Ration Card Rules: BPL ರೇಷನ್ ಕಾರ್ಡ್ ಇದ್ದವರಿಗೆ ಬೇಸರದ ಸುದ್ದಿ, ರಾಜ್ಯದಲ್ಲಿ ಹೊಸ ನಿಯಮ ಜಾರಿ

ಇತ್ತೀಚಿನ ದಿನಗಳಲ್ಲಿ ರೇಷನ್ ಕಾರ್ಡುಗಳಿಗೆ ಸಂಬಂಧಿಸಿದಂತೆ ಹಲವು ವಂಚನೆಗಳು ಕೇಳುಬರುತ್ತಿದೆ. ಕರ್ನಾಟಕ ರಾಜ್ಯ ಸರ್ಕಾರ ರೇಷನ್ ಕಾರ್ಡ್ ನಿಯಮಗಳಲ್ಲಿ ಈಗಾಗಲೇ ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಆದರೂ ಕೂಡ ರೇಷನ್ ಕಾರ್ಡುಗಳಿಗೆ ಸಂಬಂಧಿಸಿದಂತೆ ಕೆಲವು ದೋಷಗಳು ಕಂಡುಬಂದಿದ್ದು ಈ ಕಾರಣಗಳಿಂದ ಕರ್ನಾಟಕ ರಾಜ್ಯ ಸರ್ಕಾರ ಈಗ ರೇಷನ್ ಕಾರ್ಡ್ ನಿಯಮದಲ್ಲಿ ಹೊಸ ಬದಲಾವಣೆಗಳನ್ನು ಜಾರಿಗೆ ತಂದಿದೆ.

WhatsApp Group Join Now
Telegram Group Join Now

ಮಾರ್ಚ್ 1 2025 ರಿಂದಲೇ ಹೊಸ ರೂಲ್ಸ್
ಕರ್ನಾಟಕ ರಾಜ್ಯ ಸರ್ಕಾರ ಈಗ ಮಾರ್ಚ್ 1 2025 ರಿಂದ ರೇಷನ್ ಕಾರ್ಡುಗಳಿಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಹೊಸ ರೇಷನ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಫಲಾನುಭವಿಗಳಿಗೆ ಸಂಬಂಧಪಟ್ಟಂತೆ ಈಗ ರಾಜ್ಯ ಸರ್ಕಾರ ನಿಯಮಗಲ್ಲಿ ಕೆಲವು ಬದಲಾವಣೆಯನ್ನು ಮಾಡಿದೆ.

BPL Ration Card New Rules In Karnataka
BPL Ration card rules and regulations updated march 2025

ಇನ್ನುಮುಂದೆ ಡಿಜಿಟಲ್ ಪಡಿತರ ಚೀಟಿ
ಪ್ರಸ್ತುತ ದಿನಗಳಲ್ಲಿ ಎಲ್ಲರೂ ಕೂಡ ಬೌತಿಕ ಪಡಿತರ ಚೀಟಿಗಳನ್ನು ಬಳಕೆ ಮಾಡುತ್ತಿದ್ದಾರೆ, ಸದ್ಯ ಈಗ ರಾಜ್ಯ ಸರ್ಕಾರ ಡಿಜಿಟಲ್ ಪಡಿತರ ಚೀಟಿಯನ್ನು ರಾಜ್ಯದಲ್ಲಿ ಜಾರಿಗೆ ತರಲು ಮುಂದಾಗಿದೆ. ಇನ್ನುಮುಂದೆ ಜನರು ಪಡಿತರ ಚೀಟಿಯನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವ ಅಗತ್ಯ ಇರುವುದಿಲ್ಲ.

ಒಂದು ರಾಷ್ಟ ಒಂದು ಪಡಿತರ ಚೀಟಿ
ಕೇಂದ್ರ ಸರ್ಕಾರ ಈಗ ದೇಶದಲ್ಲಿ ಒಂದು ರಾಷ್ಟ್ರ ಒಂದು ಪಡಿತರ ಚೀಟಿ ನಿಯಮಗಳನ್ನು ಅನುಷ್ಠಾನ ಮಾಡಲು ಮುಂದಾಗಿದೆ. ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಯ ಅಡಿಯಲ್ಲಿ ದೇಶದ ಯಾವ ಭಾಗದಲ್ಲಿ ಬೇಕಾದರೂ ಜನರು ಪಡಿತರ ದಾನ್ಯಗಳನ್ನು ಪಡೆದುಕೊಳ್ಳಬಹುದು.

