2000 Rs: ಬೆಂಗಳೂರಿನಲ್ಲಿ ರಸ್ತೆ ಬದಿಯಲ್ಲಿ ಬ್ಯಾಗ್ ನಲ್ಲಿ ಸಿಕ್ಕ 2000 ನೋಟಿನಲ್ಲಿ ಬಿಗ್ ಟ್ವಿಸ್ಟ್, ಇದು ಪಕ್ಕ ಪ್ಲ್ಯಾನ್.
ರಸ್ತೆ ಬದಿಯಲ್ಲಿ ಬ್ಯಾಗ್ ನಲ್ಲಿ ಪತ್ತೆಯಾಗಿದೆ 10 ಕೋಟಿ ಮೌಲ್ಯದ 2000 ನೋಟ್.
2000 Rs Note: ಪ್ರಸ್ತುತ ದೇಶದಲ್ಲಿ 2000 ರೂ. ಮುಖಬೆಲೆಯ ನೋಟ್ ಗಳನ್ನೂ ಆರ್ ಬಿಐ (RBI) ಹಿಂಪಡೆಯಲು ನಿರ್ಧರಿಸಿದೆ. ದೇಶದಲ್ಲಿನ ಕಪ್ಪು ಹಣದ ನಿರ್ಮೂಲನೆಗಾಗಿ ಆರ್ ಬಿಐ ಈ ದಿಟ್ಟ ನಿರ್ಧಾರವನ್ನು ಕೈಗೊಂಡಿದೆ. ಇದೀಗ ದೇಶದಲ್ಲಿ ಎರಡನೇ ಬಾರಿ ನೋಟ್ ಬ್ಯಾನ್ ಆಗಿದೆ.
ಈ ಹಿಂದೆ ಕೇಂದ್ರದ ಮೋದಿ ಸರ್ಕಾರ 2016 ರಲ್ಲಿ 500 ಮತ್ತು 1000 ರೂ. ಮುಖಬೆಲೆಯ ನೋಟ್ ಗಳನ್ನೂ ಬ್ಯಾನ್ ಮಾಡಿತ್ತು. ನಂತರ ಹೊಸ 500 ಮತ್ತು 2000 ನೋಟುಗಳನ್ನು ಚಲಾವಣೆಗೆ ತಂದಿತ್ತು. 2000 ನೋಟು ಚಲಾವಣೆಗೆ ಬಂದ ಬಳಿಕ ಆ ಸಂದರ್ಭದಲ್ಲಿ ಮತ್ತಷ್ಟು ಕಪ್ಪು ಹಣದ ಸಂಗ್ರಹಣೆ ಹೆಚ್ಚುತ್ತಿತ್ತು.
ದೇಶದಲ್ಲಿ 2000 ನೋಟುಗಳು ಬ್ಯಾನ್
ದೇಶದಲ್ಲಿನ ಭ್ರಷ್ಟಾಚಾರ ನಿರ್ಮೂಲನೆಗಾಗಿ ಕೇಂದ್ರದ ಮೋದಿ ಸರ್ಕಾರ ಮತ್ತೊಮ್ಮೆ 2023 ರಲ್ಲಿ 2000 ನೋಟುಗಳನ್ನು ಬ್ಯಾನ್ ಮಾಡಲು ನಿರ್ಧರಿಸಿತ್ತು. 2000 ನೋಟು ಬದಲಾವಣೆ ಹಾಗು ಠೇವಣಿ ಪ್ರಕ್ರಿಯೆಗೆ ಸೆಪ್ಟೆಂಬರ್ 30, 2023 ರ ತನಕ ಸಮಯಾವಕಾಶವನ್ನು ನೀಡಿತ್ತು. ನೋಟು ವಿನಿಮಯ ಪ್ರಕ್ರಿಯೆಯಲ್ಲಿ ಜನರು ತೊಡಗಿಕೊಂಡಿದ್ದರು.
