Kodi Mutt Swamiji Bhavishya: ಕೊಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು (Kodi Matha Sri Shivananda Shivayogi Rajendra Swamiji) ನುಡಿದ ಬಹುತೇಕ ಎಲ್ಲಾ ಭವಿಷ್ಯಗಳು ನಿಜವಾಗಿದೆ ಎಂದು ಹೇಳಬಹುದು. ಕರೋನ ಸೋಂಕು ಆಗಿರಬಹುದು ಅಥವಾ ದೇಶದ ರಾಜಕಾರಣದಲ್ಲಿ ಆಗಿರಬಹುದು, ಜಲಪ್ರಳಯ ಆಗಿರಬಹುದು, ಕೊಡಿ ಶ್ರೀಗಳ ಭವಿಷ್ಯ ಬಹುತೇಕ ನಿಜವಾಗಿದೆ. ಇದರ ನಡುವೆ ರಾಜ್ಯ ರಾಜಕಾರಣದ ಬಗ್ಗೆ ಕೊಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಇನೊಂದು ಭವಿಷ್ಯ ನುಡಿದಿದ್ದು ಸದ್ಯ ಕೊಡಿ ಶ್ರೀಗಳ ಭವಿಷ್ಯ ಸಾಕಷ್ಟು ಚರ್ಚೆಗೆ ಕೂಡ ಕಾರಣವಾಗಿದೆ. ರಾಜ್ಯ ಸರ್ಕಾರದಲ್ಲಿ ಆಗಲಿರುವ ದೊಡ್ಡ ಬದಲಾವಣೆಯ ಬಗ್ಗೆ ಈಗ ಕೊಡಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಸಿದ್ದರಾಮಯ್ಯ CM ಸ್ಥಾನದ ಬಗ್ಗೆ ಭವಿಷ್ಯ ನುಡಿದ ಕೊಡಿ ಶ್ರೀಗಳು
ಹೌದು ಕೊಡಿ ಮಠದ ಸ್ವಾಮಿಗಳು ಗಡಗಡ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಈ ಸಮಯದಲ್ಲಿ ರಾಜ್ಯ ರಾಜಕಾರಣದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ರಾಜ್ಯ ರಾಜಕಾರಣ ಮತ್ತು ಭೂಮಿಗೆ ಮುಂದಿನ ದಿನಗಳಲ್ಲಿ ಇರುವ ಕಂಟಕದ ಬಗ್ಗೆ ಕೊಡಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಇನ್ನು ರಾಜ್ಯ ರಾಜಕೀಯದ ಬಗ್ಗೆ ಮಾತನಾಡಿದ ಕೊಡಿ ಮಠದ ಶ್ರೀಗಳು ವಿಜಯನಗರ ಸಾಮ್ರಾಜ್ಯದ ಉದಾಹರಣೆಯನ್ನ ಕೂಡ ತಗೆದುಕೊಂಡಿದ್ದಾರೆ.
ಹಕ್ಕಾ ಬುಕ್ಕರಿಂದ ಹೇಗೆ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಆಯಿತು ಮತ್ತು ಈಗಲೂ ಏಕೆ ವಿಜಯನಗರ ಸಾಮ್ರಾಜ್ಯ ಅಷ್ಟು ಪ್ರಖ್ಯಾತಿಯಲ್ಲಿ ಇದೆ, ಆ ಸಮಾಜದವರಿಗೆ ಅಧಿಕಾರ ಬಂದರೆ ಅಷ್ಟು ಬೇಗ ಏಕೆ ಕಿತ್ತುಕೊಳ್ಳಲು ಸಾಧ್ಯವಿಲ್ಲ, ಒಳ್ಳೆಯ ಕೆಲಸ ಮಾಡುವವರಿಗೆ ಕೆಟ್ಟ ಮಾತುಗಳು ಬರುವುದು ಸಹಜ ಎಂದು ಹೇಳುವುದರ ಮೂಲಕ ರಾಜ್ಯ ರಾಜಕಾರಣವನ್ನ ಹೊಗಳಿದ್ದಾರೆ ಕೊಡಿ ಮಠದ ಶ್ರೀಗಳು.

