2000 Note: 2000 ರೂ ನೋಟುಗಳ ಮೇಲೆ ಇನ್ನೊಂದು ಆದೇಶ ಹೊರಡಿಸಿದ ಕೇಂದ್ರ, ಬಿಗ್ ಅಪ್ಡೇಟ್.

2000 ರೂಪಾಯಿ ನೋಟುಗಳ ವಿಷಯವಾಗಿ ಇನ್ನೊಂದು ಆದೇಶ ಹೊರಡಿಸಿದ RBI

2000 Rupees Notes Latest Updated: ಇತ್ತೀಚಿನ ದಿನಗಳಲ್ಲಿ ನೋಟಿನ ವಿಚಾರವಾಗಿ ಸ್ಕ್ಷ್ಟು ಸುದ್ದಿಗಳು ಹರಿದಾಡುತ್ತಿವೆ. 2,000 ಮುಖಬೆಲೆಯ ನೋಟುಗಳ ಬಿಡುಗಡೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India) ನಿಲ್ಲಿಸುವಂತೆ ಬ್ಯಾಂಕುಗಳಿಗೆ ಸೂಚನೆ ಹೊರಡಿಸಿತ್ತು.

RBI ಆದೇಶದ ಮೇರೆಗೆ 2000 ನೋಟುಗಳ ಮುಂದ್ರಣವನ್ನು ನಿಲ್ಲಿಸಲಾಗಿದೆ. 2000 ನೋಟ್ ರದ್ದಾದ ಸಮಯದಿಂದ ನೋಟಿನ ವಿಚಾರವಾಗಿ ಹೊಸ ಹೊಸ ಆದೇಶಗಳು ಹೊರಬೀಳುತ್ತಲೇ ಇದೆ.

Center issued another order on Rs 2000 notes
Image Credit: Thehindu

2000 ನೋಟ್ ಬ್ಯಾನ್
ಈಗಾಗಲೇ ಚಲಾವಣೆಯಲ್ಲಿರುವ ನೋಟುಗಳ ಬಗ್ಗೆ ಸಾಕಷ್ಟು ನಕಲಿ ಸುದ್ದಿಗಳು ಕೂಡ ಹರಡಿದ್ದವು. ಇನ್ನು 2000 ನೋಟ್ ಬ್ಯಾನ್ ಆದ ಕಾರಣ 500 ರೂ. ನೋಟುಗಳುಕೂಡ ಬ್ಯಾನ ಆಗಲಿವೆ ಹಾಗೂ ಹೊಸ 1000 ಮುಖಬೆಲೆಯ ನೋಟ್ ಚಲಾವಣೆಗೆ ಬರಲಿದೆ ಎನ್ನುವ ಸಾಕಷ್ಟು ನಕಲಿ ಸುದ್ದಿಗಳಿಗೆ ಆರ್ ಬಿಐ ಸ್ಪಷ್ಟನೆ ನೀಡಿದೆ.

2000 ನೋಟ್ ಬ್ಯಾನ್ ಬಳಿಕ ಯಾವುದೇ ರೀತಿಯ ಹೊಸ ನೋಟ್ ಚಲಾವನೆಗಳಿ 500 ರೂ. ನೋಟ್ ಬ್ಯಾನ್ ಮಾಡುವ ನಿರ್ಧಾರ ಕೈಗೊಂಡಿಲ್ಲ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ. ಇದೀಗ 2000 ಮುಖಬೆಲೆಯ ನೋಟಿನ ವಿಚರವಾಗಿ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.

ಸೆಪ್ಟೆಂಬರ್ 30 ರವರೆಗೂ ಸಿಗಲಿದೆ ವಿನಿಮಯ ಸೌಲಭ್ಯ
ಇನ್ನು ಜನಸಾಮಾನ್ಯರು ತಮ್ಮ ಬಳಿ ಇರುವ 2,000 ನೋಟುಗಳನ್ನು ಏನು ಮಾಡುವುದು ಎನ್ನುವ ಬಗ್ಗೆ ಚಿಂತೆಯಲ್ಲಿರುತ್ತಾರೆ. ನೀವು ನಿಮ್ಮ ಬಳಿ ಇರುವ 2,000 ರೂ. ನೋಟುಗಳ ಠೇವಣಿ ಅಥವಾ ವಿನಿಮಯಕ್ಕಾಗಿ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಬಹುದು.

Join Nadunudi News WhatsApp Group

Center issued another order on Rs 2000 notes
Image Credit: Indiatvnews

2,000 ರೂ.ನೋಟುಗಳ ವಿನಿಮಯ ಹಾಗೂ ಠೇವಣಿ ಸೌಲಭ್ಯವು ಸೆಪ್ಟೆಂಬರ್ 30 ,2023 ರ ತನಕ ಲಭ್ಯವಿರುತ್ತದೆ. ಆರ್ ಬಿಐ ನ 19 ಪ್ರಾದೇಶಿಕ ಕಚೇರಿಗಳಲ್ಲಿ ವಿನಿಮಯ ಸೌಲಭ್ಯ ಲಭ್ಯವಿದೆ. ಇದೀಗ ಜನಸಾಮಾನ್ಯರು ತಮ್ಮ ಬಳಿ ಇರುವ 2000 ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡುವಲ್ಲಿ ಬ್ಯುಸಿ ಆಗಿದ್ದಾರೆ.

ನೋಟು ವಿನಿಮಯ ಪ್ರಕ್ರಿಯೆಯ ಗಡುವು ವಿಸ್ತರಣೆ ಆಗಲಿದೆಯೇ
ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು 2000 ರೂಪಾಯಿ ನೋಟುಗಳ ವಿಚಾರವಾಗಿ ಮಹತ್ವದ ಮಾಹಿತಿಯನ್ನು ಹೊರಡಿಸಿದ್ದಾರೆ. ಇನ್ನು ಎರಡು ತಿಂಗಳಿನಲ್ಲಿ 2000 ನೋಟುಗಳ ವಿನಿಮಯ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎನ್ನುವ ಬಗ್ಗೆ ಮಾಹಿತಿ ನೀಡಲಾಗಿದೆ.

The exchange facility will be available till September 30
Image Credit: Bqprime

ಇನ್ನು ನೋಟು ವಿನಿಮಯ ಪ್ರಕ್ರಿಯೆಯ ಗಡುವು ವಿಸ್ತರಣೆ ಆಗುವ ಬಗ್ಗೆ ಈಗಾಗಲೇ ಮಾಹಿತಿ ಹೊರಬಿದ್ದದವು. ಆದರೆ ವಿನಿಮಯ ಪ್ರಕ್ರಿಯೆಯ ಗಡುವು ವಿಸ್ತರಣೆಬಗ್ಗೆ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಸೆಪ್ಟೆಂಬರ್ 30 ರ ತನಕ ಮಾತ್ರ 2000 ನೋಟು ವಿನಿಮಯ ಹಾಗೂ ಠೇವಣಿಗೆ ಅವಕಾಶವಿರುತ್ತದೆ.

Join Nadunudi News WhatsApp Group