1st Standard: 1 ನೇ ತರಗತಿಗೆ ಮಗುವನ್ನ ಸೇರಿರುವ ಪೋಷಕರಿಗೆ ಹೈಕೋರ್ಟ್ ನಿಂದ ಮಹತ್ವದ ಘೋಷಣೆ, ಕಡ್ಡಾಯ ನಿಯಮ.

ನಿಮ್ಮ ಮನೆಯಲ್ಲಿ ಒಂದೇ ತರಗತಿ ಸೇರುವ ಮಕ್ಕಳಿದ್ದಾರೆ ಈ ನಿಯಮದ ಬಗ್ಗೆ ತಿಳಿದುಕೊಳ್ಳುದು ಉತ್ತಮ.

1st Standard Admission: 2023 -24 ನೇ ಸಾಲಿನ ಶಿಕ್ಷಣ ನೀತಿಯಲ್ಲಿ ಈ ಬಾರಿ ಸಾಕಷ್ಟು ಬದಲಾವಣೆ ಆಗಲಿದೆ. ಈಗಾಗಲೇ 5, 8,10, 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಹೊಸ ಹೊಸ ನಿಯಮಗಳು ಬಿಡುಗಡೆಗೊಂಡಿವೆ. ಇದೀಗ ಹೊಸದಾಗಿ ಶಾಲೆಗೆ ಸೇರುವ ವಿದ್ಯಾರ್ಥಿಗಳಿಗೆ ಹೊಸ ನಿಯಮವನ್ನು ಸೂಚಿಸಲಾಗಿದೆ. ಸರ್ಕಾರದ ಹೊಸ ನಿಯಮಾನುಸಾರ ಮಕ್ಕಳು ಶಾಲೆಗೆ ಸೇರಬೇಕಾಗಿದೆ.

ಈ ಹಿಂದೆ ಶಿಕ್ಷಣ ನೀತಿ 2020 ಅಡಿಯಲ್ಲಿ ಮಕ್ಕಳನ್ನು ಒಂದನೇ ತರಗತಿಗೆ ದಾಖಲಾತಿ ಮಾಡಿಕೊಳ್ಳಲು ವಯೋಮಿತಿ 6 ವರ್ಷ ತುಂಬಿರಬೇಕು ಎಂದು ಮಾರ್ಗಸೂಚಿಯನ್ನು ಹೊರಡಿಸಿತ್ತು. ಇದೀಗ ಒಂದನೇ ತರಗತಿಯ ದಾಖಲಾತಿ ವಯೋಮಿತಿಗೆ ಹೈಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿದೆ. ನಿಮ್ಮ ಮನೆಯಲ್ಲಿ ಒಂದೇ ತರಗತಿ ಸೇರುವ ಮಕ್ಕಳಿದ್ದಾರೆ ಈ ನಿಯಮದ ಬಗ್ಗೆ ತಿಳಿದುಕೊಳ್ಳಿ.

An important decision by the High Court for the children joining the 1st class
Image Credit: Ahmedabadmirror

1 ನೇ ತರಗತಿ ಸೇರುವ ಮಕ್ಕಳಿಗೆ ಹೈಕೋರ್ಟ್ ನಿಂದ ಮಹತ್ವದ ನಿರ್ಧಾರ
ರಾಜ್ಯ ಸರ್ಕಾರದಿಂದ 1 ನೇ ತರಗತಿ ದಾಖಲಾತಿಗೆ 2025 -26 ನೇ ಸಾಲಿನಿಂದ 5 ವರ್ಷ 5 ತಿಂಗಳಿನಿಂದ 6 ವರ್ಷಕ್ಕೆ ಹೆಚ್ಚಳ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಒಂದನೇ ತರಗತಿಯ ದಾಖಲಾತಿ ವಯೋಮಿತಿ ಹೆಚ್ಚಳ ಮಾಡುವ ಬಗ್ಗೆ ಹೈಕೋರ್ಟ್ ಆದೇಶ ನೀಡಿದೆ. ಸರ್ಕಾರೀ ಅನುದಾನಿತ ಅನುದಾನ ರಹಿತ ಶಾಲೆಗಳಲ್ಲಿ 2025 -26 ನೇ ಸಾಲಿನಿಂದ 1 ನೇ ತರಗತಿ ದಾಖಲಾತಿಗೆ ಮಗುವಿನ ವಯಸ್ಸು 6 ವರ್ಷ ತುಂಬಿರಬೇಕು ಎಂದು ಆದೇಶ ನೀಡಲಾಗಿದೆ.

An important decision by the High Court for the children joining the 1st class
Image Credit: News18

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ
1ನೇ ತರಗತಿ ದಾಖಲಾತಿಗೆ 2025 -26 ನೇ ಸಾಲಿನಿಂದ 5 ವರ್ಷ 5 ತಿಂಗಳಿನಿಂದ 6 ವರ್ಷಕ್ಕೆ ಹೆಚ್ಚಳ ಮಾಡುವ ಬಗ್ಗೆ ರಾಜ್ಯ ಸರ್ಕಾರ 2022 ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಇದೀಗ ರಾಜ್ಯ ಸರ್ಕಾರದ ಮನವಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಒಂದನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯಗೊಳಿಸಿದೆ. ಕೋರ್ಟ್ ನ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಗೆ ವಿಚಾರಣೆ ನಡೆಸಲು ಅರ್ಜಿ ಸಲ್ಲಿಸಲಾಯಿತು. ಹೈಕೋರ್ಟ್ ಕೂಟ ಒಂದನೇ ತರಗತಿ ದಾಖಲಾತಿಗೆ 6 ನೇ ವಯಸ್ಸನ್ನು ಖಚಿತಪಡಿಸಿದೆ.

Join Nadunudi News WhatsApp Group

Join Nadunudi News WhatsApp Group