RBI On 2000 Rs: 2000 ರೂ ನೋಟುಗಳ ಮೇಲೆ ದಿಡೀರ್ ಇನ್ನೊಂದು ಘೋಷಣೆ ಮಾಡಿದ RBI, RBI ಅಧಿಕೃತ ಘೋಷಣೆ

2000 ಮುಖಬೆಲೆಯ ನೋಟುಗಳ ಮಾರುಕಟ್ಟೆಯಲ್ಲಿ ಇನ್ನು ಎಷ್ಟಿವೆ ಗೊತ್ತಾ?

2000 Note Exchange Details: ಭಾರತದಲ್ಲಿ ನವೆಂಬರ್ 2016 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 500 ಹಾಗೂ 1000 ರೂ ಮುಖ ಬೆಲೆಯ ನೋಟುಗಳನ್ನು ರದ್ದುಗೊಳಿಸಿದರು. ಇದಾದ ನಂತರ ಮಾರುಕಟ್ಟೆಗೆ 500 ರೂ ಹಾಗೂ 2000 ರೂ ನೋಟುಗಳನ್ನು ಪರಿಚಯಿಸಲಾಯಿತು. ಆದರೆ ಆ 2000 ರೂ ಮುಖಬೆಲೆಯ ನೋಟುಗಳನ್ನು ಮೇ 19, 2023 ರಂದು ಅಮಾನಿಕರಣಗೊಳಿಸಲಾಯಿತು.

RBI ಜನರ ಬಳಿ 2000 ರೂ ನೋಟುಗಳನ್ನು ಬ್ಯಾಂಕ್ ನಲ್ಲಿ ಠೇವಣಿ ಮಾಡುವಂತೆ ಮನವಿ ಮಾಡಿತು. ಜನಸಾಮಾನ್ಯರು ತಮ್ಮ ಬಳಿ ಇರುವ 2,000 ರೂ ಮುಖಬೆಲೆಯ ನೋಟುಗಳನ್ನು ಬ್ಯಾಂಕ್ ನಲ್ಲಿ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಿತು.

2000 Note Exchange Details
Image Credit: Zeebiz

2000 ರೂ ಮುಖಬೆಲೆಯ ನೋಟುಗಳು ಮಾರುಕಟ್ಟೆಯಲ್ಲಿ ಇನ್ನು ಎಷ್ಟಿವೆ ಗೊತ್ತಾ…?
ಮೇ 19, 2023 ರಂದು Central Bank 2000 ರೂ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿತ್ತು. ಮೇ 19 ರ ಹೊತ್ತಿಗೆ 3.56 ಲಕ್ಷ ಕೋಟಿ ಮೌಲ್ಯದ ಅಂದಾಜು 2000 ರೂಪಾಯಿ ನೋಟುಗಳು ಚಲಾವಣೆಯಲ್ಲಿದ್ದವು. ಈ ನೋಟನ್ನು ಬದಲಾಯಿಸುವ ಅಥವಾ ಠೇವಣಿ ಮಾಡುವ ಆಯ್ಕೆಯನ್ನು ಸೆಪ್ಟೆಂಬರ್ 30, 2023 ರವರೆಗೆ ನೀಡಲಾಗಿತ್ತು. ನಂತರ ಈ ಗಡುವನ್ನು ಅಕ್ಟೋಬರ್ 7, 2023 ರವರೆಗೆ ವಿಸ್ತರಿಸಲಾಯಿತು.

ಜನವರಿ 31, 2024 ರವರೆಗೆ 2000 ರೂ ಮುಖಬೆಲೆಯ ನೋಟುಗಳಲ್ಲಿ ಕೇವಲ 97.5 ಪ್ರತಿಶತದಷ್ಟು ಮಾತ್ರ ಹಿಂತಿರುಗಿಸಲಾಗಿದೆ. ಇನ್ನು 8,897 ಕೋಟಿ ರೂಪಾಯಿ ಮೌಲ್ಯದ ಈ ದೊಡ್ಡ ನೋಟುಗಳು ಮಾರುಕಟ್ಟೆಯಲ್ಲಿವೆ. ಗಡುವು ಮುಗಿದರೂ ಜನರು ಇಷ್ಟು ದೊಡ್ಡ ಮೊತ್ತವನ್ನು ಇಟ್ಟುಕೊಂಡಿದ್ದಾರೆ. RBI ಪ್ರಕಾರ 2000 ರೂಪಾಯಿ ನೋಟುಗಳ ಚಲಾವಣೆಯಲ್ಲಿ ಗಣನೀಯ ಇಳಿಕೆಯಾಗಿದೆ. ಜನವರಿಯಲ್ಲಿ ಬ್ಯಾಂಕ್ ಠೇವಣಿಗಳಲ್ಲಿ ಉತ್ತಮ ಜಿಗಿತ ಕಂಡುಬಂದಿದೆ. ಮೀಸಲು ಹಣವೂ ಒಂದು ವರ್ಷದ ಹಿಂದೆ ಶೇಕಡಾ 11.2 ರಿಂದ ಫೆಬ್ರವರಿ 9 ರ ಹೊತ್ತಿಗೆ ಶೇಕಡಾ 5.8 ಕ್ಕೆ ಇಳಿದಿದೆ.

Join Nadunudi News WhatsApp Group

Join Nadunudi News WhatsApp Group