1st Class Admission: ಶಾಲೆ ಆರಂಭಕ್ಕೂ ಮುನ್ನವೇ 1 ನೇ ತರಗತಿ ಮಕ್ಕಳಿಗೆ ಬಂತು ಹೊಸ ರೂಲ್ಸ್, ಪೋಷಕರೇ ತಿಳಿದುಕೊಳ್ಳಿ.

ಮಕ್ಕಳನ್ನು ಒಂದನೇ ತರಗತಿಗೆ ದಾಖಲು ಮಾಡುವ ಮುನ್ನ ಈ ನಿಯಮದ ಬಗ್ಗೆ ತಿಳಿದುಕೊಳ್ಳಿ.

1st Class Admission Rule: ಇಂದಿನ ಕಾಲದಲ್ಲಿ ಶಿಕ್ಷಣ ಎಲ್ಲರಿಗು ಮುಖ್ಯವಾಗಿದೆ. ಹೀಗಾಗಿ ಎಲ್ಲ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ ಶಿಕ್ಷಣವನ್ನು ನೀಡಬೇಕೆಂದು ಯೋಚಿಸುತ್ತಾರೆ. ಇನ್ನು ಹೊಸ ಶೈಕ್ಷಣಿಕ ವರ್ಷದ ಆರಂಭದಲ್ಲಿ 1 ನೇ ತರಗತಿಯಲ್ಲಿ ಹೊಸ ಹೊಸ ವಿದ್ಯಾರ್ಥಿಗಳು ದಾಖಲಾಗುತ್ತವೆ.

ಈಗಾಗಲೇ 2023 -24 ಶೈಕ್ಷಣಿಕ ವರ್ಷ ಮುಗಿಯುತ್ತಿದ್ದು, ಪೋಷಕರು ತಮ್ಮ ಮಕ್ಕಳನ್ನು 1 ನೇ ತರಗತಿಗೆ ಸೇರಿಸಲು ಮುಂದಾಗಿದ್ದಾರೆ. ಆದರೆ ಪೋಷಕರು ತಮ್ಮ ಮಕ್ಕಳ್ನು ಒಂದನೇ ತರಗತಿಗೆ ಸೇರಿಸುವ ಮುನ್ನ ಶಿಕ್ಷಣ ಇಲಾಖೆಯ ನಿಯವನ್ನು ತಿಳಿಯುವುದು ಅಗತ್ಯವಾಗಿದೆ. ಶಿಕ್ಷಣ ಇಲಾಖೆಯು ಮಕ್ಕಳನ್ನು ಒಂದನೇ ತರಗತಿಗೆ ದಾಖಲು ಮಾಡಿಕೊಳ್ಳಲು ವಯೋಮಿತಿಯನ್ನು ನಿಗದಿಪಡಿಸಿದೆ.

1st Class Admission Rule
Image Credit: Dailyexcelsior

ಶಾಲೆ ಆರಂಭಕ್ಕೂ ಮುನ್ನವೇ 1 ನೇ ತರಗತಿ ಮಕ್ಕಳಿಗೆ ಬಂತು ಹೊಸ ರೂಲ್ಸ್
ಪ್ರಸ್ತುತ ಶಾಲಾ ವಿದ್ಯಾರ್ಥಿಗಳು 2023 -24 ರ ಶೈಕ್ಷಣಿಕ ಸಾಲಿನ ವಿದ್ಯಾಭ್ಯಾಸದ ಕೊನೆಯ ಹಂತದಲ್ಲಿದ್ದರೆ. ಇನ್ನೇನು ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆ ಎದುರಿಸಲಿದ್ದಾರೆ. ಇನ್ನು ಒಂದು ವರ್ಷದ ಶೈಕ್ಷಣಿಕ ಅವಧಿ ಮುಗಿಯುತ್ತಿದ್ದಂತೆ 1 ನೇ ತರಗತಿಗೆ ಹೊಸ ಹೊಸ ಮಕ್ಕಳು ದಾಖಲಾಗುತ್ತವೆ. ಸದ್ಯ ಶಿಕ್ಷಣ ಇಲಾಖೆಯು 2024 -25 ನೇ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಯ ದಾಖಲಾತಿಯಲ್ಲಿ ಹೊಸ ನಿಯಮವನ್ನು ಜಾರಿಗೆ ತಂದಿದೆ.

ಒಂದನೇ ತರಗತಿ ದಾಖಲಾತಿಗೆ ವಯೋಮಿತಿ ನಿಗದಿ
ಕೇಂದ್ರದ ಶಿಕ್ಷಣ ಇಲಾಖೆ ಎಲ್ಲಾ ರಾಜ್ಯದ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (National Education Policy) ಜಾರಿಗೊಳಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಮತ್ತು ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು (RTE) ಕಾಯಿದೆ, 2009 ಗೆ ಅನುಗುಣವಾಗಿ 1 ನೇ ತರಗತಿಗೆ ಪ್ರವೇಶಕ್ಕಾಗಿ ಕನಿಷ್ಠ 6 ವಯಸ್ಸನ್ನು ನಿಗದಿಪಡಿಸುವಂತೆ ಕೇಂದ್ರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.

School Admission New Rules
Image Credit The Hindu

2024-25 ಅಧಿವೇಶನವು ಶೀಘ್ರದಲ್ಲೇ ಪ್ರಾರಂಭವಾಗುತ್ತದೆ ಮತ್ತು ಹೊಸ ಪ್ರವೇಶಗಳು ನಡೆಯಲಿವೆ. ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕ್ಲಾಸ್-1 ಗೆ ಪ್ರವೇಶದಲ್ಲಿ ವಯಸ್ಸನ್ನು 6 + ಗೆ ನಿಗದಿಪಡಿಸಲಾಗಿದೆ. 2024-25ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ, ಜೂನ್ 1ಕ್ಕೆ 6 ವರ್ಷಗಳನ್ನು ಕಡ್ಡಾಯವಾಗಿ ಪೂರೈಸಿದ ಮಗುವಿಗೆ 1ನೇ ತರಗತಿಗೆ ಪ್ರವೇಶ ಪಡೆಯಲು ವಯಸ್ಸಿನ ಮಿತಿಯನ್ನು ನಿಗದಿಪಡಿಸಲಾಗಿದೆ.

Join Nadunudi News WhatsApp Group

Join Nadunudi News WhatsApp Group