Pan Card Fraud: ಇಂತಹ ಪಾನ್ ಕಾರ್ಡ್ ಇದ್ದವರಿಗೆ 10,000 ರೂಪಾಯಿ ದಂಡ, ಕೇಂದ್ರ ಸರ್ಕಾರದ ಆದೇಶ.
ಎರಡು ಪಾನ್ ಕಾರ್ಡ್ ಮಾಡಿಸಿಕೊಂಡು ಸರ್ಕಾರಕ್ಕೆ ಮೋಸ ಮಾಡುತ್ತಿರುವ ಜನರಿಗೆ 10000 ರೂಪಾಯಿ ದಂಡ ಹಾಕಲಾಗುತ್ತದೆ.
Pan Card Rules And Regulations: ಪ್ಯಾನ್ ಕಾರ್ಡ್ (Pan Card0 ಎಂಬುದು ಜನರಿಗೆ ಯಾವುದೇ ರೀತಿಯ ವಹಿವಾಟು ನಡೆಸಲು ಅತ್ಯಮೂಲ್ಯವಾದ ದಾಖಲೆಯಾಗಿದೆ. ಈಗಾಗಲೇ ಪ್ಯಾನ್ ಕಾರ್ಡ್ ಹಾಗು ಆಧಾರ್ ಕಾರ್ಡ್ ಲಿಂಕ್ ಗೆ ಸಂಬಂಧಿಸದಂತೆ ಸಾಕಷ್ಟು ವಿಚಾರಗಳು ಹೊರ ಬಿದ್ದಿದೆ.
ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಜೂನ್ 30 ರೊಳಗೆ ಆಗದಿದ್ದರೆ ಅದಕ್ಕೆ ಹತ್ತು ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಸಹ ತಿಳಿಸಿದೆ. ಇದೀಗ ಪ್ಯಾನ್ ಕಾರ್ಡ್ ಗೆ ಸಂಬಂಧಿಸಿದಂತೆ ಹೊಸ ಸುದ್ದಿ ಒಂದು ಹೊರಬಿದ್ದಿದೆ.
ದೇಶದ ನಾಗರಿಕರು ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಬಳಸುವಂತಿಲ್ಲ
ಭಾರತದಲ್ಲಿ ಪ್ಯಾನ್ ಕಾರ್ಡ್ ಎನ್ನುವುದು ಪ್ರಮುಖವಾದ ದಾಖಲೆಯಾಗಿದೆ. ಇದು ಇಲ್ಲದಿದ್ದರೆ ಯಾವುದೇ ರೀತಿಯ ವಹಿವಾಟುಗಳನ್ನು ಜನರಿಗೆ ನಡೆಸಲು ಆಗುವುದಿಲ್ಲ. ಆದರೆ ದೇಶದ ಜನರು ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಲು ಅವಕಾಶವಿಲ್ಲ.
ಇದು ಕಾನೂನಿಗೆ ವಿರುದ್ಧವಾಗಿದೆ. ಹಾಗಾಗಿ ಯಾವುದೇ ನಾಗರಿಕರು ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿದ್ದರೆ ಅದನ್ನು ನಕಲಿ ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ಇದರಿಂದ ಅವರಿಗೆ ಸಮಸ್ಯೆ ಕೂಡ ಉಂಟಾಗುತ್ತದೆ.
ನಕಲಿ ಪ್ಯಾನ್ ಕಾರ್ಡ್ ಬಳಸಿದರೆ ದಂಡ ಕಟ್ಟಬೇಕಾಗುತ್ತದೆ
ದೇಶದ ಯಾವುದೇ ವ್ಯಕ್ತಿಯು ಎರಡು ಬಾರಿ ಅರ್ಜಿ ಸಲ್ಲಿಸಿದರೆ ಅವನಿಗೆ ಆದಾಯ ತೆರಿಗೆ ಇಲಾಖೆ ಎರಡು ಪ್ಯಾನ್ ಕಾರ್ಡ್ ನೀಡಿರಬಹುದು. ಕೆಲವರು ಸರ್ಕಾರನ್ನು ವಂಚಿಸುವ ಅಥವಾ ಆದಾಯ ತೆರಿಗೆಯನ್ನು ಹಣವನ್ನು ಉಳಿಸುವ ಉದ್ದೇಶದಿಂದ ಒಂದಕ್ಕಿಂತ ಹೆಚ್ಚು ಪ್ಯಾನ್ ಗಳಿಗೆ ಅರ್ಜಿ ಸಲ್ಲಿಸಿರುತ್ತಾರೆ.
ಈ ಕಾರಣದಿಂದ ಎರಡು ಪ್ಯಾನ್ ಕಾರ್ಡ್ ಅನ್ನು ಬಳಸಲು ಹೋದರೆ ಇದರಿಂದ ನೀವು ಸಿಕ್ಕಿಬಿದ್ದರೆ ಬ್ಯಾಂಕಿಂಗ್ ವಹಿವಾಟಿನಲ್ಲಿ ಮಾತ್ರವಲ್ಲ ಸರ್ಕಾರದ ಪ್ರಯೋಜನವನ್ನು ಪಡೆಯುವಲ್ಲಿಯೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಒಂದಕ್ಕಿಂತ ಹೆಚ್ಚಿನ ಪ್ಯಾನ್ ಕಾರ್ಡ್ ಹೊಂದಿರುವುದು ಸರ್ಕಾರದ ನಿಯಮಗಳ ಉಲ್ಲಂಘನೆ ಆಗಿದ್ದು, 10,000 ರೂ.ಗಳ ವರೆಗೆ ದಂಡವನ್ನು ವಿಧಿಸಲಾಗುತ್ತದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 272ಬಿ ಅಡಿಯಲ್ಲಿ ಈ ದಂಡವನ್ನು ವಿಧಿಸಲು ಅವಕಾಶವಿದೆ. ಇದನ್ನು ತಪ್ಪಿಸಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ.