Ads By Google

Budget 2024: 2024 ರ ಕೇಂದ್ರ ಬಜೆಟ್ ನಲ್ಲಿ ವಾಹನ ಸವಾರರಿಗೆ ಏನೇನು ಲಾಭ ಸಿಗಲಿದೆ…? ಘೋಷಣೆ ಮಾತ್ರ ಭಾಕಿ

budget 2024 in india

Image Credit: Original Source

Ads By Google

2024 Budget Benefits: ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಫೆಬ್ರುವರಿ 1ರಂದು ಮಂಡನೆಯಾಗುವ ಬಗ್ಗೆ ಬಹಳಷ್ಟು ನಿರೀಕ್ಷೆಗಳಿವೆ. ಈ ಬಜೆಟ್ ನಲ್ಲಿ ಹೆಚ್ಚಾಗಿ ಯಾವುದು ಬದಲಾವಣೆ ಇಲ್ಲ ಎಂಬ ಮಾಹಿತಿ ಕೂಡ ಹರಿದಾಡುತ್ತಿದ್ದು, ಹಿಂದಿನ ನೀತಿ ನಿಯಮಗಳೇ ಮುಂದುವರೆಯಬಹುದು ಎಂಬ ವರದಿ ಇದೆ.

ಹಾಗೆಯೆ ವಾಹನ ಕ್ಷೇತ್ರದಲ್ಲಿ ಸರ್ಕಾರದ ನೀತಿಯಲ್ಲಿ ಸ್ಥಿರತೆ ಮುಂದುವರಿಯುವುದು ಮುಖ್ಯ ಎನ್ನುವ ಅಭಿಪ್ರಾಯ ಹೊಂದಿದ್ದಾರೆ. ಮರ್ಸಿಡೆಸ್ ಬೆಂಜ್ ಇಂಡಿಯಾ ಸಂಸ್ಥೆಯ ಎಂಡಿ ಮತ್ತು ಸಿಇಒ ಸಂತೋಷ್ ಅಯ್ಯರ್ ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ಪುಷ್ಟಿ ನೀಡುವಂತೆ ಬಜೆಟ್​ನಲ್ಲಿ ಗಮನ ಕೊಡಬೇಕು ಎಂದು ಹೇಳುತ್ತಾರೆ.

Image Credit: Crowleysdfk

ಉತ್ಪಾದನೆ ಮತ್ತು ಸೇವಾ ವಲಯದ ಬೆಳವಣಿಗೆಗೆ ಪೂರಕ ಶಕ್ತಿಯಾಗುತ್ತದೆ

ಐಷಾರಾಮಿ ವಾಹನಗಳಿಗೆ ಸದ್ಯ ಶೇ. 28ರಷ್ಟು ಜಿಎಸ್​ಟಿ ಇದೆ. ಸೆಡನ್ ಕಾರುಗಳಿಗೆ ಶೇ. 20ರಷ್ಟು ಹೆಚ್ಚುವರಿ ಸೆಸ್ ವಿಧಿಸಲಾಗುತ್ತದೆ. ಎಸ್​ಯುವಿ ಕಾರುಗಳಿಗೆ ಶೇ. 22ರಷ್ಟು ಹೆಚ್ಚುವರಿ ಸೆಸ್ ಇದೆ. ಇವೆಲ್ಲವೂ ಸೇರಿ ಒಂದು ಲಕ್ಷುರಿ ವಾಹನಕ್ಕೆ ಶೇ. 50ರವರೆಗೆ ತೆರಿಗೆ ಇದೆ. ಅಂದರೆ, ಒಂದು ವಾಹನದ ಮೂಲ ಬೆಲೆ 50 ಲಕ್ಷ ರೂ ಇದ್ದರೆ ಅದಕ್ಕೆ 25,000 ರೂ. ನಷ್ಟು ತೆರಿಗೆಯೇ ಇದೆ.

