Ads By Google

2024 Best Ev Car: ಇದೆ ನೋಡಿ 2024 ಅತ್ಯುತ್ತಮ ಎಲೆಕ್ಟ್ರಿಕ್ ಕಾರ್, ಕಡಿಮೆ ಬೆಲೆ ಮತ್ತು ಆಕರ್ಷಕ ಮೈಲೇಜ್.

2024 Best Electric Car in world

Image Credit: Original Source

Ads By Google

2024 Best Electric Car Update: ವಿಶ್ವದ ಟಾಪ್ ಬೆಸ್ಟ್ ಕಾರ್ ಗಳಿಗೆ ವರ್ಷಕ್ಕೊಮ್ಮೆ ಪ್ರಶಸ್ತಿ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ. ಇದರಲ್ಲಿ 100 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ತೀರ್ಪುಗಾರರು ಭಾಗಿಯಾಗಿದ್ದಾರೆ ಮತ್ತು ಅವರು ಸ್ಪರ್ಧೆಯಲ್ಲಿ ಭಾಗವಹಿಸುವ ವಾಹನಗಳನ್ನು ದೊಡ್ಡ ಪ್ರಮಾಣದಲ್ಲಿ ಪರೀಕ್ಷಿಸುತ್ತಾರೆ ಮತ್ತು ಪ್ರಶಸ್ತಿಗಳನ್ನು ನೀಡುತ್ತಾರೆ. ಈ ವರ್ಷ ನಡೆದ ಪ್ರಶಸ್ತಿ ಕಾರ್ಯಕ್ರಮದಲ್ಲೂ HYUNDAI ಭಾಗವಹಿಸಿದೆ. ಇಲ್ಲಿ 2024 ರ ಅತ್ಯುತ್ತಮ ಎಲೆಕ್ಟ್ರಿಕ್ ಕಾರ್ ಅನಾವರಣಗೊಂಡಿದೆ.

Image Credit: Autocarindia

ಇದೆ ನೋಡಿ 2024 ಅತ್ಯುತ್ತಮ ಎಲೆಕ್ಟ್ರಿಕ್ ಕಾರ್
ವರ್ಲ್ಡ್ ಕಾರ್ ಅವಾರ್ಡ್ಸ್ 2024 ಸ್ಪರ್ಧೆಯ ಟಾಪ್-3 ಜಾಗತಿಕ ಫೈನಲಿಸ್ಟ್‌ ಗಳನ್ನು ಜಿನೀವಾ ಅಂತರಾಷ್ಟ್ರೀಯ ಮೋಟಾರು ಪ್ರದರ್ಶನದಲ್ಲಿ ಘೋಷಿಸಲಾಗಿದೆ. ಇದರಲ್ಲಿ ಹ್ಯುಂಡೈ ಮೋಟರ್‌ ನ IONIQ-5 N ಅಗ್ರ 3 ಜಾಗತಿಕ ಫೈನಲಿಸ್ಟ್‌ ಗಳಲ್ಲಿ ಸ್ಥಾನ ಪಡೆದಿದೆ. ಈ ಪ್ರಶಸ್ತಿಗಳ ಪ್ರದರ್ಶನದಲ್ಲಿ ಭಾಗವಹಿಸುವಿಕೆಯು ಕಂಪನಿಯ ಜಾಗತಿಕ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.

