2000 Currency: ಸೆಪ್ಟೆಂಬರ್ 30 ರ ನಂತರ 2000 ರೂ ನೋಟಿನ ಗತಿ ಏನು, ಉತ್ತರ ನೀಡಿದ ಕೇಂದ್ರ ಸರ್ಕಾರ.
ಸೆಪ್ಟೆಂಬರ್ 30 ರ ನಂತರ 2000 ರೂಪಾಯಿ ನೋಟುಗಳು ಏನಾಗುತ್ತದೆ ಎಂದು ತಿಳಿದುಕೊಳ್ಳಿ.
2000 Currency Notes Exchange Last Date: ದೇಶದಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳು ಬ್ಯಾನ್ ಆಗಿವೆ ಎಂಬ ಸುದ್ದಿ ಹರಿದಾಡುತ್ತಿದೆ. 2 ಸಾವಿರ ರೂಪಾಯಿ ನೋಟನ್ನು ಹೊಂದಿರುವವರು ಬೇಗನೆ ಬ್ಯಾಂಕಿಗೆ ಹೋಗಿ ನೋಟನ್ನು ಎಕ್ಸ್ಚೇಂಜ್ ಮಾಡಿಕೊಳ್ಳಬೇಕು ಎಂಬ ಸುದ್ದಿ ಸಹ ಹೊರ ಬಿದ್ದಿದೆ. ದೇಶದಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ತೀರ್ಮಾನಿಸಿದೆ.
2 ಸಾವಿರ ರೂಪಾಯಿ ನೋಟು ಬ್ಯಾನ್
ಮೇ 23 ರಿಂದ ಸೆಪ್ಟೆಂಬರ್ 30 ರೊಳಗೆ 2 ಸಾವಿರ ರೂಪಾಯಿ ನೋಟುಗಳನ್ನು ಬ್ಯಾಂಕ್ ಗಳಲ್ಲಿ ಎಕ್ಸ್ಚೇಂಜ್ ಮಾಡಿಕೊಳ್ಳಬಹುದಾಗಿದೆ. ಇದರ ಬೆನ್ನಲ್ಲೇ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಆರ್ ಬಿ ಐ ಬ್ಯಾನ್ ಮಾಡಿದೆ. ಅಂದರೆ ನಿಷೇಧ ಮಾಡಿದೆ ಎಂದು ಹೇಳಲಾಗುತ್ತಿದೆ.
ಸೆಪ್ಟೆಂಬರ್ 30 ರ ನಂತರ 2 ಸಾವಿರ ರೂಪಾಯಿ ನೋಟನ್ನು ಏನು ಮಾಡಬೇಕು
ಇದೀಗ ಸೆಪ್ಟೆಂಬರ್ 30 ರ ರ ನಂತರ 2000 ರೂಪಾಯಿ ನೋಟುಗಳನ್ನು ಏನು ಮಾಡಬೇಕು ಎಂಬ ಪ್ರಶ್ನೆ ಹೊರ ಬಿದ್ದಿದೆ. ಸೆಪ್ಟೆಂಬರ್ ನಂತರ 2 ಸಾವಿರ ರೂಪಾಯಿ ನೋಟುಗಳು ತಮ್ಮ ಕಾನೂನುಬದ್ಧ ಸ್ಥಿತಿಯನ್ನು ಕಾಯ್ದುಕೊಳ್ಳುತ್ತದೆ ಎಂದು ದೃಢಪಡಿಸಿದೆ.
RBI ಅನ್ನು ಪದೇ ಪದೇ ಕೇಳಲಾಗುವ ಪ್ರಶ್ನೆಗಳ ಪ್ರಕಾರ ಸಾರ್ವಜನಿಕರು ಸಾಮಾನ್ಯ ವಾಹಿವಾಟುಗಳಿಗಾಗಿ 2000 ರೂಪಾಯಿ ನೋಟುಗಳನ್ನು ಬಳಸುವುದನ್ನು ಮುಂದುವರಿಸಬಹುದು. ವ್ಯಕ್ತಿಗಳು ಅವುಗಳನ್ನು ಪಾವತಿಯಾಗಿ ಸ್ವೀಕರಿಸಬಹುದು ಅಥವಾ ಯಾವುದೇ ನಿರ್ಬಂಧಗಳಿಲ್ಲದೆ ತಮ್ಮ ಸ್ವಂತ ವಹಿವಾಟುಗಳಿಗೆ ಬಳಸಿಕೊಳ್ಳಬಹುದು.
ಸೆಪ್ಟೆಂಬರ್ 30, 2023 ರಂದು ಅಥವಾ ಅದಕ್ಕೂ ಮೊದಲು ತಮ್ಮ 2000 ರೂ. ನೋಟುಗಳನ್ನು ಠೇವಣಿ ಮಾಡಲು ಮತ್ತು ಅಥವಾ ವಿನಿಮಯ ಮಾಡಿಕೊಳ್ಳಲು RBI ಸಾರ್ವಜನಿಕರಿಗೆ ಮನವಿ ಮಾಡಿದೆ.