ಇನ್ನು ಆರ್ ಬಿಐ ಒಂದಿ ದಿನಕ್ಕೆ ಇಂತಿಷ್ಟೇ ಹಣವನ್ನು ವಿನಿಮಯ ಅಥವಾ ಠೇವಣಿ ಮಾಡಬೇಕು ಎನ್ನುವ ಬಗ್ಗೆ ಕೂಡ ನಿಯಮವನ್ನು ಹೊರಡಿಸಿತ್ತು. ಹೀಗಾಗಿ ಕೋಟಿಗಟ್ಟಲೆ ಕಪ್ಪು ಹಣದ ವಿನಿಮಯ ಕಷ್ಟವಾಗಿತ್ತು. ಇದೀಗ ಬೆಂಗಳೂರಿನಲ್ಲಿ ಕಂತೆ ಕಂತೆ ನೋಟಿನ ಬ್ಯಾಗ್ ಗಳು ರಸ್ತೆ ಬದಿಯಲ್ಲಿ ಬಿದ್ದಿವೆ. ಈ ನೋಟುಗಳು ಕಂಡ ಜನರು ಅಚ್ಚರಿ ಪಡುತ್ತಿದ್ದಾರೆ.
ರಸ್ತೆ ಬದಿಯಲ್ಲಿ ಬ್ಯಾಗ್ ನಲ್ಲಿ ಪತ್ತೆಯಾಗಿದೆ 10 ಕೋಟಿ ಮೌಲ್ಯದ 2000 ನೋಟ್
ಬೆಂಗಳೂರು ಕನಕಪುರ ರಸ್ತೆಯ ತಲಘಟ್ಟಪುರ ಸಮೀಪದ ನೈಸ್ ರೋಡ್ ಪಕ್ಕದಲ್ಲಿ 2 ಬಾಕ್ಸ್ ಮತ್ತು 1 ಟ್ರ್ಯಾಲಿ ಬ್ಯಾಗ್ ನಲ್ಲಿ 2000 ಮುಖಬೆಲೆಯ ನೋಟುಗಳು ಪತ್ತೆಯಾಗಿವೆ. ರಸ್ತೆ ಬದಿಯಲ್ಲಿ ಪತ್ತೆಯಾದ ಬ್ಯಾಗ್ ಮತ್ತು ಬಾಕ್ಸ್ ನಲ್ಲಿ10 ಕೋಟಿ ಮೌಲ್ಯದ 2000 ರೂ. ನೋಟುಗಳು ಕಂಡುಬಂದಿದೆ. ರಸ್ತೆ ಬದಿಯಲ್ಲಿ ಹಣ ಕಂಡವರು ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ರಸ್ತೆ ಬದಿಯಲ್ಲಿ ಬ್ಯಾಗ್ ನಲ್ಲಿ ಸಿಕ್ಕ 2000 ನೋಟಿನಲ್ಲಿ ಬಿಗ್ ಟ್ವಿಸ್ಟ್
ರಸ್ತೆ ಬದಿಯಲ್ಲಿ ಪತ್ತೆಯಾದ ಬ್ಯಾಗ್ ಮತ್ತು ಬಾಕ್ಸ್ ನಲ್ಲಿ10 ಕೋಟಿ ಮೌಲ್ಯದ 2000 ರೂ. ನೋಟುಗಳು ಇದೆ ಎಂದು ಮಾಹಿತಿ ತಿಳಿದ ಹೊಯ್ಸಳ ವಾಹನ ಮತ್ತು ಸಂಚಾರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಬಾಕ್ಸ್ ಮತ್ತು ಬ್ಯಾಗ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ವೇಳೆ ರಸ್ತೆ ಬದಿಯಲ್ಲಿ ಬ್ಯಾಗ್ ನಲ್ಲಿ ಸಿಕ್ಕ 2000 ನೋಟಿನಲ್ಲಿ ಬಿಗ್ ಟ್ವಿಸ್ಟ್ ಎದುರಾಗಿದೆ. 10 ಕೋಟಿ ಮೌಲ್ಯದ 2000 ರೂ. ನೋಟುಗಳು ಎಲ್ಲಾ ಜೆರಾಕ್ಸ್ ಪ್ರತಿಗಳು ಮತ್ತು ಬಿಳಿ ಕಾಗದ ಎಂದು ಸ್ಪಷ್ಟಪಡಿಸಲಾಗಿದೆ.