KYC ಅಪ್ಡೇಟ್ ಕಡ್ಡಾಯ
ಇನ್ನುಮುಂದೆ ರೇಷನ್ ದಾನ್ಯಗಳನ್ನು ಪ್ರತಿ ತಿಂಗಳು ಪಡೆದುಕೊಳ್ಳಲು ಕುಟುಂಬದ ಎಲ್ಲಾ ಸದ್ಯಸರು KYC ಅಪ್ಡೇಟ್ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. KYC ಅಪ್ಡೇಟ್ ಮಾಡದೆ ಇದ್ದರೆ ರೇಷನ್ ದಾನ್ಯ ಪಡೆದುಕೊಳ್ಳಲು ಸಾಧ್ಯವಿಲ್ಲ.

BPL ಕಾರ್ಡ್ ಇದ್ದವರಿಗೆ 1000 ರೂ ಆರ್ಥಿಕ ನೆರವು
ಸದ್ಯ ಸರ್ಕಾರ ಈಗ BPL ರೇಷನ್ ಕಾರ್ಡ್ ಹೊಂದಿರುವ ಬಡವರಿಗೆ ಆರ್ಥಿಕ ನೆರವು ಕೂಡ ಮುಂದಾಗಿದೆ. ಈ ಹೊಸ ಯೋಜನೆಯ ಅಡಿಯಲ್ಲಿ ಬಡವರಿಗೆ ಪ್ರತಿ ತಿಂಗಳು 1000 ರೂ ತನಕ ಆರ್ಥಿಕ ನೆರವು ನೀಡಲಾಗುವುದು.

ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯ
ರೇಷನ್ ಕಾರ್ಡುಗಳಿಗೆ ಸಂಬಂಧಪಟ್ಟಂತೆ ಜಾರಿಗೆ ತಂದಿರುವ ಹೊಸ ನಿಯಮಗಳ ಪ್ರಕಾರ ಇನ್ನುಮುಂದೆ ರೇಷನ್ ದಾನ್ಯ ಪಡೆದುಕೊಳ್ಳಲು ಬಯೋಮೆಟ್ರಿಕ್ ಕಡ್ಡಾಯವಾಗಿದೆ. ಬಯೋಮೆಟ್ರಿಕ್ ನೀಡದೆ ಇದ್ದರೆ ರೇಷನ್ ದಾನ್ಯ ಪಡೆದುಕೊಳ್ಳಲು ಸಾಧ್ಯವಿಲ್ಲ.

ರೇಷನ್ ಕಾರ್ಡ್ ರದ್ದು
ಸರ್ಕಾರೀ ನಿಯಮಗಳ ಪ್ರಕಾರ ಬಡತನ ರೇಖೆಗಿಂತ ಕೆಳಗೆ ಇರುವವರು ಮಾತ್ರ BPL ಕಾರ್ಡ್ ಪಡೆದುಕೊಳ್ಳಬಹುದು, ಆದರೆ ಈಗ ಬಡತನ ರೇಖೆಗಿಂತ ಮೇಲೆ ಇರುವವವರು ಕೂಡ BPL ಕಾರ್ಡ್ ಪಡೆದುಕೊಂಡಿರುವ ಕಾರಣ ಅವರ ರೇಷನ್ ಕಾರ್ಡ್ ರದ್ದು ಮಾಡಲು ಈಗ ಸರ್ಕಾರ ಮುಂದೆ. ಸರ್ಕಾರೀ ನೌಕರರು, ಸ್ವಂತ ವ್ಯವಹಾರ ಮಾಡುವುತ್ತಿರುವವರು, ಮನೆಯಲ್ಲಿ ಸ್ವಂತ ಮತ್ತು ಸ್ವಂತ 4 ಚಕ್ರದ ವಾಹನ ಇದ್ದವರು, ಆದಾಯ ತೆರಿಗೆ ಪಾವತಿ ಮಾಡುವವರು ಸೇರಿದಂತೆ ಹಲವರ BPL ರೇಷನ್ ಕಾರ್ಡ್ ಈಗ ರದ್ದು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ರೇಷನ್ ಕಾರ್ಡುಗಳಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಮತ್ತು ನಕಲು ತಡೆಗಟ್ಟುವ ಉದ್ದೇಶಗಳಿಂದ ಕರ್ನಾಟಕ ರಾಜ್ಯ ಸರ್ಕಾರ ಈಗ ರೇಷನ್ ಕಾರ್ಡ್ ನಿಯಮಗಳಲ್ಲಿ ಈ ಬದಲಾವಣೆ ಜಾರಿಗೆ ತಂದಿರುತ್ತದೆ.

Leave a Comment