Note Print: ಒಂದು 2,000 ನೋಟನ್ನು ಪ್ರಿಂಟ್ ಮಾಡಲು RBI ಮಾಡುವ ಖರ್ಚು ಎಷ್ಟು ತಿಳಿದುಕೊಳ್ಳಿ.

2000 ಮತ್ತು 500 ರೂಪಾಯಿ ನೋಟುಗಳನ್ನ ಪ್ರಿಂಟ್ ಮಾಡಲು RBI ಎಷ್ಟು ಹಣವನ್ನ ಖರ್ಚು ಮಾಡುತ್ತದೆ ತಿಳಿದುಕೊಳ್ಳಿ.

2,000 Rupees Note Printing Cost: ದೇಶದಲ್ಲಿ ಪ್ರಸ್ತುತ 2000 ಮುಖಬೆಲೆಯ ನೋಟುಗಳು ರದ್ದಾಗಿವೆ. ಜನರು ತಮ್ಮ ಬಳಿ ಇರಲು ನೋಟುಗಳ ಬದಲಾವಣೆಯ ಬಗ್ಗೆ ಚಿಂತಿಸುವಂತಾಗಿದೆ. ಈ ಹಿಂದೆ 216 ರಲ್ಲಿ ಮೋದಿ ಅವರು 5,00 ಹಾಗೂ 1,000 ರೂ.ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ್ದರು.

ಈ ನೋಟುಗಳು ಬ್ಯಾನ್ ಆದ ತಕ್ಷಣ ಹೊಸ 2000 ನೋಟುಗಳು ಚಲಾವಣೆಗೆ ಬಂದವು. ನಿನ್ನೆ 2,000 ನೋಟುಗಳನ್ನು ಹಿಂಪಡೆಯಲು ಭಾರತೀಯ ರಿಸರ್ವ್ ಬಾಂಕ್ ನಿರ್ಧರಿಸಿದೆ. ಇದೀಗ 2,000 ಮುಖಬೆಲೆಯ ಒಂದು ನೋಟನ್ನು ಪ್ರಿಂಟ್ ಮಾಡಲು ಎಷ್ಟು ಖರ್ಚಾಗುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

2,000 Rupees Note Printing Cost
Image Source: Business Today

ಒಂದು 2,000 ನೋಟನ್ನು ಮುದ್ರಿಸಲು ತಗಲುವ ವೆಚ್ಚ 
ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಫ್ರೈವೇಟ್ ಲಿಮಿಟೆಡ್ (BRBNMPL) ಪ್ರಕಾರ 2,000 ಮುಖಬೆಲೆಯ ಒಂದು ನೋಟನ್ನು ಮುದ್ರಿಸಲು 3.54 ರೂ. ಖರ್ಚಾಗುತ್ತದೆ. ಹಾಗೆಯೆ 500 ರೂ. ನೋಟನ್ನು ಮುದ್ರಿಸಲು 3.09 ರೂ. ಖರ್ಚಾಗುತ್ತದೆ.

ಇನ್ನು ಒಟ್ಟಾಗಿ 2000 ರೂಪಾಯಿಯ 1,000 ನೋಟುಗಳಿಗೆ ಆರ್ ಬಿಐ 3,540 ರೂ. ಗಳನ್ನೂ ಖರ್ಚು ಮಾಡುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಫ್ರೈವೇಟ್ ಲಿಮಿಟೆಡ್ ಅಧಿಕೃತ ಮಾಹಿತಿಯನ್ನು ನೀಡಿದೆ.

ಇನ್ನು ಮಾರ್ಚ್ 2017 ಕ್ಕಿಂತ ಮೊದಲು ಹೆಚ್ಚಿನ 2,000 ನೋಟುಗಳು ಚಲಾವಣೆಗೆ ಬಂದಿದೆ. ಈ ನೋಟುಗಳ ಜೀವಿತಾವಧಿ 4 -5 ವರ್ಷಗಳ ಕೊನೆಯಲ್ಲಿದೆ. ಈ ಮುಖಬೆಲೆಯ ನೋಟುಗಳನ್ನು ಸಾಮಾನ್ಯವಾಗಿ ವಹಿವಾಟುಗಳಿಗೆ ಬಳಸಲಾಗುವುದಿಲ್ಲ.

Join Nadunudi News WhatsApp Group

ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು 2,000 ನೋಟುಗಳನ್ನು ಮುದ್ರಣವನ್ನು ನಿಲ್ಲಿಸಲು ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಇನ್ನು ಜನಸಾಮಾನ್ಯರಿಗೆ ತಮ್ಮ ಬಳಿ ಇರುವ 2,000 ರೂ. ನೋಟುಗಳ ವಿನಿಮಯ ಹಾಗೂ ಠೇವಣಿ ಸೌಲಭ್ಯವು ಸೆಪ್ಟೆಂಬರ್ 30 ,2023 ರ ತನಕ ಲಭ್ಯವಿರುತ್ತದೆ.

2,000 Rupees Note Printing Cost
Image Source: India Today

Join Nadunudi News WhatsApp Group