ಇತ್ತೀಚಿನ ಕಾಲದಲ್ಲಿ ಜನರು ಹೆಚ್ಚು ಹೆಚ್ಚು ಹೂಡಿಕೆಯತ್ತ ಹೆಚ್ಚಿನ ಗಮನ ಕೊಡುತ್ತಾರೆ. ಜನರು ತಮ್ಮ ಹಣಕ್ಕೆ ಎಲ್ಲಿ ಸುರಕ್ಷತೆ ಇದೆಯೋ ಅಲ್ಲಿ ಹೂಡಿಕೆ ಮಾಡಲು ಇಷ್ಟಪಡುತ್ತಾರೆ. ಇದರ ನಡುವೆ ಬ್ಯಾಂಕುಗಳಲ್ಲಿ FD (Fixed Deposit) ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಕೂಡ ಬಹಳ ಹೆಚ್ಚಾಗಿದೆ. ಸದ್ಯ ಬರೋಡ ಬ್ಯಾಂಕಿನಲ್ಲಿ (Bank Of Baroda) ಖಾತೆ ಇರುವ ಹಿರಿಯ ನಾಗರಿಕರಿಗೆ ಬರೋಡ ಬ್ಯಾಂಕ್ ಗುಡ್ ನ್ಯೂಸ್. ಹಣವನ್ನ ಹೂಡಿಕೆ ಮಾಡುವ ಹಿರಿಯ ನಾಗರೀಕರಿಗಾಗಿ ಬ್ಯಾಂಕ್ ಆಫ್ ಬರೋಡ ಹೊಸ ಮಾದರಿಯ FD ಯೋಜನೆಯನ್ನು (FD Scheme) ಜಾರಿಗೆ ತಂದಿದೆ.
ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ನೀಡಿದ ಬ್ಯಾಂಕ್ ಆಫ್ ಬರೋಡ
ಬ್ಯಾಂಕ್ ಆಫ್ ಬರೋಡ ಈಗ ತನ್ನ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಹಿರಿಯ ನಾಗರಿಕರಿಗೆ (Senior Citizens) ವಿಶೇಷ FD ಯೋಜನೆಯನ್ನು ಪರಿಚಯ ಮಾಡಿದೆ. ಬ್ಯಾಂಕಿನಲ್ಲಿ FD ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ ವಿವಿಧ ರೀತಿಯ ಬಡ್ಡಿ ದರವನ್ನು ಪಡೆದುಕೊಳ್ಳಬಹುದು. ವಿಶೇಷವಾಗಿ ಹಿರಿಯ ನಾಗರೀಕರಿಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. 2025 ರಲ್ಲಿ FD ಯೋಜನೆಯಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರಿಕರು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು.

Bank Of Baroda Fixed Deposit Interest Rates
* 7 ದಿನದಿಂದ 14 ದಿನಕ್ಕೆ ಸಾಮಾನ್ಯರಿಗೆ 4.25%, ಹಿರಿಯ ನಾಗರಿಕರಿಗೆ 4.75%
* 15 ದಿನದಿಂದ 45 ದಿನಕ್ಕೆ ಸಾಮಾನ್ಯರಿಗೆ 4.50%, ಹಿರಿಯ ನಾಗರಿಕರಿಗೆ 5%
* 46 ದಿನದಿಂದ 90 ದಿನಕ್ಕೆ ಸಾಮಾನ್ಯರಿಗೆ 5.50%, ಹಿರಿಯ ನಾಗರಿಕರಿಗೆ 6%
* 91 ದಿನದಿಂದ 180 ದಿನಕ್ಕೆ ಸಾಮಾನ್ಯರಿಗೆ 5.60%, ಹಿರಿಯ ನಾಗರಿಕರಿಗೆ 6.10%
* 181 ದಿನದಿಂದ 210 ದಿನಕ್ಕೆ ಸಾಮಾನ್ಯರಿಗೆ 5.75%, ಹಿರಿಯ ನಾಗರಿಕರಿಗೆ 6.25%
* 211 ದಿನದಿಂದ 270 ದಿನಕ್ಕೆ ಸಾಮಾನ್ಯರಿಗೆ 6.25%, ಹಿರಿಯ ನಾಗರಿಕರಿಗೆ 6.75%
* 271 ದಿನದಿಂದ 1 ವರ್ಷಕ್ಕೆ ಸಾಮಾನ್ಯರಿಗೆ 6.50%, ಹಿರಿಯ ನಾಗರಿಕರಿಗೆ 7%
* 1 ವರ್ಷಕ್ಕೆ ಸಾಮಾನ್ಯರಿಗೆ 6.85%, ಹಿರಿಯ ನಾಗರಿಕರಿಗೆ 7.35%
* 1 ವರ್ಷದಿಂದ 400 ದಿನಕ್ಕೆ ಸಾಮಾನ್ಯರಿಗೆ 7%, ಹಿರಿಯ ನಾಗರಿಕರಿಗೆ 7.50%
* 400 ದಿನದಿಂದ 2 ವರ್ಷಕ್ಕೆ ಸಾಮಾನ್ಯರಿಗೆ 7%, ಹಿರಿಯ ನಾಗರಿಕರಿಗೆ 7.50%
* 2 ವರ್ಷದಿಂದ 3 ವರ್ಷಕ್ಕೆ ಸಾಮಾನ್ಯರಿಗೆ 7.15%, ಹಿರಿಯ ನಾಗರಿಕರಿಗೆ 7.65%
* 3 ವರ್ಷದಿಂದ 5 ವರ್ಷಕ್ಕೆ ಸಾಮಾನ್ಯರಿಗೆ 6.80%, ಹಿರಿಯ ನಾಗರಿಕರಿಗೆ 7.40%
* 5 ವರ್ಷದಿಂದ 10 ವರ್ಷಕ್ಕೆ ಸಾಮಾನ್ಯರಿಗೆ 6.50%, ಹಿರಿಯ ನಾಗರಿಕರಿಗೆ 7.50%
FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಏನೇನು ಲಾಭ (Fixed Deposit Benefits)
ಬ್ಯಾಂಕ್ ಆಫ್ ಬರೋಡಾದಲ್ಲಿ FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿದ ಹಣಕ್ಕೆ ಸ್ಥಿರ ಆದಾಯ ಮತ್ತು ನಿಮ್ಮ ಹೂಡಿಕೆ ಸುರಕ್ಷಿತವಾಗಿ ಇರುತ್ತದೆ. ಬರೋಡ ಬ್ಯಾಂಕಿನಲ್ಲಿ ನೀವು ಹೂಡಿಕೆ (Money Investment) ಮಾಡಿದ ಹಣಕ್ಕೆ ವಿವಿಧ ರೀತಿಯ ಬಡ್ಡಿ ನೀಡುವ ಕಾರಣ ನಿಮ್ಮ ಹೂಡಿಕೆಯ ಮೊತ್ತ ಯೋಜನೆಯ ಮುಕ್ತಾಯದ ಅವಧಿಯಲ್ಲಿ ಡಬಲ್ ಆಗಿತ್ತದೆ.