PMAY-U 2.0: ಈಗಿನ ಕಾಲದಲ್ಲಿ ಸ್ವಂತ ಮನೆ ಕಟ್ಟುವುದು ಪ್ರತಿಯೊಬ್ಬರ ಕನಸು ಎಂದು ಹೇಳಬಹುದು. ಮನೆ ಕಟ್ಟುವ ಸಲುವಾಗಿ ಸಾಕಷ್ಟು ಜನರು ಬ್ಯಾಂಕುಗಳಲ್ಲಿ ಮತ್ತು ಸಂಘ ಸಂಸ್ಥೆಗಳಲ್ಲಿ ಸಾಕಷ್ಟು ಸಾಲವನ್ನು ಮಾಡಿಕೊಂಡಿದ್ದಾರೆ. ಇನ್ನು ಮನೆ ಕಟ್ಟುವ ಬಡವರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಯೋಜನೆಯ ಲಾಭವನ್ನ ಪಡೆದುಕೊಂಡು ಸಾಕಷ್ಟು ಜನರು ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಇನ್ನು ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಅರ್ಬನ್ ಯೋಜನೆಯ ಅಡಿಯಲ್ಲಿ ಮನೆ ಕಟ್ಟುವವರು 2 ಲಕ್ಷ ರೂಪಾಯಿಯನ್ನು ಉಚಿತವಾಗಿ ಪಡೆದುಕೊಳ್ಳಬಹುದು.
ಏನಿದು ಪ್ರಧಾನಮಂತ್ರಿ ಆವಾಸ್ ಯೋಜನೆ ಅರ್ಬನ್ 2.0
ಸ್ವಂತ ಮನೆ ಕಟ್ಟುವ ಬಡವರಿಗಾಗಿ ಕೇಂದ್ರ ಸರ್ಕಾರ ಈ ಧಾನಮಂತ್ರಿ ಆವಾಸ್ ಯೋಜನೆ ಅರ್ಬನ್ 2.0 ಅನ್ನು ಜಾರಿಗೆ ತಂದಿದೆ. ಸ್ವಂತ ಮನೆ ನಿರ್ಮಾಣ ಕನಸು ಕಂಡಿರುವ ಬಡವರು ಈ ಯೋಜನೆಯ ಲಾಭವನ್ನು ಸಂಪೂರ್ಣವಾಗಿ ಪಡೆದುಕೊಳ್ಳಬಹುದು. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಮನೆ ನಿರ್ಮಾ ಮಾಡಿಕೊಡುವುದು ಈ ಯೋಜನೆಯ ಪ್ರಮುಖ ಉದ್ದೇಶ ಆಗಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆ ಅರ್ಬನ್ 2.0 ಯಿಂದ ಎಷ್ಟು ಸಬ್ಸಿಡಿ ಸಿಗಲಿದೆ
PMAY-U 2.0 ಒಂದು ಕೇಂದ್ರ ಸರ್ಕಾರದ ವಸತಿ ಯೋಜನೆಯಾಗಿದ್ದು ಈ ಯೋಜನೆಯ ಅಡಿಯಲ್ಲಿ ಸಬ್ಸಿಡಿ ಪಡೆದುಕೊಳ್ಳಬಹುದು. ಕೇಂದ್ರದ ಈ ಯೋಜನೆಯ ಅಡಿಯಲ್ಲಿ ಕಡಿಮೆ ಬಡ್ಡಿಗೆ ವಸತಿ ಸಾಲ ಕೂಡ ಪಡೆದುಕೊಳ್ಳಬಹುದು.
PMAY-U 2.0 ಯೋಜನೆಯಿಂದ ಏನೇನು ಲಾಭ
* ಕೇಂದ್ರದ PMAY-U 2.0 ಯೋಜನೆಯ ಅಡಿಯಲ್ಲಿ 2 .5 ಲಕ್ಷ ರೂ ತನಕ ಮನೆ ನಿರ್ಮಾಣ ಮಾಡಲು ಸಾಲ ಪಡೆದುಕೊಳ್ಳಬಹುದು.
* ಈ ಯೋಜನೆ ನಿಮಗೆ ಗೃಹಸಾಲದ ಮೇಲೆ ಸಬ್ಸಿಡಿ ನೀಡುವ ಕಾರಣ ನಿಮಗೆ EMI ಕೂಡ ಕಡಿಮೆ ಬರುತ್ತೆ.
* ಆರ್ಥಿಕವಾಗಿ ಸಬಲರಲ್ಲದವರು ಮತ್ತು ಕಡು ಬಡವರು ಈ ಯೋಜನೆಯ ಲಾಭವನ್ನು ಸಂಪೂರ್ಣವಾಗಿ ಪಡೆದುಕೊಳ್ಳಬಹುದು.
* ಮಹಿಳೆಯರು, ವಿಧವೆಯರು, ಅಂಗವಿಕರು ಮತ್ತು ಒಂಟಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆಯನ್ನು ಈ ಯೋಜನೆಯ ಅಡಿಯಲ್ಲಿ ನೀಡಲಾಗುತ್ತೆ.
* ದೇಶದಲ್ಲಿ ಹಸಿರು ವಸತಿಯನ್ನು ಉತ್ತೇಜನ ಮಾಡುವುದು ಈ ಯೋಜನೆಯ ಪ್ರಮುಖದ ಉದ್ದೇಶ ಆಗಿದೆ.
ಯಾರು ಯಾರಿಗೆ ಸಿಗಲಿದೆ PMAY-U 2.0 ಯೋಜನೆಯ ಲಾಭ
* ಭಾರತದ ಪ್ರಜೆಯಾಗಿರಬೇಕು
* ವಾರ್ಷಿಕ ಆದಾಯ 3 ಲಕ್ಷ ಮೀರಿರಬಾರದು
*ಯೋಜನೆಯ ಲಾಭ ಪಡೆಯುವವರು ಸ್ವಂತ ಮನೆ ಹೊಂದಿರಬಾರದು
*ಅಧಿಸೂಚನೆಯಲ್ಲಿ ಇರುವ ನಗರದಲ್ಲಿ ಇರಬೇಕು
* ಗೃಹಸಾಲ ಹೊಂದಿರುವವರು ಮಾತ್ರ ಈ ಯೋಜನೆಯ ಲಾಭ ಪಡೆಯಬಹುದು
ಅರ್ಜಿ ಸಲ್ಲಿಸುವುದು ಹೇಗೆ
ಸಾಮಾನ್ಯ ಸೇವಾಕೇಂದ್ರ ಅಥವಾ ಬ್ಯಾಂಕುಗಳಿಗೆ ಭೇಟಿನೀಡಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ನೀವು ಗೃಹಸಾಲಕ್ಕೆ ಅನುಮೋದನೆ ಪಡೆದುಕೊಂಡ ಸಮಯದಲ್ಲಿ ಬ್ಯಾಂಕ್ ಸರ್ಕಾರದಿಂದ ಸಬ್ಸಿಡಿ ಪಡೆದುಕೊಳ್ಳುತ್ತದೆ. ಸಾಲ ಅನುಮೋದನೆ ಆದನಂತರ ನೇರವಾಗಿ ಆ ಹಣ ನಿಮ್ಮ ಸಾಲದ ಖಾತೆಗೆ ಜಮಾ ಆಗಲಿದೆ.