Solar Eclipse 2024: ಈ ದಿನದಂದು ವರ್ಷದ ಮೊದಲ ಸೂರ್ಯಗ್ರಹಣ, ಎಲ್ಲೆಲ್ಲಿ ಘೋಚರ ಆಗಲಿದೆ ಗೊತ್ತಾ…?

ಈ ದಿನದಂದು ಘೋಚರ ಆಗಲಿದೆ ವರ್ಷದ ಮೊದಲ ಸೂರ್ಯ ಗ್ರಹಣ, ಎಲ್ಲೆಲ್ಲಿ ಘೋಚರ

2024 Solar Eclipse: ಸೂರ್ಯ ಗ್ರಹಣದ ಬಗ್ಗೆ ನಾವು ತಿಳಿಯುವುದು ಬಹಳ ಮುಖ್ಯ ಆಗಿದೆ, ಯಾಕೆಂದರೆ ಗ್ರಹಣ ಎನ್ನುವುದು ಬಹಳ ಪರಿಣಾಮಕಾರಿಯಾಗಿರುವುದರಿಂದ ಜನ ಸಾಮಾನ್ಯರ ಮೇಲೆ ಇದು ದುಷ್ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲದೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಗ್ರಹಣಕ್ಕೆ ಸಂಬಂಧಿಸಿದ ಹಲವು ಸಂಪ್ರದಾಯಗಳಿದ್ದು, ಅದನ್ನು ಪಾಲಿಸುವುದು ಕೂಡ ಬಹಳ ಮುಖ್ಯ ಆಗಿರುತ್ತದೆ. ಹಾಗಾಗಿ ನಾವು ಈ ವರ್ಷದ ಅಂದರೆ 2024ರಲ್ಲಿ ಯಾವಾಗ ಸೂರ್ಯ ಗ್ರಹಣ ಸಂಭವಿಸಲಿದೆ ಹಾಗು ಅದರ ಸಮಯದ ಬಗ್ಗೆ ತಿಳಿದುಕೊಳ್ಳೋಣ.

2024 Solar Eclipse
Image Credit: Live Mint

 ಈ ವರ್ಷದ ಮೊದಲ ಸೂರ್ಯಗ್ರಹಣದ ಬಗ್ಗೆ ವಿವರ

ಸೂರ್ಯನನ್ನು ಆತ್ಮದ ಅಂಶವೆಂದು ಪರಿಗಣಿಸಲಾಗುತ್ತದೆ. ಸೂರ್ಯಗ್ರಹಣದ ವಿದ್ಯಮಾನ ಸಂಭವಿಸಿದಾಗಲೆಲ್ಲಾ, ಅದು ಭೂಮಿಯ ಮೇಲೆ ವಾಸಿಸುವ ಎಲ್ಲಾ ಜೀವಿಗಳ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲದೆ ಗ್ರಹಣವು ಖಗೋಳ ಘಟನೆಯಾಗಿದೆ ಆದರೆ ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಇದಕ್ಕೆ ವಿಶೇಷ ಮಹತ್ವವಿದೆ ಎಂದು ಪರಿಗಣಿಸಲಾಗಿದೆ.

ಈ ವರ್ಷದ ಮೊದಲ ಸೂರ್ಯಗ್ರಹಣವು ಏಪ್ರಿಲ್‌ 8 ರ ರಾತ್ರಿ 09 ಗಂಟೆಗೆ ಸಂಭವಿಸಲಿದೆ. ಈ ಗ್ರಹಣವು ಮಧ್ಯರಾತ್ರಿ 09:12 ನಿಮಿಷಗಳಿಂದ 01:25 ನಿಮಿಷಗಳವರೆಗೆ ಇರುತ್ತದೆ. ಈ ಸೂರ್ಯಗ್ರಹಣದ ಒಟ್ಟು ಅವಧಿ 4 ಗಂಟೆ 25 ನಿಮಿಷಗಳು. ಏಪ್ರಿಲ್ 8 ರಂದು ಸಂಭವಿಸುವ ಈ ಗ್ರಹಣವು ಸಂಪೂರ್ಣ ಸೂರ್ಯಗ್ರಹಣವಾಗಿದೆ, ಅಂದರೆ ಖಗ್ರಾಸ್ ಸೂರ್ಯ ಗ್ರಹಣ ಆಗಿರುತ್ತದೆ.

Solar Eclipse Of April 8 2024
Image Credit: Umontreal

ಸಂಪೂರ್ಣ ಸೂರ್ಯ ಗ್ರಹಣ ಎಂದರೇನು?

Join Nadunudi News WhatsApp Group

ಗ್ರಹಣದ ಸಮಯದಲ್ಲಿ, ಕೆಲವೊಮ್ಮೆ ಸೂರ್ಯ, ಚಂದ್ರ ಮತ್ತು ಭೂಮಿಯ ನಡುವೆ ಪರಿಸ್ಥಿತಿ ಇರುತ್ತದೆ, ಚಂದ್ರನು ಸೂರ್ಯನ ಬೆಳಕನ್ನು ಸ್ವಲ್ಪ ಸಮಯದವರೆಗೆ ಭೂಮಿಯನ್ನು ತಲುಪದಂತೆ ಸಂಪೂರ್ಣವಾಗಿ ನಿರ್ಬಂಧಿಸುತ್ತಾನೆ. ಈ ಪರಿಸ್ಥಿತಿಯಲ್ಲಿ ಚಂದ್ರನ ಪೂರ್ಣ ನೆರಳು ಭೂಮಿಯ ಮೇಲೆ ಬೀಳುತ್ತದೆ, ಅದು ಬಹುತೇಕ ಕತ್ತಲೆಯಾಗಿ ಕಾಣುತ್ತದೆ.

ಸೂರ್ಯನ ಈ ಹಂತವನ್ನು ಸಂಪೂರ್ಣ ಸೂರ್ಯ ಗ್ರಹಣ ಎಂದು ಕರೆಯಲಾಗುತ್ತದೆ. ಏಪ್ರಿಲ್ 8 ರಂದು ಸಂಭವಿಸುವ ವರ್ಷದ ಮೊದಲ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಅಮೆರಿಕ, ಏಷ್ಯಾ, ತೈಮೂರ್, ಆಸ್ಟ್ರೇಲಿಯಾ ಮತ್ತು ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದೆ. ಭಾರತದಲ್ಲಿ ಕಾಣಿಸಿಕೊಳ್ಳದ ಕಾರಣ, ಇದು ಧಾರ್ಮಿಕ ಮಹತ್ವವನ್ನು ಹೊಂದಿರುವುದಿಲ್ಲ ಅಥವಾ ಅದನ್ನು ಸೂತಕ ಅವಧಿ ಎಂದು ಪರಿಗಣಿಸಲಾಗುವುದಿಲ್ಲ ಎನ್ನಲಾಗಿದೆ.

Join Nadunudi News WhatsApp Group