School Admission: ಮಕ್ಕಳನ್ನ ಶಾಲೆಗೆ ಸೇರಿಸಲು ಈ ನಿಯಮ ಕಡ್ಡಾಯ, ಪೋಷಕರಿಗೆ ವಿಶೇಷ ಸೂಚನೆ.
ಮಕ್ಕಳನ್ನ 1 ನೇ ತರಗತಿ ಸೇರಿಸಲು ಈಗ 6 ವರ್ಷ ಕಡ್ಡಾಯ ಅನ್ನುವ ನಿಯಮವನ್ನ ಜಾರಿಗೆ ತರಲಾಗಿದೆ.
Education System 2023: 2023 -24 ನೇ ಸಾಲಿನ ಶಿಕ್ಷಣ ನೀತಿಯಲ್ಲಿ ಈ ಬಾರಿ ಸಾಕಷ್ಟು ಬದಲಾವಣೆ ಆಗಲಿದೆ. ಈಗಾಗಲೇ 5, 8,10, 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಹೊಸ ಹೊಸ ನಿಯಮಗಳು ಬಿಡುಗಡೆಗೊಂಡಿವೆ. ಇದೀಗ 2023 24 ನೇ ಶೈಕ್ಷಣಿಕ ವರ್ಷದಲ್ಲಿ ಶಾಲೆಗೆ ಸೇರುವ ವಿದ್ಯಾರ್ಥಿಗಳಿಗೆ ಹೊಸ ನಿಯಮವನ್ನು ಶಿಕ್ಷಣ ಇಲಾಖೆ ಸೂಚಿಸಿದೆ. ಈ ಹೊಸ ನಿಯಮದ ಬಗ್ಗೆ ಮಾಹಿತಿ ತಿಳಿಯೋಣ.
1 ನೇ ತರಗತಿ ದಾಖಲಾತಿಯಲ್ಲಿ ಹೊಸ ನಿಯಮ
ಇನ್ನು ಶಾಲಾ ಮಕ್ಕಳಿಗೆ ಇದೀಗ ಬೇಸಿಗೆ ರಜೆ ಆರಂಭಗೊಂಡಿದೆ. ಮೇ 29 ರಂದು ಮತ್ತೆ ಶಾಲೆಗಳು ಪುನರ್ ಆರಂಭಗೊಳ್ಳಲಿದೆ. ಇನ್ನು ಒಂದನೇ ತರಗತಿಗೆ ಸಾಕಷ್ಟು ಮಕ್ಕಳು ಸೇರಿಕೊಳ್ಳಲಿದ್ದಾರೆ.
ಇದೀಗ ಒಂದನೇ ತರಗತಿಯ ದಾಖಲಾತಿಯಲ್ಲಿ ಶಿಕ್ಷಣ ಇಲಾಖೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ಮಕ್ಕಳನ್ನು ಒಂದನೇ ತರಗತಿಗೆ ದಾಖಲು ಮಾಡಿಕೊಳ್ಳಲು 6 ವರ್ಷಗಳ ವಯೋಮಿತಿಯನ್ನು ಶಿಕ್ನ ಇಲಾಖೆ ಕಡ್ಡಾಯಗೊಳಿಸಿದೆ.
ಒಂದನೇ ತರಗತಿ ದಾಖಲಾತಿಗೆ ಆರು ವರ್ಷ ವಯೋಮಿತಿ ಕಡ್ಡಾಯ
ಕೇಂದ್ರದ ಶಿಕ್ಷಣ ಇಲಾಖೆ ಎಲ್ಲಾ ರಾಜ್ಯದ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದೆ. ಶಿಕ್ಷಣ ನೀತಿ 2020 ಅಡಿಯಲ್ಲಿ ಮಕ್ಕಳನ್ನು ಒಂದನೇ ತರಗತಿಗೆ ದಾಖಲಾತಿ ಮಾಡಿಕೊಳ್ಳಲು ವಯೋಮಿತಿ 6 ವರ್ಷ ತುಂಬಿರಬೇಕು ಎಂದು ಮಾರ್ಗಸೂಚಿಯನ್ನು ಹೊರಡಿಸಿದೆ.
ದೇಶದ ಹಲವು ರಾಜ್ಯಗಳಲ್ಲಿ ಈ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. ಆದರೆ ದಕ್ಷಿಣ ರಾಜ್ಯಗಳಾದ ಕೇರಳ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿ ಈ ಹೊಸ ನಿಯಮಕ್ಕೆ ಒಪ್ಪಿಗೆ ನೀಡಿಲ್ಲ. ಇನ್ನು ಕರ್ನಾಟಕದಲ್ಲಿ 5.5 ವರ್ಷದಿಂದ 7 ವರ್ಷದೊಳಗಿನ ಮಕ್ಕಳನ್ನು ಒಂದನೇ ತರಗತಿಗೆ ದಾಖಲು ಮಾಡಿಕೊಳ್ಳಲಾಗುತ್ತಿದೆ.