FD Scheme Rules: ಬ್ಯಾಂಕುಗಳಲ್ಲಿ FD ಇಡುವವರಿಗೆ ದೇಶಾದ್ಯಂತ ಹೊಸ ರೂಲ್ಸ್, RBI ಘೋಷಣೆ

RBI Rules On Fixed Deposit Scheme: ಈಗಿನ ಕಾಲದ ಜನರು ತಮ್ಮ ಭವಿಷ್ಯದ ಉದ್ದೇಶದಿಂದ ಬ್ಯಾಂಕಿನ ವಿವಿಧ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಇನ್ನು ಬ್ಯಾಂಕುಗಳಲ್ಲಿ ಇರುವ ವಿವಿಧ ಯೋಜನೆಯಲ್ಲಿ FD ಯೋಜನೆ (Fixed Deposit Scheme) ಕೂಡ ಒಂದಾಗಿದೆ. FD ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ನಮ್ಮ ಹಣಕ್ಕೆ ಸುರಕ್ಷತೆ ಮಾತ್ರವಲ್ಲದೆ ನಿರ್ಧಿಷ್ಟ ಬಡ್ಡಿ ಕೂಡ ಸಿಗುತ್ತದೆ. ಈ ಕಾರಣಗಳಿಂದ ಜನರು ಹೆಚ್ಚು ಹೆಚ್ಚು FD ಯೋಜನೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಇದರ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್ ಈಗ FD ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಹೊಸ ನಿಯಮಗಳನ್ನ ಕೂಡ ಜಾರಿಗೆ ತಂದಿದೆ.

WhatsApp Group Join Now
Telegram Group Join Now

ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹೂಡಿಕೆ ಮಾಡುವವರಿಗೆ ಹೊಸ ನಿಯಮ
ಭಾರತೀಯ ರಿಸರ್ವ್ ಬ್ಯಾಂಕ್ ಈಗ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ ನಲ್ಲಿ ಹೂಡಿಕೆ ಮಾಡುವವರಿಗಾಗಿ ಹೊಸ ನಿಯಮವನ್ನು ಜಾರಿಗೆ ತಂದಿದೆ ಮತ್ತು ಈ ನಿಯಮವನ್ನು ಫಿಕ್ಸೆಡ್ ಡೆಪಾಸಿಟ್ ಯೋಜನೆಯಲ್ಲಿ ಹೂಡಿಕೆ ಮಾಡುವ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಹಾಗಾದರೆ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹೂಡಿಕೆ ಮಾಡುವವರಿಗೆ RBI (Reserve Bank Of India) ಹೊರಡಿಸಿರುವ ಹೊಸ ನಿಯಮಗಳು ಏನೆಂದು ನಾವೀಗ ತಿಳಿಯೋಣ.

fixed deposit scheme rules of RBI
rbi new rules on fixed deposit scheme

RBI Rules On Fixed Deposit Scheme 
* RBI ನಿಯಮದ ಪ್ರಕಾರ 18 ವರ್ಷ ಮೇಲ್ಪಟ್ಟ ಜನರು ಮಾತ್ರ FD ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

* ಜನರು ತಮ್ಮ ಆದಾಯಕ್ಕೆ ಅನುಗುಣವಾಗಿ ಮಾತ್ರ FD ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಮತ್ತು ಅದರಿಂದ ನಿರ್ಧಿಷ್ಟ ಬಡ್ಡಿ ಪಡೆದುಕೊಳ್ಳಬೇಕು.

* FD ಯೋಜನೆಯಲ್ಲಿ ಹೂಡಿಕೆ ಮಾಡಲು ಯಾವುದೇ ಮಿತಿ ಇಲ್ಲ, ಆದರೆ ಸರಿಯಾದ ದಾಖಲೆಗಳನ್ನು ಕಡ್ಡಾಯವಾಗಿ ಬ್ಯಾಂಕುಗಳಿಗೆ ನೀಡಬೇಕು. ಒಂದುವೇಳೆ ನೀವು ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಆ ಹಣಕ್ಕೆ ಮೂಲವನ್ನು ತೋರಿಸಬೇಕಾಗುತ್ತದೆ, ಇಲ್ಲವಾದರೆ ತೆರಿಗೆ ಇಲಾಖೆಯಿಂದ ನೀವು ಸಮಸ್ಯೆ ಎದುರಿಸಬೇಕಾಗುತ್ತದೆ.