ಅದರ ಜೊತೆಗೆ ಇನ್ಷೂರೆನ್ಸ್, ರೋಡ್ ಟ್ಯಾಕ್ಸ್ ಇತ್ಯಾದಿ ಎಲ್ಲವೂ ಸೇರಿದರೆ ಆನ್​ರೋಡ್ ಪ್ರೈಸ್ ಬಹಳ ಹೆಚ್ಚಾಗಿ ಹೋಗುತ್ತದೆ. ಹೂಡಿಕೆ ಮತ್ತು ಮೂಲಸೌಕರ್ಯ ಅಭಿವೃದ್ದಿಗೆ ಹೆಚ್ಚು ಒತ್ತು ಕೊಟ್ಟರೆ ದೇಶದ ಜಾಗತಿಕ ಸ್ಪರ್ಧಾತ್ಮಕತೆ ಇನ್ನಷ್ಟು ಹೆಚ್ಚುತ್ತದೆ. ಉತ್ಪಾದನೆ ಮತ್ತು ಸೇವಾ ವಲಯದ ಬೆಳವಣಿಗೆಗೆ ಪೂರಕ ಶಕ್ತಿಯಾಗುತ್ತದೆ ಎಂದು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಯ ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ಸ್ವಪ್ನೇಶ್ ಆರ್ ಮಾರು ಹೇಳಿದ್ದಾರೆ .

Image Credit: Vistaranews

ಸರ್ಕಾರ ಫೇಮ್ (FAME) ಸ್ಕೀಮ್ ಮೂಲಕ ಎಲೆಕ್ಟ್ರಿಕ್ ವಾಹನಗಳಿಗೆ ನೆರವು ನೀಡುವುದನ್ನು ಮುಂದುವರಿಸುತ್ತದೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1 ರಂದು ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಚುನಾವಣೆ ಇರುವುದರಿಂದ ಇದರಲ್ಲಿ ಹೊಸ ನೀತಿಗಳ ಜಾರಿಯಾಗುವ ಸಾಧ್ಯತೆ ಕಡಿಮೆ. ಫೆಬ್ರುವರಿ 1ರ ಬಜೆಟ್​ನಲ್ಲಿ ತಾವು ಯಾವುದೇ ಅಚ್ಚರಿಗಳನ್ನು ನಿರೀಕ್ಷಿಸುತ್ತಿಲ್ಲ. ಆದರೆ ವಿವಿಧ ನೀತಿಗಳ ಸ್ಥಿರತೆ ಉಳಿಯಲಿ ಎಂದು ಅಪೇಕ್ಷಿಸುತ್ತೇವೆ ಎಂದು ಆಟೊಮೋಟಿವ್ ಉದ್ಯಮದವರು ತಿಳಿಸುತ್ತಾರೆ.

ಎಲೆಕ್ಟ್ರಿಕ್ ತ್ರಿಚಕ್ರ ವಾಹನ, ಕಮರ್ಷಿಯಲ್ ವಾಹನಗಳಿಗೆ ಪುಷ್ಟಿ ಕೊಡುವುದರಿಂದ ಬಹಳ ಮಂದಿಗೆ ಹಣಕಾಸು ಬಲ ಸಿಕ್ಕಂತಾಗುತ್ತದೆ ಎಂದು ಮಹೀಂದ್ರ ಲಾಸ್ಟ್ ಮೈಲ್ ಮೊಬಿಲಿಟಿ ಸಂಸ್ಥೆಯ ಎಂಡಿ ಮತ್ತು ಸಿಇಒ ಆಗಿರುವ ಸುಮನ್ ಮಿಶ್ರಾ ಹೇಳುತ್ತಾರೆ. ಸರ್ಕಾರ ಫೇಮ್ (FAME) ಸ್ಕೀಮ್ ಮೂಲಕ ಎಲೆಕ್ಟ್ರಿಕ್ ವಾಹನಗಳಿಗೆ ನೆರವು ನೀಡುವುದನ್ನು ಮುಂದುವರಿಸುತ್ತದೆ ಎಂದು ಕೈನೆಟಿಕ್ ಗ್ರೀನ್ ಸಂಸ್ಥೆಯ ಸಂಸ್ಥಾಪಕರಾದ ಫಿರೋದಿಯಾ ಮೋಟ್ವಾನಿ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

Ads By Google
Nagarathna Santhosh: Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in