Gold Price: ವಾರಾಂತ್ಯದಲ್ಲಿ ಮತ್ತೆ 200 ರೂ. ಏರಿಕೆ ಕಂಡ ಚಿನ್ನ, ಚಿನ್ನ ಇನ್ನಷ್ಟು ದುಬಾರಿ.
ಆಭರಣ ಪ್ರೀಯರಿಗೆ ಬೇಸರದ ಸುದ್ದಿ, ಮತ್ತೆ ಬಂಗಾರದ ಬೆಲೆಯಲ್ಲಿ ಏರಿಕೆ.
Gold Price Hike Today: ಸಾಮಾನ್ಯವಾಗಿ ಚಿನ್ನವನ್ನು ಎಲ್ಲರು ಇಷ್ಟಪಡುತ್ತಾರೆ. ಅದರಲ್ಲೂ ಹೆಚ್ಚಾಗಿ ಮಹಿಳೆಯರಿಗೆ ಚಿನ್ನದ ಮೇಲಿನ ಒಲವು ಹೆಚ್ಚಿರುತ್ತದೆ. ತಮ್ಮ ಬಳಿ ಇರುವ ಹಣದ ಉಳಿತಾಯವನ್ನು ಚಿನ್ನ ಖರೀದಿಗೆ ಬಳಸಲು ಇಷ್ಟಪಡುತ್ತಾರೆ. ಇನ್ನು ಹೆಚ್ಚಾಗಿ ಯಾವುದೇ ಕಾರ್ಯಕ್ರಮ ಇದ್ದರೆ ಹೊಸ ಚಿನ್ನದ ಡಿಸೈನ್ ಖರೀದಿಸಲು ಎಲ್ಲರು ಯೋಚಿಸುತ್ತಾರೆ. ಆದರೆ ಇತ್ತೀಚಿಗೆ ಚಿನ್ನದ ದರದಲ್ಲಿ ಗಣನೀಯ ಏರಿಕೆ ಕಾಣುತ್ತಿದೆ.
ಆಭರಣ ಖರೀದಿಗೆ ಜನರು ಬೆಲೆ ಇಳಿಕೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ ಚಿನ್ನದ ಬೆಲೆ (Gold Price) ಏರಿಕೆಯಾಗುತ್ತಿದೆ ಹೊರತು ಯಾವುದೇ ರೀತಿಯ ಇಳಿಕೆ ಕಂಡು ಬರುತ್ತಿಲ್ಲ. ಜುಲೈ ನಲ್ಲಿ ಚಿನ್ನ ಬಹುತೇಕ ಏರಿಕೆ ಕಂಡಿದೆ. ಆದರೆ ಆಗಸ್ಟ್ ಆರಂಭದಲ್ಲಿ ಒಮ್ಮೆ ಚಿನ್ನದ ಬೆಲೆಯಲ್ಲಿ 200 ರೂ.ಇಳಿಕೆಯಾಗಿದ್ದು.
ಚಿನ್ನದ ಬೆಲೆ ಏರಿಕೆಯಾದರೆ ಬರೋಬ್ಬರಿ 400 ರಿಂದ 700 ರೂ. ಏರಿಕೆಯಾಗುತ್ತದೆ. ಚಿನ್ನದ ಬೆಲೆಯ ಇಳಿಕೆಯ ಪ್ರಮಾಣ ಕಡಿಮೆ ಇರುತ್ತದೆ. ಇದೀಗ ಮತ್ತೆ ಚಿನ್ನದ ಬೆಲೆ ಏರಿಕೆಯಾಗುವ ಮೂಲಕ ಜನಸಾಮಾನ್ಯರಿಗೆ ಆಘಾತ ನೀಡಿದೆ.
ಇಂದು ಮತ್ತೆ 200 ರೂ. ಏರಿಕೆ ಕಂಡ ಚಿನ್ನ
ನಿನ್ನೆಯ ಚಿನ್ನದ ದರಕ್ಕೆ ಹೋಲಿಸಿದರೆ ಇಂದು ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ನಿನ್ನೆ ಚಿನ್ನದ ಬೆಲೆಯೂ ಸ್ಥಿರತೆ ಕಂಡು ಒಂದಿತ್ತು. ಆದರೆ ಇಂದು ಹತ್ತು ಗ್ರಾಂ ಚಿನ್ನದಲ್ಲಿ ಮತ್ತೆ 200 ರೂ. ಏರಿಕೆಯಾಗಿದೆ. ಇದೀಗ ಇಂದಿನ 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯ ಬಗ್ಗೆ ಮಾಹಿತಿ ತಿಳಿಯೋಣ.
22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ (22 Carat Gold Rate)
ಇಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 5,515 ರೂ. ಆಗಿದೆ. ಇಂದು ಒಂದು ಗ್ರಾಂ ಚಿನ್ನದಲ್ಲಿ 20 ರೂ. ಹಾಗೂ ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 160 ಏರಿಕೆಯಾಗಿದೆ.ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂ. ಏರಿಕೆಯಾಗಿದ್ದು, ಇಂದು ಹತ್ತು ಗ್ರಾಂ ಚಿನ್ನದ ಬೆಲೆ 55,150 ರೂ. ಆಗಿದೆ. ನಿನ್ನೆ ಹತ್ತು ಚಿನ್ನ 54,950 ರೂ. ಗೆ ಲಭ್ಯವಾಗಿತ್ತು. ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 43,960 ಇದ್ದು, ಇಂದು 44,120 ರೂ. ಆಗಿದೆ. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 2000 ರೂ. ಏರಿಕೆಯಾಗುವ ಮೂಲಕ ಇಂದಿನ ನೂರು ಗ್ರಾಂ ಚಿನ್ನದ ಬೆಲೆ 5,51,500 ರೂ. ತಲುಪಿದೆ.
24 ಕ್ಯಾರೆಟ್ ಚಿನ್ನದ ಬೆಲೆ (24 Carat Gold Rate)
ಇಂದು ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 6,016 ರೂ. ಆಗಿದೆ. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 210 ರೂ. ಏರಿಕೆಯಾಗಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 59,950 ಇದ್ದು, ಇಂದು 60,160 ರೂ. ಆಗಿದೆ. ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 47,960 ಇದ್ದು, ಇಂದು 48,128 ರೂ. ಆಗಿದೆ. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 168 ರೂ. ಏರಿಕೆಯಾಗಿದೆ. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 2,100 ರೂ. ಏರಿಕೆಯಾಗಿದ್ದು, ನೂರು ಗ್ರಾಂ ಚಿನ್ನದ ಬೆಲೆ ಇಂದು 6,01,600 ರೂ. ತಲುಪಿದೆ.