NHAI Toll Collections: ಇತ್ತೀಚಿನ ದಿನಗಳಲ್ಲಿ ರಸ್ತೆಗಳಲ್ಲಿ ವಾಹನ ಸವಾರರು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ರಸ್ತೆಗಳು ಸರಿಯಾಗಿ ಇಲ್ಲದೆ ಇದ್ದರೂ ಕೂಡ ಟೋಲ್ ಶುಲ್ಕ (Toll Tax) ಪಾವತಿ ಮಾಡುತ್ತಿದ್ದಾರೆ. ಸದ್ಯ ಟೋಲ್ ಪಾವತಿಗೆ ಸಂಬಂಧಿಸಿದಂತೆ ಈಗ ಈ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ. ಜಾರಿಗೆ ಬಂದಿರುವ ಹೊಸ ನಿಯಮದ ಪ್ರಕಾರ ಇನ್ನುಮುಂದೆ ರಸ್ತೆಗಳು ಕೆಟ್ಟದಾಗಿದ್ದರೆ ಯಾವುದೇ ವಾಹನ ಸವಾರರು ಕೂಡ ಟೋಲ್ ಪಾವತಿ (Toll Payments) ಮಾಡುವ ಅಗತ್ಯ ಇರುವುದಿಲ್ಲ. ಹಾಗಾದರೆ ಯಾವ ಸರ್ಕಾರ ಈ ಆದೇಶವನ್ನ ಹೊರಡಿಸಿದೆ ಮತ್ತು ಯಾವ ರಸ್ತೆ ಕೆಟ್ಟದಾಗಿದ್ದರೆ ಟೋಲ್ ಕಟ್ಟುವ ಅಗತ್ಯ ಇಲ್ಲ ಅನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.
ಇನ್ಮುಂದೆ ರಸ್ತೆ ಕೆಟ್ಟದಾಗಿದ್ದರೆ ಟೋಲ್ ಪಾವತಿ ಮಾಡುವ ಅಗತ್ಯ ಇಲ್ಲ
ಹೌದು ರಸ್ತೆ ಕೆಟ್ಟದಾಗಿದ್ದರೆ ವಾಹನ ಸವಾರರಿಂದ NHAI ರಿಯಾಯಿತಿ ದರದಲ್ಲಿ ಟೋಲ್ ಅಥವಾ ಟೋಲ್ ತಗೆದುಕೊಳ್ಳುವಂತಿಲ್ಲಾ ಎಂದು ಜಮ್ಮು ಕಶ್ಮೀರ ಕೋರ್ಟ್ ಆದೇಶವನ್ನ ಹೊರಡಿಸಿದ್ದು ಇದು ವಾಹನ ಸವಾರರ ಸಂತಸಕ್ಕೆ ಕಾರಣವಾಗಿದೆ. NH-44 ಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಅರ್ಜಿಯನ್ನು ಪರಿಶೀಲನೆ ಮಾಡಿದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಕ್ ಹೈಕೋರ್ಟ್ (Highcourt) ನ ಮುಖ್ಯ ನ್ಯಾಯಾಧೀಶರಾದ ತಾಶಿ ರಬ್ಸ್ತಾನ್ ಮತ್ತು ಮತ್ತು ನ್ಯಾಯಮೂರ್ತಿ ಚೌಧರಿ ಅವರು ಈ ತೀರ್ಪು ನೀಡಿದ್ದಾರೆ.

ನಿರ್ಮಾಣ ಹಂತದಲ್ಲಿ ಇರುವ NH-44 ಸದ್ಯ ವಾಹನ ಸವಾರರಿಗೆ ಕೆಟ್ಟದಾಗಿದ್ದು, ಈ ಕಾರಣದಿಂದ NHAI ವಾಹನ ಸವಾರರಿಂದ ರಿಯಾಯಿತಿ ದರದಲ್ಲಿ ಅಂದರೆ ಶೇಕಡಾ 20 ರಷ್ಟು ಮಾತ್ರ ತೆರಿಗೆ ಪಾವತಿ ಮಾಡಬೇಕು ಎಂದು ಆದೇಶವನ್ನು ಹೊರಡಿಸಿದೆ.
