2000 Rs Note: 2000 ರೂ ನೋಟುಗಳು ಬ್ಯಾನ್, ನೋಟುಗಳು ಇದ್ದವವರು ಆದಷ್ಟು ಬೇಗ ಈ ಕೆಲಸ ಮಾಡಿ.
2000 ರೂಪಾಯಿ ನೋಟ್ ಬ್ಯಾನ್ ಮಾಡಲಾಗಿದ್ದು ಜನರು ಆದಷ್ಟು ಬೇಗ ನೋಟುಗಳನ್ನ ಬದಲಾಯಿಸಿಕೊಳ್ಳಬೇಕು.
2000 Rs Note Ban In India: ಇತ್ತೀಚಿನ ದಿನಗಳಲ್ಲಿ ನೋಟು ಬ್ಯಾನ್ (Note Ban) ಸುದ್ದಿಗಳು ಸಾಕಷ್ಟು ಹರಿದಾಡುತ್ತಿದೆ. ಇನ್ನು ಹಳೆಯ ನೋಟಿನ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ಹಳೆಯ 5,00 ಮತ್ತು 1,000 ರೂ. ಮುಖಬೆಲೆಯ ನೋಟುಗಳು ಮತ್ತೆ ಚಲಾವಣೆಗೆ ಬರುತ್ತದೆ ಎನ್ನುವ ಬಗ್ಗೆ ಸಾಕಷ್ಟು ಸುದ್ದಿಗಳು ವೈರಲ್ ಆಗಿದ್ದವು.
ಆದರೆ ನೋಟಿನ ವಿಚಾರವಾಗಿ ಹರಿದಾಡುವ ಎಲ್ಲ ರೀತಿಯ ನಕಲಿ ಸುದ್ದಿಗಳಿಗೆ ಕೇಂದ್ರ ಸರ್ಕಾರ್ ಸ್ಪಷ್ಟನೆ ನೀಡುತ್ತಾ ಬಂದಿದೆ. ಸದ್ಯ ಈಗ ಮತ್ತೆ ಕೇಂದ್ರ ಸರ್ಕಾರ 2000 ರೂಪಾಯಿ ನೋಟುಗಳನ್ನ ರದ್ದು ಮಾಡಿರುವುದರ ಬಗ್ಗೆ ಮಾಹಿತಿಯನ್ನ ಹಂಚಿಕೊಂಡಿದ್ದು ಜನರು ಗೊಂದಲಕ್ಕೆ ಒಳಗಾಗಿದ್ದಾರೆ.
ಹೊಸ 2,000 ರೂ. ನೋಟುಗಳು ಬ್ಯಾನ್
2,000 ಮುಖಬೆಲೆಯ ನೋಟುಗಳ ಬಿಡುಗಡೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India) ತಕ್ಷಣವೇ ನಿಲ್ಲಿಸುವಂತೆ ಬ್ಯಾಂಕುಗಳಿಗೆ ಸೂಚನೆ ಹೊರಡಿಸಿದೆ. 2,000 ಮುಖಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸಲು ಕಾರಣವೆಂದರೆ, ಮಾರ್ಚ್ 2017 ಕ್ಕಿಂತ ಮೊದಲು ಹೆಚ್ಚಿನ 2,000 ನೋಟುಗಳು ಚಲಾವಣೆಗೆ ಬಂದಿದೆ. ಈ ನೋಟುಗಳ ಜೀವಿತಾವಧಿ 4 -5 ವರ್ಷಗಳ ಕೊನೆಯಲ್ಲಿದೆ.
ಈ ಮುಖಬೆಲೆಯ ನೋಟುಗಳನ್ನು ಸಾಮಾನ್ಯವಾಗಿ ವಹಿವಾಟುಗಳಿಗೆ ಬಳಸಲಾಗುವುದಿಲ್ಲ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು 2,000 ನೋಟುಗಳನ್ನು ಮುದ್ರಣವನ್ನು ನಿಲ್ಲಿಸಲು ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ.
ಸೆಪ್ಟೆಂಬರ್ 30 ರವರೆಗೂ ಸಿಗಲಿದೆ ವಿನಿಮಯ ಸೌಲಭ್ಯ
ಇನ್ನು ಜನಸಾಮಾನ್ಯರು ತಮ್ಮ ಬಳಿ ಇರುವ 2,000 ನೋಟುಗಳನ್ನು ಏನು ಮಾಡುವುದು ಎನ್ನುವ ಬಗ್ಗೆ ಚಿಂತೆಯಲ್ಲಿರುತ್ತಾರೆ. ನೀವು ನಿಮ್ಮ ಬಳಿ ಇರುವ 2,000 ರೂ. ನೋಟುಗಳ ಠೇವಣಿ ಅಥವಾ ವಿನಿಮಯಕ್ಕಾಗಿ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಬಹುದು.
2,000 ರೂ.ನೋಟುಗಳ ವಿನಿಮಯ ಹಾಗೂ ಠೇವಣಿ ಸೌಲಭ್ಯವು ಸೆಪ್ಟೆಂಬರ್ 30 ,2023 ರ ತನಕ ಲಭ್ಯವಿರುತ್ತದೆ. ಆರ್ ಬಿಐ ನ 19 ಪ್ರಾದೇಶಿಕ ಕಚೇರಿಗಳಲ್ಲಿ ವಿನಿಮಯ ಸೌಲಭ್ಯ ಲಭ್ಯವಿದೆ.