ಕರ್ನಾಟಕ ರಾಜ್ಯ ಸರ್ಕಾರ ಈಗ ಶಾಲಾ ಮಕ್ಕಳ ರಜೆಗಳಿಗೆ ಸಂಬಂಧಪಟ್ಟಂತೆ ಹೊಸ ಆದೇಶವನ್ನು ಹೊರಡಿಸಿದೆ. ಶಾಲಾ ಮತ್ತು ಬೇಸಿಗೆ ರಜೆಗೆ ಸಂಬಂಧಪಟ್ಟಂತೆ ಈಗ ಕರ್ನಾಟಕ ರಾಜ್ಯ ಸರ್ಕಾರ ಇನ್ನೊಂದು ಘೋಷಣೆಯನ್ನು ಮಾಡುವುದರ ಮೂಲಕ ಮಕ್ಕಳಿಗೆ ಗುಡ್ ನ್ಯೂಸ್ ನೀಡಿದೆ. ಬೇಸಿಗೆ ರಜೆಯನ್ನು ಈಗ ಕರ್ನಾಟಕ ಶಿಕ್ಷಣೆ ಇಲಾಖೆ ಘೋಷಣೆ ಮಾಡಿದೆ.
ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಘೋಷಣೆ
ಸದ್ಯ ಬೇಸಿಗೆ ಸಮಯ ಆರಂಭ ಆಗುತ್ತಿದೆ, ಬೇಸಿಗೆ ಸಮಯ ಆರಂಭ ಆಗುತ್ತಿರುವ ಬೆನ್ನಲ್ಲೇ ಈಗ ಕರ್ನಾಟಕ ಶಿಕ್ಷಣ ಇಲಾಖೆ ಬೇಸಿಗೆ ರಜೆ ಘೋಷಣೆ ಮಾಡಿದೆ. 2025 ನೇ ವರ್ಷದ ಬೇಸಿಗೆ ರಜೆ ಘೋಷಣೆ ಮಾಡುವ ಮೂಲಕ ಕರ್ನಾಟಕ ಶಿಕ್ಷಣ ಇಲಾಖೆ ಈಗ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ನೀಡಿದೆ.
ಏಪ್ರಿಲ್ 1 ರಿಂದಲೇ ಶಾಲೆಗಳಿಗೆ ರಜೆ
ಕರ್ನಾಟಕ ರಾಜ್ಯದಲ್ಲಿ ಶಾಲಾ ಮಕ್ಕಳ ಅಂತಿಮ ಪರೀಕ್ಷೆ ಇನ್ನೇನು ಕೆಲವೇ ದಿನಗಳಲ್ಲಿ ಆರಂಭ ಆಗಲಿದೆ. ಅಂತಿಮ ಪಾರೀಕ್ಷೆ ಮುಗಿದ ನಂತರ ಶಾಲಾ ಮಕ್ಕಳಿಗೆ ವಾರ್ಷಿಕ ರಜೆ ಅಂದರೆ ಬೇಸಿಗೆ ರಜೆ ಆರಂಭ ಆಗಲಿದೆ. ಚಳಿಗಾಲ ಮುಗಿಯುತ್ತಿದಂತೆ ಬಿಲಿಸಿನ ತಪ ಹೆಚ್ಚಾಗಿದೆ, ಈ ಕಾರಣಗಳಿಂದ ಕರ್ನಾಟಕ ಶಿಕ್ಷಣ ಇಲಾಖೆ ಮಕ್ಕಳಿಗೆ ಏಪ್ರಿಲ್ 1 ನೇ ತರ್ಕಿನಿಂದಲೇ ಬೇಸಿಗೆ ರಜೆ ಘೋಷಣೆ ಮಾಡಿದೆ.

ಫೆಬ್ರವರಿ ತಿಂಗಳ ಅಂತ್ಯದಲ್ಲೇ ಹೆಚ್ಚಾಗಿದೆ ಬಿಸಿಲಿನ ತಾಪಮಾನ
ಚಳಿಗಾಲ ಮುಗಿದಿದ್ದು ಸದ್ಯ ಫೆಬ್ರವರಿ ತಿಂಗಳ ಅಂತ್ಯದಲ್ಲೇ ದೇಶದಲ್ಲಿ ತಾಪಮಾನ ಹೆಚ್ಚಾಗಿದೆ ಎಂದು ಇಲಾಖೆ ತಿಳಿಸಿದೆ. ಏಪ್ರಿಲ್ ತಿಂಗಳಲ್ಲಿ ದೇಶದಲ್ಲಿ ತಾಪಮಾನ ಇನ್ನಷ್ಟು ಹೆಚ್ಚಳ ಆಗಲಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಸ್ತುತ ವರ್ಷದಲ್ಲಿ ತಾಪಮಾನ ಇನ್ನಷ್ಟು ಹೆಚ್ಚಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಏಪ್ರಿಲ್ ತಿಂಗಳಲ್ಲಿ ರಾಜ್ಯದ ಕೆಲವು ಭಾಗಗಳಲ್ಲಿ ತಾಪಮಾನ 40 ಡಿಗ್ರಿ ತಲುಪಲಿದೆ ಎಂದು ಅಂದಾಜು ಕೂಡ ಮಾಡಲಾಗಿದೆ.
ಕಳೆದ ವರ್ಷ ಏಪ್ರಿಲ್ 11 ರಿಂದ ರಜೆ ಆರಂಭ
ಕಳೆದ ವರ್ಷ ಶಾಲಾ ಮಕ್ಕಳ ಬೇಸಿಗೆ ರಜೆ ರಜೆ ಏಪ್ರಿಲ್ 11 ನೇ ತಾರೀಕಿನಿಂದ ಆರಂಭ ಆಗಿತ್ತು, ಆದರೆ ಪ್ರಸ್ತುತ ವರ್ಷದಲ್ಲಿ ಇನ್ನಷ್ಟು ತಾಪಮಾನ ಹೆಚ್ಚಾದ ಕಾರಣ ಬೇಸಿಗೆ ರಜೆ ಏಪ್ರಿಲ್ 1 ನೇ ತಾರೀಕಿನಿಂದ ಆರಂಭ ಮಾಡಲು ಈಗ ರಾಜ್ಯ ಸರ್ಕಾರ ಮುಂದಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಸ್ತುತ ವರ್ಷದಲ್ಲಿ ಮಕ್ಕಳು ಇನ್ನಷ್ಟು ಹೆಚ್ಚಿನ ದಿನಗಳ ಕಾಲ ಬೇಸಿಗೆ ರಜೆ ಪಡೆದುಕೊಳ್ಳಲಿದ್ದಾರೆ. ಏಪ್ರಿಲ್ 1 ನೇ ತಾರೀಕಿನಿಂದ ಬೇಸಿಗೆ ರಜೆ ಆರಂಭ ಆಗಲಿದ್ದು ಸರಿಸುಮಾರು 2 ತಿಂಗಳು ಮಕ್ಕಳಿಗೆ ರಜೆ ಇರಲಿದೆ.