕೊಂಡಿರುವ ನಟ ರಮೇಶ್ ಅರವಿಂದ್ ಅವರು ಕನ್ನಡ ಚಿತ್ರರಂಗಕ್ಕೆ ಹಲವು ಸೂಪರ್ ಹಿಟ್ ಚಿತ್ರಗಳನ್ನ ಕೊಟ್ಟಿದ್ದಾರೆ ಎಂದು ಹೇಳಬಹುದು. ಯಾವುದೇ ನಟನೆಯನ್ನ ಸಹಜವಾಗಿ ಮಾಡುವ ನಟ ರಮೇಶ್ ಅರವಿಂದ್ ಅವರಿಗೆ ರಾಜ್ಯದಲ್ಲಿ ಹಲವು ಅಭಿಮಾನಿಗಳು ಇದ್ದು ಅವರ ಚಿತ್ರವನ್ನ ಒಮ್ಮೆಯಾದರೂ ನೋಡೇ ನೋಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ವಿಷಯಕ್ಕೆ ಬರುವುದಾದರೆ ನಟ ರಮೇಶ್ ಅರವಿಂದ್ ನಟನೆಯ 100 ಚಿತ್ರದಲ್ಲಿ ರಾಜ್ಯದಲ್ಲಿ ಕಳೆದ ವಾರ ಬಿಡುಗಡೆಯಾಗಿದ್ದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಎಂದು ಹೇಳಬಹುದು.
ರಾಜ್ಯದಲ್ಲಿ 100 ಚಿತ್ರ ಭರ್ಜರಿಯಾಗಿ ಪ್ರದರ್ಶನವನ್ನ ಕಾಣುತ್ತಿದ್ದು ಜನರು ಚಿತ್ರವನ್ನ ಹಾಡಿ ಹೊಗಳಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಚಿತ್ರಕ್ಕೆ ಜನರು ಫುಲ್ ಫಿದಾ ಆಗಿದ್ದು ಚಿತ್ರ ಕಲೆಕ್ಷನ್ ವಿಚಾರದಲ್ಲಿ ಕೂಡ ಸಕತ್ ಸುದ್ದಿ ಮಾಡಿದೆ ಎಂದು ಹೇಳಬಹುದು. ಹಾಗಾದರೆ ರಮೇಶ್ ಅರವಿಂದ್ ನಟನೆಯ 100 ಚಿತ್ರ ಇಲ್ಲಿಯತನಕ ಮಾಡಿದ ಒಟ್ಟು ಕಲೆಕ್ಷನ್ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ರಮೇಶ್ ಅರವಿಂದ್ ನಟನೆಯ 100 ಚಿತ್ರ ರಾಜ್ಯದಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು ಚಿತ್ರಕ್ಕೆ ಜನರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.
ಇದೆ ತಿಂಗಳ 17 ನೇ ತಾರೀಕಿನಂದು ಚಿತ್ರ ರಾಜ್ಯದ ಬಹುತೇಕ ಎಲ್ಲಾ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಚಿತ್ರ ಬಿಡುಗಡೆಯಾದ ಮೊದಲ ದಿನವೇ 2 ರಿಂದ 3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು ಎಂದು ಅಂದಾಜು ಮಾಡಲಾಗಿತ್ತು. ಇನ್ನು ಈಗ ಚಿತ್ರ ಬಿಡುಗಡೆಯಾಗಿ ಆರು ದಿನಗಳು ಉರುಳಿದ್ದು ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ ರಮೇಶ್ ಅರವಿಂದ್ ನಟನೆಯ 100 ಚಿತ್ರ ಆರು ತಿಂಗಳಲ್ಲಿ 8 ರಿಂದ 10 ಕೋಟಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಇನ್ನು 100 ಚಿತ್ರದಲ್ಲಿ ರಮೇಶ್ ಅರವಿಂದ್ ನಟನೆ ಮತ್ತು ಕಥೆ ಬಹಳ ಚನ್ನಾಗಿ ಇದ್ದು ಅದರಲ್ಲಿ ಸಾಮಾಜಿಕ ಜಾಲತಾಣ ಎಷ್ಟು ಒಳ್ಳೆಯದು ಮತ್ತು ಎಷ್ಟು ಕೆಟ್ಟದ್ದು ಅನ್ನುವುದನ್ನ ಬಹಳ ಸುಂದರವಾಗಿ ತೋರಿಸಲಾಗಿದೆ ಎಂದು ಹೇಳಬಹುದು.
ಇನ್ನು ಸಿನೆಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಪ್ರತಿನಿತ್ಯ ಸಾಮಾಜಿಕ ಜಾಲತಾಣಗಳಿಂದಾಗೋ ಅನಾಹುತಗಳ ಬಗ್ಗೆ ಜನರಲ್ಲಿ ಎಚ್ಚರಿಕೆ ಮೂಡಿಸುವಂತಿದೆ. ಇತ್ತೀಚೆಗೆ ಮಾರಕವಾಗಿ ಕಾಡುತ್ತಿರೋ ಸೋಶಿಯಲ್ ಮೀಡಿಯಾದ ಅವಾಂತರದ ವಿದ್ಯಮಾನಗಳನ್ನು ಗಮನದಲ್ಲಿಟ್ಟುಕೊಂಡು, ನಿರ್ದೇಶನದೊಂದಿಗೆ ತಾವೇ ನಾಯಕರಾಗಿಯೂ ರಮೇಶ್ ಅರವಿಂದ್ ಚೆನ್ನಾಗಿ ಅಭಿನಯಿಸಿ ತೋರಿಸಿದ್ದಾರೆ. ಇಂಥಹ ಸಿನೆಮಾ ನಿರ್ದೇಶನ ಮಾಡಿದ್ದಕ್ಕೆ ರಮೇಶ್ ಅರವಿಂದ್ ಅವರಿಗೂ ಹಾಗೂ ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೂ ಧನ್ಯವಾದ ತಿಳಿಸುವುದರ ಜೊತೆಗೆ ಪ್ಯಾಮಿಲಿ ಸಮೇತ ಒಮ್ಮೆ ಸಿನೆಮಾ ನೋಡುವಂತೆ ಸುಧಾಮೂರ್ತಿ ಅವರು ಮನವಿ ಮಾಡಿದ್ದಾರೆ. ಸ್ನೇಹಿತರೆ ರಮೇಶ್ ಅರವಿಂದ್ ನಟನೆಯ 100 ಚಿತ್ರ ಹೇಗಿದೆ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.