Tax Guidelines: ಬ್ಯಾಂಕ್ ಖಾತೆಯಲ್ಲಿ ಇಷ್ಟು ಹಣ ಇದ್ದರೆ ಬೀಳಲಿದೆ 60% ಟ್ಯಾಕ್ಸ್, ಕೇಂದ್ರದ ನಿಯಮ

ಭಾರತೀಯ ರಿಸರ್ವ್ ಬ್ಯಾಂಕ್ ಸದ್ಯ ಉಳಿತಾಯ ಖಾತೆಗಳಿಗೆ ಸಂಬಂಧಪಟ್ಟಂತೆ ಕೆಲವು ಹೊಸ ನಿಯಮಗಳನ್ನ ಜಾರಿಗೆ ತಂದಿದೆ. ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿ ಕೂಡ ಉಳಿತಾಯ ಖಾತೆ ಹೊಂದಿರುತ್ತಾರೆ. ಇತ್ತೀಚಿನ ಕಾಲದಲ್ಲಿ ಪ್ರತಿಯೊಂದು ಹಣದ ವಹಿವಾಟುಗಳು ಬ್ಯಾಂಕ್ ಖಾತೆಗಳ ಮೂಲಕ ನಡೆಯುತ್ತದೆ. ನೈಜತೆಯನ್ನು ಕಾಪಾಡಿಕೊಳ್ಳಬೇಕು ಅನ್ನುವ ಉದ್ದೇಶದಿಂದ ಇತ್ತೀಚಿನ ಕಾಲದಲ್ಲಿ ಎಲ್ಲರೂ ಕೂಡ ಹಣದ ವಹಿವಾಟುಗಳನ್ನ ಬ್ಯಾಂಕ್ ಖಾತೆಗಳ ಮೂಲಕ ಮಾಡುತ್ತಾರೆ.

WhatsApp Group Join Now
Telegram Group Join Now

ಉಳಿತಾಯ ಖಾತೆ ಇದ್ದವರಿಗೆ RBI ನಿಂದ ಹೊಸ ರೂಲ್ಸ್
ಉಳಿತಾಯ ಖಾತೆ ಹೊಂದಿರುವವರಿಗೆ RBI ಕೆಲವು ಮಾರ್ಗಸೂಚಿಯನ್ನು ಈಗಾಗಲೇ ಪ್ರಕಟಿಸಿದೆ ಮತ್ತು ಉಳಿತಾಯ ಖಾತೆ ಹೊಂದಿರುವ ಪ್ರತಿಯೊಬ್ಬರೂ ಕೂಡ RBI ಹೊರಡಿಸಿರುವ ಈ ಮಾರ್ಗಸೂಚಿಯನ್ನು ಪಾಲನೆ ಮಾಡುವುದು ಕಡ್ಡಾಯವಾಗಿದೆ. ಸದ್ಯ ಉಳಿತಾಯ ಖಾತೆಯಲ್ಲಿ ಹಣ ಇಡುವವರಿಗೆ ಈಗ RBI ಹೊಸ ನಿಯಮವನ್ನು ಜಾರಿಗೆ ತಂದಿದೆ.

ಉಳಿತಾಯ ಖಾತೆಯಲ್ಲಿ ಇದಕ್ಕಿಂತ ಹೆಚ್ಚು ಹಣ ಇಡುವಂತಿಲ್ಲ
ಭಾರತಯ್ಯ ರಿಸರ್ವ್ ಬ್ಯಾಂಕ್ ಈಗ ಉಳಿತಾಯ ಖಾತೆಗಳಿಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಹೊಸ ನಿಯಮಗಳ ಪ್ರಕಾರ ಇನ್ನುಮುಂದೆ ಉಳಿತಾಯ ಖಾತೆಯಲ್ಲಿ ಇದಕ್ಕಿಂತ ಹೆಚ್ಚು ಹಣ ಇಟ್ಟರೆ ಆದಾಯ ತೆರಿಗೆ ಪಾವತಿ ಮಾಡಬೇಕು. ಹೌದು ಠೇವಣಿ ಮಾಡಿದ ಹಣ ಯಾವುದೇ ಮೂಲವನ್ನು ಹೊಂದಿಲ್ಲದೆ ಇದ್ದರೆ ಆ ಹಣಕ್ಕೆ ಶೇಕಡಾ 60 ರಷ್ಟು ತೆರಿಗೆ ಕಟ್ಟಬೇಕು.