ಇನ್ನು 60 KM ಒಳಗೆ ಇನ್ನೊಂದು ಟೋಲ್ ಪ್ಲಾಜಾ ಸ್ಥಾಪನೆ ಮಾಡುವಂತೆ ಇಲ್ಲ ಮತ್ತು ಸಾರ್ವಜನಿಕ ಹಿತಾಸಕ್ತಿ ಕಾಪಾಡಿಕೊಳ್ಳುವುದು NHAI ನ ಕರ್ತವ್ಯ ಎಂದು ಹೈಕೋರ್ಟ್ ಈ ಮೂಲಕ ಆದೇಶವನ್ನು ಹೊರಡಿಸಿದೆ. ಇನ್ನು ರಸ್ತೆಗಳು ಇನ್ನು ಕೂಡ ಶೇಕಡಾ 60 ರಷ್ಟು ಮಾತ್ರ ಪೂರ್ಣಗೊಂಡಿದ್ದು ರಸ್ತೆ ಸಂಪೂರ್ಣ ಪೂರ್ಣಗೊಳ್ಳುವ ತನಕ ಯಾವುದೇ ಹೆದ್ದಾರಿ ಶುಲ್ಕವನ್ನ NHAI ಪಡೆದುಕೊಳ್ಳುವಂತಿಲ್ಲ. ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಉತ್ತಮ ಹಂತದಲ್ಲಿ ಇರುವ ರಾಷ್ಟ್ರೀಯ ಹೆದ್ದಾರಿಗಳು ಮಾತ್ರ ಟೋಲ್ ಶುಲ್ಕ ಪಡೆದುಕೊಳ್ಳುವ ಅರ್ಹತೆ ಪಡೆದುಕೊಂಡಿರುತ್ತದೆ ಮತ್ತು ನಿರ್ಮಾಣ ಹಂತದಲ್ಲಿ ಇರುವ ಯಾವುದೇ ರಾಷ್ಟ್ರೀಯ ಹೆದ್ದಾರಿಯಲ್ಲಿ NHAI ಟೋಲ್ ಶುಲ್ಕವನ್ನ ಪಡೆದುಕೊಳ್ಳುವಂತಿಲ್ಲ ಈಗ ಹೈಕೋರ್ಟ್ ಆದೇಶವನ್ನು ಹೊರಡಿಸಿದೆ.
ಇನ್ನು NHAI 60 KM ಒಳಗೆ ಇನ್ನೊಂದು ಟೋಲ್ ಗೇಟ್ ಸ್ಥಾಪನೆ ಮಾಡುವಂತೆ ಇಲ್ಲ ಮತ್ತು ಈಗಾಗಲೇ ಸ್ಥಾಪಿಸಿದ್ದರೆ ಅದನ್ನು ತಕ್ಷಣ ಮುಚ್ಚಬೇಕು ಎಂದು ಜಮ್ಮು ಕಶ್ಮೀರ ಹೈಕೋರ್ಟ್ ಈ ಮೂಲಕ ಆದೇಶವನ್ನು ಹೊರಡಿಸಿದೆ. ನಿರ್ಮಾಣ ಹಂತದಲ್ಲಿ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರು ಸಾಕಷ್ಟು ಕಿರಿಕಿರಿಯನ್ನು ಅನುಭವಿಸುತ್ತಾರೆ ಮತ್ತು ರಸ್ತೆ ಸಂಪೂರ್ಣವಾಗದೆ ಆ ರಸ್ತೆಯಲ್ಲಿ ಟೂಲ್ ತೆರಿಗೆ ತಗೆದುಕೊಳ್ಳುವುದು ತಪ್ಪಾಗುತ್ತದೆ. ಈ ಕಾರಣಕ್ಕೆ NHAI ಯಾವುದೇ ಹೆದ್ದಾರಿಯಲ್ಲಿ ಈ ತಪ್ಪುಗಳನ್ನ ಮಾಡಬಾರದು ಎಂದು ಕೂಡ ಕೋರ್ಟ್ ಆದೇಶದಲ್ಲಿ ತಿಳಿಸಿದೆ. ರಸ್ತೆ ಶೇಕಡಾ 70 ರಷ್ಟು ಪೂರ್ಣವಾಗಿದ್ದರೆ ಆ ರಸ್ತೆಯಲ್ಲಿ ರಿಯಾಯಿತಿ ದರದಲ್ಲಿ ಶುಲ್ಕ ತಗೆದುಕೊಳ್ಳಬೇಕು ಮತ್ತು ರಸ್ತೆ 100% ಪೂರ್ಣವಾಗಿದ್ದರೆ ಮಾತ್ರ ಸಂಪೂರ್ಣ ಶುಲ್ಕ ಪಡೆದುಕೊಳ್ಳಬೇಕು ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಸರಕಾರಗಳು ತೆರಿಗೆ ವಸೂಲಿ ಮಾಡುವುದು ಅಂದರೆ ರೋಡ್ ಟ್ಯಾಕ್ಸ್ ಎಲ್ಲವೂ ದಿನವೂ ಓಡಾಡುವ ವಾಹನಗಳಿಗೆ ರಸ್ತೆಗಳು ಹಳ್ಳ ಕೊಳ್ಳಗಳಿಲ್ಲದೆ ಟಾರ್ ಅಥವಾ ಕಾಂಕ್ರೀಟ್ ಆವಾಗ ಆವಾಗ ಸರಿಮಾಡುವುಪದು ಸರಕಾರದ ಕರ್ತವ್ಯ. ತೆರಿಗೆಯು ವಸೂಲಿ ಮಾಡಿ ರಸ್ತೆಗಳು ಅದ್ವಾನವಾಗಿದ್ದರೆ ತೆರಿಗೆ ಕೊಟ್ಟು ಏನು ಪ್ರಯೋಜನ? ವಾಹನಗಳು ನಿರಂತರವಾಗಿ ಓಡಾಡುವ ರಸ್ತೆಗಳು ತೆರಿಗೆ ಕೊಟ್ಟು ಸರಿ ಇಲ್ಲದಿದ್ದರೆ ತೆರಿಗೆ ಪಾವತಿ ಮಾಡದೇ ಇರುವುದಕ್ಕೆ ಕೋರ್ಟ್ ತೀರ್ಮಾನ ಸರಿ ಇದೆ.