Income Tax Rules On FD Investment: ಇತ್ತೀಚಿನ ದಿನಗಳಲ್ಲಿ ತೆರಿಗೆ ನಿಯಮದಲ್ಲಿ (Income Tax Rules) ಹಲವು ಬದಲಾವಣೆಗಳನ್ನು ಜಾರಿಗೆ ತರಲಾಗಿದೆ. ಹೌದು ತೆರಿಗೆ ನಿಯಮದಲ್ಲಿ ಕೆಲವು ಬದಲಾವಣೆ ಮಾಡಲಾಗಿದ್ದು ಜನರು ಅದನ್ನು ತಿಳಿದುಕೊಳ್ಳುವುದು ಅತೀ ಉತ್ತಮ. ಇದರ ನಡುವೆ FD ನಿಯಮದಲ್ಲಿ ಕೂಡ ಬದಲಾವಣೆ ಮಾಡಲಾಗಿದೆ. ಹೌದು FD ಹೂಡಿಕೆಯ (FD Investment) ಮೇಲೆ TDS ನಿಯಮವನ್ನು ಜಾರಿಗೆ ತರಲಾಗಿದ್ದು FD ಹೂಡಿಕೆ ಮಾಡುವವರಿಗೆ ಈ TDS ನಿಯಮದ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಒಳ್ಳೆಯದು. ಇದರ ನಡುವೆ FD ಹೂಡಿಕೆ ಮಾಡುವವರಿಗೆ ಇನ್ನೊಂದು ಗುಡ್ ನ್ಯೂಸ್ ಬಂದಿದೆ. ಹೌದು FD ಹೂಡಿಕೆ ಮಾಡುವವರು ಇಷ್ಟು ಮೊತ್ತದ ಹಣವನ್ನು FD ಯೋಜನೆಯಲ್ಲಿ ಇಟ್ಟರೆ ಯಾವುದೇ TDS ಕಟ್ಟುವ ಅಗತ್ಯ ಇಲ್ಲ.
FD ಯೋಜನೆಗೂ TDS ನಿಯಮ ಅನ್ವಯ
ಹೌದು FD ಯೋಜನೆಯಲ್ಲಿ ಹೂಡಿಕೆ ಮಾಡಿ ಅದರಿಂದ ಬರುವ ಬಡ್ಡಿ ಮೊತ್ತ TDS ಪಾವತಿ ಮಾಡಬೇಕು ಮತ್ತು ಇದು ತೆರಿಗೆ ನಿಯಮ ಕೂಡ ಆಗಿದೆ. ಹೌದು FD ಯೋಜನೆಯ ಅಡಿಯಲ್ಲಿ 40 ಸಾವಿರಕ್ಕಿಂತ ಅಧಿಕ ಬಡ್ಡಿ ಪಡೆದುಕೊಂಡರೆ ನೀವು ಪಡೆದುಕೊಂಡ ಬಡ್ಡಿಯಲ್ಲಿ TDS ಕಡಿತ ಮಾಡಲಾಗುತ್ತದೆ. ಅದೇ ರೀತಿಯಲ್ಲಿ ಹಿರಿಯ ನಾಗರಿಕರು FD ಯೋಜನೆಯ ಅಡಿಯಲ್ಲಿ 50 ಸಾವಿರಕ್ಕಿಂತ ಹೆಚ್ಚು ಬಡ್ಡಿ ಪಡೆದುಕೊಂಡರೆ TDS ಕಡ್ಡಾಯವಾಗಿ ಪಾವತಿ ಮಾಡಬೇಕು.