income tax guidelines
Income tax guidelines for saving accounts

ಜಾರಿಗೆ ಬಂತು ಹೊಸ ತೆರಿಗೆ ನಿಯಮ
ಆದಾಯ ತೆರಿಗೆಯ ಹೊಸ ನಿಯಮಗಳ ಪ್ರಕಾರ, ಜನರು ಉಳಿತಾಯ ಖಾತೆಯಲ್ಲಿ ಮಿತಿಗಿಂತ ಹೆಚ್ಚು ಹಣ ಇಡುವಂತಿಲ್ಲ ಮತ್ತು ಮಿತಿಗಿಂತ ಹೆಚ್ಚಿನ ಹಣವನ್ನು ಇಟ್ಟರೆ ಆ ಹಣದ ಮೂಲ ತೋರಿಸುವುದು ಕಡ್ಡಾಯವಾಗಿದೆ. ಒಂದುವೇಳೆ ಜನರು ಆದಾಯ ಮೂಲವನ್ನು ತೋರಿಸದೆ ಇದ್ದರೆ ಆ ಹಣಕ್ಕೆ ಶೇಕಡಾ 60 ರಷ್ಟು ತೆರಿಗೆ ಕಡ್ಡಬೇಕು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

10 ಲಕ್ಷಕ್ಕಿಂತ ಹೆಚ್ಚು ಹಣ ಇಡುವಂತಿಲ್ಲ
ಆದಾಯ ತೆರಿಗೆ ನಿಯಮಗಳ ಉಳಿತಾಯ ಖಾತೆಯಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಹಣ ಇಡುವಂತಿಲ್ಲ. ಹೌದು ಯಾವುದೇ ಒಬ್ಬ ವ್ಯಕ್ತಿ ತನ್ನ ಉಳಿತಾಯ ಖಾತೆಯಲ್ಲಿ 10 ಲಕ್ಷಕ್ಕಿಂತ ಹೆಚ್ಚು ಹಣ ಇಟ್ಟರೆ ಆ ಹಣಕ್ಕೆ ಆತ ಮೂಲವನ್ನು ತೋರಿಸಬೇಕು. 10 ಲಕ್ಷ ರೂ ಹಣಕ್ಕೆ ಮೂಲವನ್ನು ತೋರಿಸದೆ ಇದ್ದರೆ ಆತ ಶೇಕಡಾ 60 ರಷ್ಟು ತೆರಿಗೆ ಕಡ್ಡಾಯವಾಗಿ ಪಾವತಿ ಮಾಡಬೇಕು.

ವಾರ್ಷಿಕವಾಗಿ ಇಷ್ಟು ಹಣ ಮಾತ್ರ ಹಿಂಪಡೆಯಬಹುದು
ಹಣ ಠೇವಣಿ ಮಾಡುವುದು ಮಾತ್ರವಲ್ಲದೆ ಹಣವನ್ನು ಹಿಂಪಡೆಯುವಾಗ ಕೂಡ ಜನರು ಆದಾಯ ತೆರಿಗೆ ನಿಯಮವನ್ನು ಪಾಲನೆ ಮಾಡಬೇಕು. ಆದಾಯ ತೆರಿಗೆ ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿ ವಾರ್ಷಿಕವಾಗಿ 1 ಕೋಟಿಗಿಂತ ಅಧಿಕ ಹಣವನ್ನು ಹಿಂಪಡೆದರೆ ಆತ 2% TDS ಪಾವತಿ ಮಾಡಬೇಕು. ಇನ್ನೂ ಆದಾಯ ತೆರಿಗೆ ಪಾವತಿ ಮಾಡದ ವ್ಯಕ್ತಿಗಳು 20 ಲಕ್ಷಕ್ಕಿಂತ ಅಧಿಕ ಹಣವನ್ನು ವಾರ್ಷಿಕವಾಗಿ ಹಿಂಪಡೆದರೆ ಅವರು 2% TDS ಪಾವತಿ ಮಾಡಬೇಕು ಮತ್ತು 1 ಕೋಟಿ ರೂ ಹಿಂಪಡೆದರೆ ಅವರು 5% TDS ಪಾವತಿ ಮಾಡಬೇಕು.

ತೆರಿಗೆ ಇಲಾಖೆಗೆ ಕೊಡಬೇಕು ಮೂಲ
*ಒಂದುವೇಳೆ ಆದಾಯ ತೆರಿಗೆ ಇಲಾಖೆಯವರು ನಿಮ್ಮ ಆದಾಯದ ಬಗ್ಗೆ ಪ್ರಶ್ನೆ ಕೇಳಿದರೆ ನೀವು ಆದಾಯದ ಮೂಲದ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು.

*ವ್ಯಾಪಾರ ಮತ್ತು ವ್ಯವಹಾರದ ಹಣವನ್ನು ಯಾವುದೇ ಕಾರಣಕ್ಕೂ ವಯಕ್ತಿಕ ಖಾತೆಯಲ್ಲಿ ಇರಿಸುವಂತಿಲ್ಲ.

*ಹೆಚ್ಚುನ ಹಣದ ವಹಿವಾಟು ನೀವು ವಾರ್ಷಿಕವಾಗಿ ಮಾಡಿದರೆ ನೀವು ಆದಾಯ ತೆರಿಗೆ ಪಾವತಿ ಮಾಡುವುದು ಕಡ್ಡಾಯವಾಗಿದೆ

 

Leave a Comment