Petrol And Diesel Price History India: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕಚ್ಚಾ ತೈಲದ ಬೆಲೆಗಳು, ಭಾರತೀಯ ರೂಪಾಯಿ ವಿನಿಮಯ ದರ, ಕೇಂದ್ರ ಮತ್ತು ರಾಜ್ಯ ತೆರಿಗೆಗಳಿಂದ ಪ್ರಭಾವಿತವಾಗಿರುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪದೇಪದೇ ಪರಿಷ್ಕರಿಸಲಾಗುತ್ತದೆ. ರಾಜ್ಯ ಮಟ್ಟದ ತೆರಿಗೆಗಳು ಮತ್ತು ಸಾರಿಗೆ ವೆಚ್ಚಗಳು ವಿಭಿನ್ನವಾಗಿರುವುದರಿಂದ ನಗರಗಳು ಮತ್ತು ರಾಜ್ಯಗಳಲ್ಲಿ ಬೆಲೆಗಳು ಬದಲಾಗುತ್ತವೆ. ಇದೀಗ ನಾವು 1990 ರಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ನ ಬೆಲೆ ಎಷ್ಟಿತ್ತು ಅನ್ನುವ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ತಿಳಿದುಕೊಳ್ಳೋಣ.
1990 ರಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ನ ಬೆಲೆ ಎಷ್ಟಿತ್ತು..?
1990 ರಲ್ಲಿ 1 ಲೀಟರ್ ಪೆಟ್ರೋಲ್ ನ ಬೆಲೆ ಕೇವಲ 9.84 ರಿಂದ 12.23 ರೂ. ಒಳಗೆ ಇರುತಿತ್ತು. ಇನ್ನು 1 ಲೀಟರ್ ಡಿಸೇಲ್ ಗೆ ಕೇವಲ 4.08 ರಿಂದ 5.05 ರೂ. ಆಗಿರುತ್ತಿತ್ತು. ಆದರೆ ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ಅಂದಾಜು 106.41 ಮತ್ತು ಡೀಸೆಲ್ ಬೆಲೆ ಲೀಟರ್ ಗೆ ಸುಮಾರು 91.49 ಆಗಿದೆ. ವಿವಿಧ ರಾಜ್ಯಗಳ ತೆರಿಗೆಗಳು ಮತ್ತು ಸಾರಿಗೆ ವೆಚ್ಚಗಳಿಂದಾಗಿ ಬೆಲೆಗಳು ಸ್ಥಳಕ್ಕೆ ಅನುಗುಣವಾಗಿ ಬದಲಾಗುತ್ತವೆ.
1990 ರಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ನ ಬೆಲೆ ನಗರವಾರು ನೋಡುವುದಾದರೆ
* 1990 ದೆಹಲಿಯಲ್ಲಿ ಪೆಟ್ರೋಲ್ ನ ಬೆಲೆ 9.84 ಮತ್ತು ಡಿಸೇಲ್ ನ ಬೆಲೆ 4.08 ಆಗಿತ್ತು.
* 1990 ಮುಂಬೈ ನಲ್ಲಿ ಪೆಟ್ರೋಲ್ ನ ಬೆಲೆ 11.56 ಮತ್ತು ಡಿಸೇಲ್ ನ ಬೆಲೆ 4.92 ಆಗಿತ್ತು.
* 1990 ಬೆಂಗಳೂರಿನಲ್ಲಿ ಪೆಟ್ರೋಲ್ ನ ಬೆಲೆ 10.80 ಮತ್ತು ಡಿಸೇಲ್ ನ ಬೆಲೆ 4.60 ಆಗಿತ್ತು.
* 1990 ಚನ್ನೈ ನಲ್ಲಿ ಪೆಟ್ರೋಲ್ ನ ಬೆಲೆ 11.20 ಮತ್ತು ಡಿಸೇಲ್ ನ ಬೆಲೆ 4.75 ಆಗಿತ್ತು.
ಬೆಲೆ ಕಡಿಮೆಗೆ ಪ್ರಮುಖ ಕಾರಣ
* 1990 ರವರೆಗೆ ಪೆಟ್ರೋಲ್ – ಡೀಸೆಲ್ ಬೆಲೆಯನ್ನು ಸಂಪೂರ್ಣವಾಗಿ ಸರ್ಕಾರ ನಿರ್ಧರಿಸುತ್ತಿತ್ತು.
* 1989 – 90ರಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಇತ್ತು.
* ರೈತರು ಮತ್ತು ಬಡವರಿಗಾಗಿ ಡೀಸೆಲ್ ಮತ್ತು ಕೇರೋಸಿನ್ ಗೆ ಸಬ್ಸಿಡಿ ನೀಡಲಾಗುತ್ತಿತ್ತು.
* ಕಡಿಮೆ ತೆರಿಗೆ ಇದಿತ್ತು.
1990 ರಿಂದ 2025 ರ ಪೆಟ್ರೋಲ್ ಡಿಸೇಲ್ ಬೆಲೆ ಹೋಲಿಕೆ
* 1990 ರಲ್ಲಿ ಪೆಟ್ರೋಲ್ ಬೆಲೆ 9.84 ರಿಂದ 12.23 , ಮತ್ತು ಡಿಸೇಲ್ ಬೆಲೆ 4.08 ರಿಂದ 5.05 ಆಗಿತ್ತು.
* 2000 ರಲ್ಲಿ ಪೆಟ್ರೋಲ್ ಬೆಲೆ 23 ರಿಂದ 28 , ಮತ್ತು ಡಿಸೇಲ್ ಬೆಲೆ 14 ರಿಂದ 16 ಆಗಿತ್ತು.
* 2010 ರಲ್ಲಿ ಪೆಟ್ರೋಲ್ ಬೆಲೆ 47 ರಿಂದ 52 , ಮತ್ತು ಡಿಸೇಲ್ ಬೆಲೆ 38 ರಿಂದ 42 ಆಗಿತ್ತು.
* 2020 ರಲ್ಲಿ ಪೆಟ್ರೋಲ್ ಬೆಲೆ 80 ರಿಂದ 85 , ಮತ್ತು ಡಿಸೇಲ್ ಬೆಲೆ 70 ರಿಂದ 75 ಆಗಿತ್ತು.
* 2025 ರಲ್ಲಿ ಪೆಟ್ರೋಲ್ ಬೆಲೆ 94 ರಿಂದ 110 , ಮತ್ತು ಡಿಸೇಲ್ ಬೆಲೆ 87 ರಿಂದ 95 ಆಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

