LPG New Rules: LPG ಗ್ಯಾಸ್ ಬಳಸುವವರಿಗೆ ಇಂದಿನಿಂದ ಹೊಸ ರೂಲ್ಸ್, ನೇರವಾಗಿ ಖಾತೆಗೆ ಹಣ ಜಮಾ

ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರ ಕೆಲವು ಸರ್ಕಾರೀ ನಿಯಮಗಳಲ್ಲಿ ಬದಲಾವಣೆಗಳನ್ನ ಜಾರಿಗೆ ತರಲು ಮುಂದಾಗಿದೆ. ಗ್ಯಾಸ್ ಸಿಲಿಂಡರ್ ಆಗಿರಬಹುದು ಅಥವಾ ರೇಷನ್ ಕಾರ್ಡ್ ನಿಯಮಗಳಲ್ಲಿ ಆಗಿರಬಹುದು ಈಗಾಗಲೇ ಹಲವು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಅದೇ ರೀತಿಯಲ್ಲಿ ಈಗ 2025 ರಲ್ಲಿ ಮತ್ತೆ LPG ಗ್ಯಾಸ್ ಸಿಲಿಂಡರ್ ನಿಯಮಗಳಲ್ಲಿ ಹೊಸ ಬದಲಾವಣೆಗಳನ್ನು ಜಾರಿಗೆ ತರಲಾಗಿದ್ದು, ಈ ಬದಲಾದ ಹೊಸ ನಿಯಮ ಇಂದಿನಿಂದಲೇ ಜಾರಿಗೆ ಬರಲಿದೆ ಎಂದು ಸರ್ಕಾರ ತಿಳಿಸಿದೆ.

WhatsApp Group Join Now
Telegram Group Join Now

2025 ರಲ್ಲಿ ಮತ್ತೆ ಬದಲಾಯಿತು LPG ನಿಯಮ
2025 ರಲ್ಲಿ ಇದೆ ಮೊದಲ ಬಾರಿಗೆ LPG ಗ್ಯಾಸ್ ಸಿಲಿಂಡರ್ ನಿಯಮಗಳಲ್ಲಿ ಹೊಸ ಬದಲಾವಣೆಗಳನ್ನು ಜಾರಿಗೆ ಬರಲಿದೆ. ಇನ್ನು ಬದಲಾದ ಹೊಸ ನಿಯಮ ಮಾರ್ಚ್ 1 2025 ರಿಂದಲೇ ಜಾರಿಗೆ ಬಂದಿರುತ್ತದೆ ಎಂದು ಕರ್ನಾಟಕ ರಾಜ್ಯ ಸರ್ಕಾರ ಅದಿಕ್ರುತ ಪ್ರಕಟಣೆಯನ್ನು ಕೂಡ ಮಾಡಿದೆ.

LPG ಪಡೆಯಲು KYC ಕಡ್ಡಾಯ
ಜಾರಿಗೆ ಬಂದಿರುವ ಹೊಸ LPG ನಿಯಮದ ಪ್ರಕಾರ ಇನ್ನುಮುಂದೆ LPG ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಲು KYC ಮಾಡಿಕೊಂಡಿರುವುದು ಕಡ್ಡಾಯವಾಗಿದೆ. ಯಾವ ಕುಟುಂಬದವರು LPG KYC ಮಾಡಿಸಿಕೊಂಡಿಲ್ಲವೋ ಅವರು ಮುಂದಿನ ದಿನಗಳಲ್ಲಿ LPG ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ.

LPG Rules Changes
LPG KYC and subsidy rules

LPG ಪಡೆಯಲು ಆಧಾರ್ ಸಂಖ್ಯೆ ಲಿಂಕ್ ಕಡ್ಡಾಯ
ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮದ ಪ್ರಕಾರ ಇನ್ನುಮುಂದೆ LPG ಪಡೆದುಕೊಳ್ಳಲು ಆಧಾರ್ ಸಂಖ್ಯೆಯೊಂದಿಗೆ ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ಲಿಂಕ್ ಆಗಿರಲೇಬೇಕು. ಅದೇ ರೀತಿಯಲ್ಲಿ GS ಸಿಲಿಂಡರ್ ವಿತರಣೆಯಲ್ಲಿ OTP ಪರಿಶೀಲನೆ ಮಾಡುವುದು ಕಡ್ಡಾಯವಾಗಿದೆ. ವಂಚನೆ ತಡೆಗಟ್ಟುವ ಉದ್ದೇಶದಿಂದ ಈ ಹೊಸ ನಿಯಮ ಜಾರಿಗೆ ತರಲಗಿದೆ.