ಕಂಪನಿಯು ಅಂತಹ ಅನೇಕ ಪ್ರಶಸ್ತಿಗಳನ್ನು ಗೆದ್ದಿದೆಇಂತಹ ಪರಿಸ್ಥಿತಿಯಲ್ಲಿ ಕಂಪನಿಯು ವರ್ಲ್ಡ್ ಕಾರ್ಸ್ ಅವಾರ್ಡ್ 2024 ರಲ್ಲಿ ಭಾಗವಹಿಸುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಗ್ರಾಹಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಕಾರಿನ ಅತ್ಯುತ್ತಮ ವಿನ್ಯಾಸ ಮತ್ತು ತಯಾರಿಕೆಯಿಂದಾಗಿ IONIQ 5 N ಈ ಬಾರಿ ಟಾಪ್-3 ರಲ್ಲಿ ಸ್ಥಾನ ಪಡೆದಿದೆ ಎಂದು ಕಂಪನಿ ಹೇಳಿಕೊಂಡಿದೆ. ಕಂಪನಿಯ ಕಾರುಗಳಾದ IONIQ 5 ಮತ್ತು IONIQ 6 ಕ್ರಮವಾಗಿ 2022 ಮತ್ತು 2023 ರಲ್ಲಿ ವರ್ಲ್ಡ್ ಎಲೆಕ್ಟ್ರಿಕ್ ವೆಹಿಕಲ್ ಮತ್ತು ವರ್ಲ್ಡ್ ಕಾರ್ ಡಿಸೈನ್ ಆಫ್ ದಿ ಇಯರ್ ಪ್ರಶಸ್ತಿಗಳನ್ನು ಗೆದ್ದಿವೆ. ಹೀಗಿರುವಾಗ ಈ ಬಾರಿ ಪ್ರಶಸ್ತಿಯೂ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಸಂಸ್ಥೆ ಇದೆ.

Image Credit: Car Trade

ಕಡಿಮೆ ಬೆಲೆ ಮತ್ತು ಆಕರ್ಷಕ ಮೈಲೇಜ್
ಕಂಪನಿಯು ಮೊದಲ ಬಾರಿಗೆ ಜುಲೈ 2023 ರಲ್ಲಿ ಮಾರುಕಟ್ಟೆಯಲ್ಲಿ ಹುಂಡೈ IONIQ 5 ಅನ್ನು ಬಿಡುಗಡೆ ಮಾಡಿತು. ಕಂಪನಿಯು ಸುಧಾರಿತ ತಂತ್ರಜ್ಞಾನದ ಆಧಾರದ ಮೇಲೆ ಇದನ್ನು ತಯಾರಿಸಿದೆ. ಹ್ಯುಂಡೈ ಐಯೋನಿಕ್ 5 ಅನ್ನು x ವೇರಿಯೆಂಟ್ ಲೆವೆಲ್ ಗಳಲ್ಲಿ ಖರೀದಿಗೆ ದೊರೆಯಲಿದೆ. ಇದು 72.6kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದು ಒಂದೇ ಚಾರ್ಜಿನಲ್ಲಿ 631 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಹ್ಯುಂಡೈ ಐಯೋನಿಕ್ 5 ಹ್ಯುಂಡೈ ನ 800V EGMP ಪ್ಲಾಟ್ ಫಾರಂ ಅನ್ನು ಆಧರಿಸಿದೆ.

ಈ ಎಸ್ ಯುವಿಯಲ್ಲಿ ಬ್ಯಾಟರಿ ಪ್ಯಾಕ್ ಎರಡು ಆಕ್ಸಲ್ ನಡುವೆ ಇರಲಿದೆ. ಇದನ್ನು 350 kW ವೇಗದಲ್ಲಿ ಚಾರ್ಜ್ ಮಾಡಬಹುದು. ಹ್ಯುಂಡೈ ಐಯೋನಿಕ್ 5 ನ ಬ್ಯಾಟರಿಯನ್ನು ಕೇವಲ 18 ನಿಮಿಷಗಳಲ್ಲಿ ಶೇಕಡಾ 10 ರಿಂದ 80 ರಷ್ಟು ಚಾರ್ಜ್ ಮಾಡಬಹುದು. ಇದೀಗ ಹ್ಯುಂಡೈ Ioniq 5 ಕಾರನ್ನು ರೂ 46 .05 ಲಕ್ಷ ಎಕ್ಸ್ ಶೋ ರೂಮ್ ಬೆಲೆಯಲ್ಲಿ ಬಿಡುಗಡೆ ಮಾಡಿದೆ.

Image Credit: Car Trade
Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field