* ಒಬ್ಬ ವ್ಯಕ್ತಿ FD ಖಾತೆಯನ್ನು ತೆರೆದರೆ ಆತ ಕಡ್ಡಾಯವಾಗಿ KYC ಪ್ರಕ್ರಿಯೆ ಪೂರ್ಣಗೊಳಿಸಬೇಕು

* KYC ಮಾಡಿಸುವ ಸಮಯದಲ್ಲಿ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಕೆಲವು ಅಗತ್ಯ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು.

* ನೀವು ಬ್ಯಾಂಕ್ ಅಥವಾ ಅಂಚೆ ಕಚೇರಿಯ FD ಯೋಜನೆಯಲ್ಲಿ (Post Office Fixed Deposit) 40,000 ಸಾವಿರಕ್ಕಿಂದ ಅಧಿಕ ಬಡ್ಡಿ ಪಡೆದ ನೀವು TDS ಅನ್ನು ಕಡ್ಡಾಯವಾಗಿ ಪಾವತಿ ಮಾಡಬೇಕು, ಇದು ಭಾರತೀಯ ತೆರಿಗೆ ನಿಯಮವಾಗಿದೆ.

* ಹಿರಿಯ ನಾಗರಿಕರು 50,000 ರೂ ಗಿಂತ ಅಧಿಕ ಬದಿಯಲ್ಲಿ FD ಯೋಜನೆಯಲ್ಲಿ ಪಡೆದುಕೊಂಡರೆ ಅವರು ಕೂಡ TDS ಪಾವತಿ ಮಾಡಬೇಕು, TDS ನಿಯಮದ ಕಾರಣ FD ಯೋಜನೆಯಲ್ಲಿ ಖಾತೆ ತೆರೆಯುವ ಸಮಯದಲ್ಲಿ ಪಾನ್ ಕಾರ್ಡ್ ಕಡ್ಡಾಯವಾಗಿ ನೀಡಬೇಕು.

* ಒಬ್ಬ ವ್ಯಕ್ತಿ ಎಷ್ಟು FD ಖಾತೆಯನ್ನು ಕೂಡ ತೆರೆಯಬಹುದಾಗಿದೆ, FD ಖಾತೆ ತೆರೆಯುವುದಕ್ಕೆ ಯಾವುದೇ ಮಿತಿ ಇರುವುದಿಲ್ಲ.

* TDS ಶುಲ್ಕವನ್ನು ಕಡಿತ ಮಾಡಿದರೆ ಅದನ್ನು ತೆರಿಗೆ ನಿಯಮಗಳ ಅಡಿಯಲ್ಲಿ ಹಿಂಪಡೆದುಕೊಳ್ಳಬಹುದು.

* 18 ವರ್ಷಕ್ಕಿಂತ ಕೆಳಗಿನವರು FD ಯೋಜನೆಯಲ್ಲಿ ಖಾತೆ ತೆರೆದರೆ ಅವರು ಪಾನ್ ಕಾರ್ಡ್ ನೀಡುವ ಅಗತ್ಯ ಇಲ್ಲ, ಆದರೆ ಕೆಲವು ಮಾರ್ಗಸೂಚಿ ಅನುಸರಿಸಬೇಕಾಗುತ್ತದೆ.

* FD ಯೋಜನೆಯ ಬಡ್ಡಿ ಮೊತ್ತವು ಬ್ಯಾಂಕುಗಳಿಂದ ಬ್ಯಾಂಕಿಗೆ ವಿಭಿನ್ನ ಆಗಿದ್ದು ಜನರು ಅದನ್ನು ಅರಿತು FD ಯೋಜನೆಯಲ್ಲಿ ಹೂಡಿಕೆ ಮಾಡಬೇಕು.

* ಸುರಕ್ಷಿತ ಬ್ಯಾಂಕುಗಳಲ್ಲಿ ಮಾತ್ರ FD ಯೋಜನೆಯನ್ನು ತೆರೆಯುವುದು ಉತ್ತಮ, ಬ್ಯಾಂಕ್ ದಿವಾಳಿಯಾದರೆ ನೀವು ಸಮಸ್ಯೆ ಎದುರಿಸಬೇಕಾಗುತ್ತದೆ.

Leave a Comment