TVS iQube S 3.4kWh: 2025 ರ ವರ್ಷದಲ್ಲಿ ನೀವು ಸ್ಕೂಟರ್ ಖರೀದಿ ಮಾಡಬೇಕು ಅಂದುಕೊಂಡಿದ್ದರೆ ಇದು ಉತ್ತಮ ಸಮಯ ಎಂದು ಹೇಳಬಹುದು. ಪ್ರತಿಷ್ಠಿತ ವಾಹನ ತಯಾಕರ ಕಂಪೆನಿಯಾಗಿರುವ TVS ಈಗ ಹೊಸ ಮಾದರಿಯ ಸ್ಕೂಟರ್ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಕಡಿಮೆ ಬೆಲೆಗೆ ಹೆಚ್ಚು ಮೈಲೇಜ್ ಕೊಡುವ ಸ್ಕೂಟರ್ ಇದಾಗಿದ್ದು ಬಡವರ ಬಂಧುವಾಗಿದೆ ಎಂದು ಹೇಳಬಹುದು. ಸದ್ಯ ಮಾರುಕಟ್ಟೆಯಲ್ಲಿ ಲಾಂಚ್ ಆದ ಈ ಸ್ಕೂಟರ್ ಗೆ ಜನರು ಮೆಚ್ಚುಗೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ. ಹಾಗಾದರೆ TVS ಲಾಂಚ್ ಮಾಡಿರುವ ಈ ಸ್ಕೂಟರ್ ಯಾವುದು ಮತ್ತು ಇದರ ಬೆಲೆ ಹಾಗು ಮೈಲೇಜ್ ಎಷ್ಟು ಅನ್ನುವುದನ್ನು ನಾವೀಗ ತಿಳಿಯೋಣ.
ಮಾರುಕಟ್ಟೆಗೆ ಲಾಂಚ್ ಆಯಿತು TVS iQube S 3.4kWh
ಹೌದು ಮಾರುಕಟ್ಟೆಗೆ ಈಗ TVS iQube S 3.4kWh ಸ್ಕೂಟರ್ ಲಾಂಚ್ ಆಗಿದ್ದು ದೇಶದಲ್ಲಿ ಅಪಾರ ಬೇಡಿಕೆ ಪಡೆದುಕೊಂಡಿದೆ. TVS iQube S 3.4kWh ನ ಬೆಲೆ ಮತ್ತು ಮೈಲೇಜ್ ಕಂಡು ಜನರು ಹೆಚ್ಚು ಹೆಚ್ಚು ಬುಕ್ ಮಾಡುತ್ತಿದ್ದಾರೆ. ಕಡಿಮೆ ಬೆಲೆಗೆ ಹೆಚ್ಚು ಮೈಲೇಜ್ ಕೊಡುವ ಸ್ಕೂಟರ್ ಇದಾಗಿದ್ದು ಹಲವು ಆಧುನಿಕ ವಿಶೇಷತೆ ಕೂಡ ಈ ಸ್ಕೂಟರ್ ಹೊಂದಿರುತ್ತದೆ.

TVS iQube S 3.4kWh ಬೆಲೆ ಮತ್ತು ಮೈಲೇಜ್
TVS iQube S 3.4kWh ಸ್ಕೂಟರ್ ಗೆ ನೀವು ಒಮ್ಮೆ ಚಾರ್ಜ್ ಮಾಡಿದರೆ ಯಾವುದೇ ಸಮಸ್ಯೆ ಇಲ್ಲದೆ 100 Km ತನಕ ಪ್ರಯಾಣವನ್ನು ಮಾಡಬಹುದು. ಅಷ್ಟೇ ಮಾತ್ರವಲ್ಲದೆ ಈ TVS iQube S 3.4kWh ಪ್ರತಿ ಗಂಟೆಗೆ 75 Km ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಕೂಡ ಹೊಂದಿದೆ.
TVS iQube S 3.4kWh ಸ್ಕೂಟರ್ ನಲ್ಲಿದೆ 45 ಕ್ಕೂ ಹೆಚ್ಚು ವಿಶೇಷತೆ
ನಾವು TVS iQube S 3.4kWh ಸ್ಕೂಟರ್ ನ ಮುಂಗಾಗದಲ್ಲಿ 45 ಕ್ಕೂ ಹೆಚ್ಚು ವಿಶೇಷತೆಯನ್ನು ಕಾಣಬಹುದು. ಅಷ್ಟೇ ಮಾತ್ರವಲ್ಲದೆ ಈ TVS iQube S 3.4kWh ಕೇವಲ 4 ಸೆಕೆಂಡ್ ನಲ್ಲಿ 40 ವೇಗವನ್ನು ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇನ್ನು ಈ ಜನಪ್ರಿಯ ಸ್ಕೂಟರ್ ಮೇಲೆ ಸರ್ಕಾರ ಟ್ಯಾಕ್ಸ್ ಕೂಡ ಕಡಿಮೆ ಮಾಡಿದೆ. ಇದೊಂದು ಎಲೆಕ್ಟ್ರಿಕ್ ಸ್ಕೂಟರ್ ಆಗಿರುವ ಕಾರಣ ನೀವು ಈ ಸ್ಕೂಟರ್ ಮೇಲೆ ತೆರಿಗೆ ರಿಯಾಯಿತಿ ಕೂಡ ಪಡೆದುಕೊಳ್ಳಬಹುದು.
ಒಮ್ಮೆ ಚಾರ್ಜ್ ಮಾಡಿದರೆ 100 Km ಮೈಲೇಜ್
TVS iQube S 3.4kWh ಸ್ಕೂಟರ್ 3.4 Wh ಸಾಮರ್ಥ್ಯದ ಲಿಥಿಯಂ ಬ್ಯಾಟರಿ ಹೊಂದಿದೆ. 4.5 ಘಂಟೆಯಲ್ಲಿ 80 % ಚಾರ್ಜ್ ಕೂಡ ಮಾಡಬಹುದು. ಸಂಪೂರ್ಣ ಚಾರ್ಜ್ ಮಾಡಿದ ಎಕಾನಮಿ ಸ್ಪೀಡ್ ನಲ್ಲಿ ಪ್ರಯಾಣ ಮಾಡಿದರೆ 100 Km ತನಕ ಯಾವುದೇ ಸಮಸ್ಯೆ ಇಲ್ಲದೆ ಪ್ರಯಾಣ ಕೂಡ ಮಾಡಬಹುದು.
TVS iQube S 3.4kWh ಬೆಲೆ ಮತ್ತು ವಿಶೇಷತೆ
TVS iQube S 3.4kWh ಬ್ಲೂಟೂತ್, LED ಹೆಡ್ ಲೈಟ್, ಎರಡು ಟೈಯರ್ ಗಳಿಗೆ ಡಿಸ್ಕ್ ಬ್ರೇಕ್ ಗಳು. ಪಾರ್ಕಿಂಗ್, ಲೊಕೇಶನ್, ದೊಡ್ಡ ಡಿಸ್ಪ್ಲೇ ಮತ್ತು -ಮೊಬೈಲ್ ಸಂಪರ್ಕ ಸೇವೆಯನ್ನು ಕೂಡ ಒಳಗೊಂಡಿದೆ. ಇನ್ನು ಬೆಲೆಯ ವಿಷಯಕ್ಕೆ ಬರುವುದಾದರೆ, TVS iQube S 3.4kWh ನ ಆರಂಭಿಕ ಬೆಲೆ 1.41 ಲಕ್ಷ ರೂ ಆಗಿರುತ್ತದೆ.