Ads By Google

Fortuner 2024: ದೇಶದಲ್ಲಿ ಇತಿಹಾಸ ಸೃಷ್ಟಿಸಲು ಬರುತ್ತಿದೆ ಹೊಸ ಫಾರ್ಚುನರ್, ಕಾರ್ ಫೀಚರ್ ನೋಡಿ ದಂಗಾದ ಜನರು.

Toyota Fortuner car price and specification.

Image Credit: youtube

Ads By Google

2024 Toyota Fortuner Car: ಸಾಮಾನ್ಯವಾಗಿ ದೊಡ್ಡ ಕುಟುಂಬ ಹೊಂದಿರುವವರು 7 ಆಸನದ ಕಾರನ್ನು ಖರೀದಿಸಲು ಮುಂದಾಗುತ್ತಾರೆ. ಇತ್ತೀಚಿಗೆ 7 ಸೀಟರ್ ಕಾರಾದ ಟೊಯೋಟಾ ಫಾರ್ಚುನರ್ ಕಾರು ದೇಶದಲ್ಲಿ ತನ್ನ ಛಾಪನ್ನು ಮೂಡಿಸಿದೆ.

ಟೊಯೋಟಾ (Toyota) ಕಾರು ತನ್ನದೇ ಆದ ವಿಶೇಷತೆ ಹೊಂದಿದ್ದು ಇತ್ತೀಚಿಗೆ ಉತ್ತಮ ಮಟ್ಟದ ಸೇಲ್ ಕಾಣುತ್ತಿದೆ. ಇನ್ನು ಈ ಟೊಯೋಟಾ ಫಾರ್ಚುನರ್ ಕಾರಿನ 2024 ರ ಮಾದರಿಯು ಬಿಡುಗಡೆಯಾಗಿಲ್ಲ. ಆದರೆ ಈ ಕಾರಿನ 2024 ರ ಮಾದರಿಯಾ ಫೋಟೋ ಬಿಡುಗಡೆಗೂ ಮುನ್ನವೇ ವೈರಲ್ ಆಗಿದೆ.

Image Credit: Minivanusa

ಟೊಯೋಟಾ ಫಾರ್ಚುನರ್ ಕಾರಿನ 2024 ರ ಮಾದರಿ ಫೋಟೋ ವೈರಲ್
2024 ರ ಟೊಯೋಟಾ ಫಾರ್ಚುನರ್ ಕಾರಿನ ಫೋಟೋ ವೈರಲ್ ಆಗಿದ್ದು ಈ ಕಾರಿನಲ್ಲಿ ಹಲವು ಬದಲಾವಣೆಗಳನ್ನು ನೋಡಬಹುದಾಗಿದೆ. ಈ ಕಾರು ಮೊದಲಿನ ಮಾದರಿಗಿಂತ ಮುಂಭಾಗ ಮತ್ತು ಹಿಂಭಾಗದಲ್ಲಿ ಹೆಚ್ಚಿನ ಬದಲಾವಣೆ ಕಂಡಿದೆ. ಇದರ ಎಲ್ ಇ ಡಿ ಹೆಡ್ ಲ್ಯಾಂಪ್ ಕ್ಲಸ್ಟರ್ ಮತ್ತು ಹೆಚ್ಚು ದುಂಡಗಿನ ಟೈಲ್ ಲ್ಯಾಂಪ್ ಯುನಿಟ್ ಕಣ್ಮನ ಸೆಳೆಯುತ್ತಿದೆ, ಇನ್ನು ಉಳಿದಂತೆ ಸೈಡ್ ಪ್ರೊಫೈಲ್ ನ ಇತರ ಅಂಶಗಳು ಫಾರ್ಚುನರ್ ಮಾದರಿಯಂತೆ ಇದೆ.

ಟೊಯೋಟಾ ಫಾರ್ಚುನರ್ ಕಾರಿನ ಬೆಲೆ
ಪ್ರಸ್ತುತ ಇರುವ ಟೊಯೋಟಾ ಫಾರ್ಚುನರ್ ಎರಡು ಎಂಜಿನ್ ಆಯ್ಕೆಗಳನ್ನು ಒಳಗೊಂಡಿದೆ. 2.7 ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 2.8 ಲೀಟರ್ ಟರ್ಬೊ -ಡೀಸೆಲ್ ಎಂಜಿನ್ ನ ಫಾರ್ಚುನರ್ ಮಾರುಕಟ್ಟೆಯಲ್ಲಿದೆ. ಇದರಲ್ಲಿ ಸಿಕ್ಸ್ ಗೇರ್ ವಾಹನ ಅಥವಾ ಆಟೋಮ್ಯಾಟಿಕ್ ಗೇರ್ ವಾಹನವು ಇದೆ. ಡೀಸೆಲ್ ಇಂಧನದ ವಾಹನದಲ್ಲಿ ಫೂರ್ ವೀಲರ್ ಸೌಲಭ್ಯದ ಮೂಲಕ ಎಲ್ಲ ನಾಲ್ಕು ಚಕ್ರಗಳಿಗೆ ಶಕ್ತಿಯನ್ನು ನೀಡಲಾಗಿದೆ. ಸದ್ಯ ಫಾರ್ಚುನರ್ ಕಾರಿನ ಎಕ್ಸ್ ಶೋ ರೂಮ್ ಬೆಲೆ 32.99 ಲಕ್ಷದಿಂದ 50.74 ಲಕ್ಷದ ವರೆಗೆ ಇದೆ.

Image Credit: Rushlane

ಟೊಯೋಟಾ ಫಾರ್ಚುನರ್ ಕಾರಿನ ವಿಶೇಷತೆ
ಇನ್ನು ಈ ಹೊಸದಾಗಿ ಬಿಡುಗಡೆಯಾಗಲಿರುವ ಫಾರ್ಚುನರ್ ಕಾರು ಹೈಬ್ರಿಡ್ ವ್ಯವಸ್ಥೆಯನ್ನು ಹೊಂದಿರುವ ಹೊಸ ಎಂಜಿನ್ ಅನ್ನು ಹೊಂದಿರಬಹುದು ಎಂದು ಹೇಳಲಾಗುತ್ತದೆ. ಇದು ಇನ್ನೋವಾ ಹೈಕ್ರಾಸ್ ಮತ್ತು ಅರ್ಬನ್ ಕ್ರೂಸರ್ ಹೈರಾಡರ್ ಗೆ ಹೋಲುವಂತಿದೆ. ಇನ್ನು ಈ ಕಾರು ಹೈಬ್ರಿಡ್ ವರ್ಷನ್ ಮೂಲಕ ಇಂಧನ ಉಳಿತಾಯ ಮತ್ತು ಹೆಚ್ಚುವರಿ ಕಾರ್ಯಕ್ಷಮತೆಯನ್ನು ನೀಡಬಹುದು. ಸದ್ಯಕ್ಕೆ ಈ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.

Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in