ಸಿದ್ದರಾಮಯ್ಯ ಸ್ಥಾನ ಸುಭದ್ರ
ಇನ್ನು ರಾಜ್ಯದಲ್ಲಿ CM ಬದಲಾವಣೆ ಬಗ್ಗೆ ಪರೋಕ್ಷವಾಗಿ ಭವಿಷ್ಯ ನುಡಿದ ಕೊಡಿ ಶ್ರೀಗಳು ರಾಜ್ಯದಲ್ಲಿ ಯಾವುದೇ ಕಾರಣಕ್ಕೂ CM ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ (Siddaramaiah) ಸಾಮ್ರಾಜ್ಯವನ್ನ ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ವಿಜಯನಗರ ಸಾಮ್ರಾಜ್ಯದ ಉದಾಹಹರಣೆ ಕೊಟ್ಟು ಭವಿಷ್ಯ ನುಡಿದಿದ್ದಾರೆ ಕೊಡಿ ಮಠದ ಶ್ರೀಗಳು. ಈ ಮೂಲಕ ಕೊಡಿ ಮಠದ ಸ್ವಾಮಿಗಳು ಸಿದ್ದರಾಮಯ್ಯ ಅವರು 5 ವರ್ಷ ಯಾವುದೇ ಸಮಸ್ಯೆ ಇಲ್ಲದೆ ಅಧಿಕಾರ ಮಾಡಲಿದ್ದಾರೆ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಸಿದ್ದರಾಮಯ್ಯ ಅವರಿಂದ CM ಸ್ಥಾನ ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳುವುದರ ಬಗ್ಗೆ ಸಿದ್ದರಾಮಯ್ಯ ಖುರ್ಚಿ ಭದ್ರವಾಗಿದೆ ಎಂದು ಕೊಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಯುಗಾದಿ ನಂತದ ಆಗಲಿದೆ ಬದಲಾವಣೆ
ರಾಜ್ಯ ರಾಜಕೀಯದಲ್ಲಿ ಏನಾದರು ಬದಲಾವಣೆ ಆಗುತ್ತಾ ಎಂದು ಸ್ವಾಮಿಗಳು ಬಳಿ ಪ್ರಶ್ನೆ ಕೇಳಿದಾಗ ಅವರು ರಾಜ್ಯ ರಾಜಕೀಯದಲ್ಲಿ ಆಗುವ ಬಾದಲಾವಣೆಯ ಬಗ್ಗೆ ಯುಗಾದಿ ನಂತರ ಮತ್ತೆ ಹೇಳುತ್ತೇನೆ ಎಂದು ಹೇಳಿದ್ದಾರೆ. ಸ್ವಾಮಿಗಳ ಹೇಳುವ ಪ್ರಕಾರ ರಾಜ್ಯ ರಾಜಕೀಯದಲ್ಲಿ ಯುಗಾದಿ ನಂತರ ದೊಡ್ಡ ಬದಲಾವಣೆ ಸಾಧ್ಯತೆ ಇದೆ. ಸದ್ಯ ಸ್ವಾಮಿಗಳ ಭವಿಷ್ಯದಿಂದ ಸಿದ್ದರಾಮಯ್ಯ ಅವರ ಖುರ್ಚಿ ಭದ್ರವಾಗಿದೆ ಎಂದು ನಾವು ತಿಳಿಯಬಹುದು. ಕೊಡಿ ಮಠದ ಸ್ವಾಮಿಗಳ ಈ ಭವಿಷ್ಯದ ಬಗ್ಗೆ ನಿಮ್ಮ ಅನಿಸಿಕೆಯನ್ನು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.