Deposit Limit: 2000 ರೂಪಾಯಿ ಎಷ್ಟು ನೋಟುಗಳನ್ನ ಬ್ಯಾಂಕಿನಲ್ಲಿ ಜಮಾ ಮಾಡಬಹುದು, ನಿಯಮ ಅನ್ವಯ.

ಬ್ಯಾಂಕಿನಲ್ಲಿ ಒಮ್ಮೆ 2,000 ರೂಪಾಯಿಯ ಎಷ್ಟು ನೋಟುಗಳನ್ನ ಜಮಾ ಮಾಡಬಹುದು ತಿಳಿದುಕೊಳ್ಳಿ.

2000 Rupees Note Deposit Limit: ದೇಶದಲ್ಲಿ ಇದೀಗ ಮತ್ತೆ ನೋಟ್ ಬ್ಯಾನ್  ಭೀತಿ ಎದುರಾಗಿದೆ. ಕೇಂದ್ರ ಸರ್ಕಾರ ನೋಟ್ ಬ್ಯಾನ್ ವಿಚಾರವಾಗಿ ಮಹತ್ವದ ನಿರ್ಧಾರ ಕೈಗೊಂಡಿದೆ. 2,000 ಮುಖಬೆಲೆಯ ನೋಟ್ ಗಳನ್ನೂ ರದ್ದುಪಡಿಸುವುದಾಗಿ ಆರ್ ಬಿಐ ಮಾಹಿತಿ ನೀಡಿದೆ. ನೋಟು ವಿನಿಮಯ ಪ್ರಕ್ರಿಯೆಗೆ ಸರ್ಕಾರ ನಿಗದಿತ ಸಮಯವನ್ನು ನೀಡಿದೆ.

ಜನಸಾಮಾನ್ಯರು ತಮ್ಮ ಬಳಿ ಇರುವ 2000 ಮುಖಬೆಲೆಯ ನೋಟುಗಳನ್ನು ಬ್ಯಾಂಕ್ ನಲ್ಲಿ ಜಮಾ ಮಾಡುವ ಮೂಲಕ ವಿನಿಮಯ ಮಾಡಿಕೊಳ್ಳಬಹುದು. ಆದರೆ 2000 ರೂಪಾಯಿ ಎಷ್ಟು ನೋಟುಗಳನ್ನ ಬ್ಯಾಂಕಿನಲ್ಲಿ ಜಮಾ ಮಾಡಬಹುದು ಎನ್ನುವ ಬಗ್ಗೆ ಇದೀಗ ಮಾಹಿತಿ ತಿಳಿಯೋಣ.

One can deposit 10 notes of 2000 rupees i.e. 20000 rupees in the bank.
Image Credit: newsroompost

ಬ್ಯಾನ್ ಆಗಿವೆ 2000 ರೂ. ನೋಟುಗಳು
2,000 ಮುಖಬೆಲೆಯ ನೋಟುಗಳ ಬಿಡುಗಡೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India) ತಕ್ಷಣವೇ ನಿಲ್ಲಿಸುವಂತೆ ಬ್ಯಾಂಕುಗಳಿಗೆ ಸೂಚನೆ ಹೊರಡಿಸಿದೆ. ಮಾರ್ಚ್ 2017 ಕ್ಕಿಂತ ಮೊದಲು ಹೆಚ್ಚಿನ 2,000 ನೋಟುಗಳು ಚಲಾವಣೆಗೆ ಬಂದಿದೆ.

ಈ ನೋಟುಗಳ ಜೀವಿತಾವಧಿ 4 -5 ವರ್ಷಗಳ ಕೊನೆಯಲ್ಲಿದೆ. ಈ ಮುಖಬೆಲೆಯ ನೋಟುಗಳನ್ನು ಸಾಮಾನ್ಯವಾಗಿ ವಹಿವಾಟುಗಳಿಗೆ ಬಳಸಲಾಗುವುದಿಲ್ಲ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು 2,000 ನೋಟುಗಳನ್ನು ಮುದ್ರಣವನ್ನು ನಿಲ್ಲಿಸಲಾಗಿದೆ.

2000 ರೂಪಾಯಿ ಎಷ್ಟು ನೋಟುಗಳನ್ನ ಬ್ಯಾಂಕಿನಲ್ಲಿ ಜಮಾ ಮಾಡಬಹುದು
ಇನ್ನು ಜನಸಾಮಾನ್ಯರು ತಮ್ಮ ಬಳಿ ಇರುವ 2,000 ನೋಟುಗಳನ್ನು ಏನು ಮಾಡುವುದು ಎನ್ನುವ ಬಗ್ಗೆ ಚಿಂತೆಯಲ್ಲಿರುತ್ತಾರೆ. ನೀವು ನಿಮ್ಮ ಬಳಿ ಇರುವ 2,000 ರೂ. ನೋಟುಗಳ ಠೇವಣಿ ಅಥವಾ ವಿನಿಮಯಕ್ಕಾಗಿ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಬಹುದು.

Join Nadunudi News WhatsApp Group

Information about how many notes of 2000 rupees can be deposited.
Image Credit: inventiva

2,000 ರೂ.ನೋಟುಗಳ ವಿನಿಮಯ ಹಾಗೂ ಠೇವಣಿ ಸೌಲಭ್ಯವು ಸೆಪ್ಟೆಂಬರ್ 30 ,2023 ರ ತನಕ ಲಭ್ಯವಿರುತ್ತದೆ. ನೀವು ಬ್ಯಾಂಕಿನಲ್ಲಿ ಒಟ್ಟು ₹ 20,000 ಮೌಲ್ಯದ 2,000 ರೂಪಾಯಿ ನೋಟುಗಳನ್ನು ಒಂದೇ ಬಾರಿಗೆ ಠೇವಣಿ ಮಾಡಬಹುದು ಅಥವಾ ವಿನಿಮಯ ಮಾಡಿಕೊಳ್ಳಬಹುದು.

Join Nadunudi News WhatsApp Group