LPG ಸಬ್ಸಿಡಿ ನಿಯಮದಲ್ಲಿ ಕೂಡ ಬದಲಾವಣೆ
ಜಾರಿಗೆ ಬಂದಿರುವ ನಿಯಮದ ಪ್ರಕಾರ ಮುಂದಿನ ದಿನಗಳಲ್ಲಿ LPG ಸಬ್ಸಿಡಿ ಹಣವನ್ನು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ನಕಲಿ ತಡೆಗಟ್ಟುವ ಉದ್ದೇಶದಿಂದ ಈ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಇತ್ತೀಚಿನ ದಿನಗಳಲ್ಲಿ LPG ಸಬ್ಸಿಡಿಯಲ್ಲಿ ವಂಚನೆ ಕಂಡುಬರುತ್ತಿರುವ ಕಾರಣ ಈ ಹೊಸ ನಿಯಮ ಜಾರಿಗೆ ತರಲಾಗಿದೆ.

LPG ವಿತರಣೆಯಲ್ಲಿ ಮಿತಿ
ಜಾರಿಗೆ ಬಂದಿರುವ ಹೊಸ LPG ನಿಯಮದ ಪ್ರಕಾರ ಒಂದು ಕುಟುಂಬದವರು ಇನ್ನುಮುಂದೆ ತಿಂಗಳಿಗೆ 2 ಗ್ಯಾಸ್ ಸಿಲಿಂಡರ್ ಮಾತ್ರ ಬುಕ್ ಮಾಡಬಹುದು. ಗ್ಯಾಸ್ ಸಿಲಿಂಡರ್ ಮಾರಾಟ ಮಾಡಿ ಸಾಕಷ್ಟು ಜನರು ಕಪ್ಪು ವ್ಯವಹಾರವನ್ನು ಮಾಡುತ್ತಿರುವ ಕಾರಣ ರಾಜ್ಯ ಸರ್ಕಾರ ಈಗ ಗ್ಯಾಸ್ ಸಿಲಿಂಡರ್ ವಿತರಣೆಯಲ್ಲಿ ಮಿತಿಯನ್ನು ಜಾರಿಗೆ ತಂದಿದೆ.

ಗ್ಯಾಸ್ ಸಿಲಿಂಡರ್ ಗಳಲ್ಲಿ ಸ್ಮಾರ್ಟ್ ಚಿಪ್
ಸರ್ಕಾರ ಈಗ ಗ್ಯಾಸ್ ಸಿಲಿಂಡರ್ ಗಳಲ್ಲಿ ಸ್ಮಾರ್ಟ್ ಚಿಪ್ ಅಳವಡಿಸಲು ಮುಂದಾಗಿದೆ. ಈ ಸ್ಮಾರ್ಟ್ ಚಿಪ್ ಅಳವಡಿಸುವುದರಿಂದ ವಿತರಣೆ ಮತ್ತು ಗ್ಯಾಸ್ ಎಷ್ಟು ಬಳಸಲಾಗುತ್ತಿದೆ ಅನ್ನುವುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ದೇಶದಲ್ಲಿ LPG ಗ್ಯಾಸ್ ಸಿಲಿಂಡರ್ ಗೆ ಸಂಬಂಧಪಟ್ಟಂತೆ ಸಾಕಷ್ಟು ವಂಚನೆಯ ಆರೋಪಗಳು ಕೇಳಿಬರುತ್ತಿರುವ ಕಾರಣ ಕರ್ನಾಟಕ ರಾಜ್ಯ ಸರ್ಕಾರ ಈಗ LPG ವಿತರಣೆ ಮತ್ತು ಸಬ್ಸಿಡಿ ನಿಯಮಗಳಲ್ಲಿ ಕೆಲವು ಬದಲಾವಣೆ ಜಾರಿಗೆ ತಂದಿದೆ. ಇನ್ನು ಬದಲಾದ ಈ ಹೊಸ ನಿಯಮ ಮಧ್ಯಮ ವರ್ಗದ ಮತ್ತು ಬಡವರ್ಗದ ಕುಟುಂಗಳಲ್ಲಿ ಸಾಕಷ್ಟು ಸಹಕಾರಿ ಕೂಡ ಆಗಲಿದೆ.

Leave a Comment