ಇಷ್ಟು FD ಇಟ್ಟರೆ TDS ಕಟ್ಟುವ ಅಗತ್ಯ ಇಲ್ಲ
ಹಿರಿಯ ನಾಗರಿಕರು FD ಮೇಲೆ ಪಡೆದುಕೊಳ್ಳುವ ಬಡ್ಡಿಯ ಮೇಲೆ ಹಾಕಲಾಗುವ TDS ನಲ್ಲಿ ಈಗ ಮಿತಿಯನ್ನು ಜಾರಿಗೆ ತರಲಾಗಿದೆ. ಈ ಹಿಂದೆ 50 ಸಾವಿರ ರೂ ಇದ್ದ TDS ಬಡ್ಡಿ ಮೊತ್ತವನ್ನ ಈಗ ಏರಿಕೆ ಮಾಡಲಾಗಿದೆ. ಹೌದು ಈ ಹಿಂದೆ 50 ಸಾವಿರ ರೂ ಬಡ್ಡಿ ಪಡೆದುಕೊಂಡರೆ TDS ಪಾವತಿ ಮಾಡಬೇಕಾಗಿತ್ತು, ಆದರೆ ಇನ್ನುಮುಂದೆ ವಾರ್ಷಿಕವಾಗಿ 99 ಸಾವಿರದ ತನಕ ಬಡ್ಡಿ ಪಡೆದುಕೊಂಡರೂ ಕೂಡ ಯಾವುದೇ TDS ಕೊಡುವ ಅಗತ್ಯ ಇಲ್ಲ.
ಬಡ್ಡಿ ಮೊತ್ತ 1 ಲಕ್ಷ ಮೀರಿದರೆ ಕಟ್ಟಬೇಕು TDS
ಆದಾಯ ತೆರಿಗೆ ನಿಯಮದ ಪ್ರಕಾರ ಹಿರಿಯ ನಾಗರಿಕರು ಒಂದು ಲಕ್ಷಕ್ಕಿಂದ ಅಧಿಕ ಮೊತ್ತದ ಹಣವನ್ನು FD ಬಡ್ಡಿಯಿಂದ ಪಡೆದುಕೊಂಡರೆ ಅವರು ಕಡ್ಡಾಯವಾಗಿ ತೆರಿಗೆ ಪಾವತಿ ಮಾಡಬೇಕು. ಇನ್ನು ಹಿರಿಯ ನಾಗರಿಕರು ಬ್ಯಾಂಕುಗಳಲ್ಲಿ TDS ಫಾರಂ ಭರ್ತಿ ಮಾಡುವುದರ TDS ಅನ್ನು ಹಿಂಪಡೆಯಬಹುದು.
ನೀವು ಕೂಡ ಆದಾಯ ತೆರಿಗೆ ಪಾವತಿಗೆ ಬರಬಹುದು
ನೀವು ಒಂದು ಲಕ್ಷಕ್ಕಿಂದ ಕಡಿಮೆ ಬಡ್ಡಿ ಪಡೆದುಕೊಂಡು TDS ನಿಂದ ಮುಕ್ತಿ ಪಡೆದುಕೊಂಡರೆ ನೀವು ಆದಾಯ ತೆರಿಗೆಗೆ ಒಳಪಡುವ ಸಾಧ್ಯತೆ ಹೆಚ್ಚಿರುತ್ತದೆ. ಹೌದು ನಿಮ್ಮ ಆದಾಯವು ಆದಾಯ ತೆರಿಗೆಯ ಮಿತಿ ಒಳಗೆ ಬಂದರೆ ನೀವು ಕಡ್ಡಾಯವಾಗಿ ಆದಾಯ ತೆರಿಗೆ ಪಾವತಿ ಮಾಡಬೇಕು. ಇಲ್ಲವಾದರೆ ನೀವು ಆದಾಯ ತೆರಿಗೆಯಿಂದ ನೋಟೀಸ್ ಪಡೆದುಕೊಳ್ಳಬೇಕಾಗುತ್ತದೆ. ನೀವು FD ಯೋಜನೆಯಿಂದ ಪಡೆದುಕೊಂಡ ಬಡ್ಡಿ ಹಣಕ್ಕೆ ಒಮ್ಮೆ TDS ಪಾವತಿ ಮಾಡಿದರೆ ಪ್ರತಿ ವರ್ಷ TDS ಅನ್ನು ಕಡ್ಡಾಯವಾಗಿ ಪಾವತಿ ಮಾಡಬೇಕು.