TDS On FD Scheme: ತಮ್ಮ ಮುಂದಿನ ಜೀವನದ ಸುರಕ್ಷತೆ ಮತ್ತು ತಮ್ಮ ಹಣ ಸುರಕ್ಷತೆಯಿಂದ ಇರಬೇಕು ಅನ್ನುವ ಉದ್ದೇಶದಿಂದ ಈಗಿನ ಕಾಲದ ಜನರು ಹೆಚ್ಚು ಹೆಚ್ಚು FD ಯೋಜನೆಯಲ್ಲಿ ಹೂಡಿಕೆ ಮಾಡುತ್ತಿರುವುದನ್ನು ನಾವು ನೀವೆಲ್ಲರೂ ಗಮನಿಸಬಹುದು. FD ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ನಮ್ಮ ಹಣ ಸುರಕ್ಷತೆಯಿಂದ ಇರುತ್ತದೆ.
ಸದ್ಯ RBI ಮತ್ತು ಕೇಂದ್ರ ಸರ್ಕಾರ FD ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಹೊಸ ನಿಯಮವನ್ನು ಜಾರಿಗೆ ತಂದಿದೆ. FD ಯೋಜನೆ ತೆರಿಗೆ ನಿಯಮಕ್ಕೂ ಒಳಪಡುತ್ತದೆ ಅನ್ನುವುದನ್ನು ನಾವು ನೀವೆಲ್ಲರೂ ತಿಳಿದುಕೊಂಡಿರಲೇಬೇಕು. ಹಾಗಾದರೆ ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ನಲ್ಲಿ FD ಹಣ ಇಟ್ಟವರು ಎಷ್ಟು ತೆರಿಗೆ ಕಟ್ಟಬೇಕು ಮತ್ತು ತೆರಿಗೆ ನಿಯಮ ಹೇಳುವುದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವೀಗ ತಿಳಿಯೋಣ.
FD ಯೋಜನೆಯ ಮೇಲೆ ಕಟ್ಟಬೇಕು TDS
ಸಾಮಾನ್ಯವಾಗಿ FD ಯೋಜನೆಯಲ್ಲಿ ಹೂಡಿಕೆ ಮಾಡಿದ ಪ್ರತಿಯೊಬ್ಬರೂ ಕೂಡ TDS ಅನ್ನು ಕಡ್ಡಾಯವಾಗಿ ಕಟ್ಟಲೇಬೇಕು. ಹೌದು FD ಯೋಜನೆ TDS ಅಡಿಯಲ್ಲಿ ಬರುತ್ತದೆ. ಅಷ್ಟೇ ಮಾತ್ರವಲ್ಲದೆ FD ಯೋಜನೆಯಲ್ಲಿ ಹೂಡಿಕೆ ಮಾಡುವವರು ಕೆಲವು ಸಂದರ್ಭದಲ್ಲಿ ಆದಾಯ ತೆರಿಗೆ ಕೂಡ ಪಾವತಿ ಮಾಡಬೇಕಾಗುತ್ತದೆ. ಹೌದು FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿದ ಹಣಕ್ಕೆ ಶೇಕಡಾ 7-8 ರಷ್ಟು ಬಡ್ಡಿ ನೀಡಲಾಗುತ್ತದೆ. ಅದೇ ರೀತಿಯಲ್ಲಿ ನೀವು ಪಡೆದುಕೊಂಡ ಬಡ್ಡಿಯ ಆಧಾರದ ಮೇಲೆ TDS ಅನ್ನು ಕೂಡ ಕಟ್ ಮಾಡಲಾಗುತ್ತದೆ. ಈಗಾಗಲೇ ಬ್ಯಾಂಕಿನಲ್ಲಿ FD ಇಟ್ಟವರು ಇಷ್ಟು ಟ್ಯಾಕ್ಸ್ ಕೊಡಲೇಬೇಕು ಎಂದು ನಿರ್ಮಲ ಸೀತಾರಾಮನ್ ಅವರು ಈ ಹಿಂದೆ ಸಚಿನ ಸಂಪೂರ್ಣ ಸಭೆಯಲ್ಲಿ ಘೋಷಣೆ ಕೂಡ ಮಾಡಿದ್ದರು.

TDS ಹೇಗೆ ಲೆಕ್ಕಾಚಾರ ಹಾಕಲಾಗುತ್ತದೆ
ಸಾಮಾನ್ಯವಾಗಿ FD ಯೋಜನೆಯಲ್ಲಿ ಅಧಿಕ ವರ್ಷಗಳಿಗೆ ಇಡಲಾಗುತ್ತದೆ. ಅದೇ ರೀತಿಯಲ್ಲಿ ಯಾವುದಾದರೂ ಒಬ್ಬ ವ್ಯಕ್ತಿ FD ಯೋಜನೆಯ ಅಡಿಯಲ್ಲಿ 40 ಸಾವಿರಕ್ಕಿಂದ ಅಧಿಕ ಬಡ್ಡಿಯನ್ನು ಪಡೆದುಕೊಂಡರೆ ಆತ ಪಡೆದುಕೊಂಡ ಬಡ್ಡಿಯ ಹಣಕ್ಕೆ ಕಡ್ಡಾಯವಾಗಿ ತೆರಿಗೆ ಪಾವತಿ ಮಾಡಲೇಬೇಕು. ಅದೇ ರೀತಿಯಲ್ಲಿ ಹಿರಿಯ ನಾಗರಿಕರು FD ಯೋಜನೆಯ ಅಡಿಯಲ್ಲಿ 50 ಸಾವಿರ ರೂಪಾಯಿಗಿಂತ ಅಧಿಕ ಬಡ್ಡಿ ಪಡೆದುಕೊಂಡರೆ ಅವರು ಕೂಡ TDS ಪಾವತಿ ಮಾಡಬೇಕು.
ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡಿದ್ರು ಕಟ್ಟಬೇಕು ತೆರಿಗೆ
FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಕಡಿಮೆ ಬಡ್ಡಿ ಸಿಗುತ್ತೆ ಮತ್ತು TDS ಕಡಿತ ಮಾಡುತ್ತಾರೆ ಅನ್ನುವ ಕಾರಣಕ್ಕೆ ಸಾಕಷ್ಟು ಜನರು ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವುದನ್ನು ನಾವು ಗಮನಿಸಬಹುದು, ಆದರೆ ಈಗ ತೆರಿಗೆ ಇಲಾಖೆ ಹೊಸ ನಿಯಮ ಜಾರಿಗೆ ತಂದಿದೆ ಮತ್ತು ಮ್ಯೂಚುಯಲ್ ಫಂಡ್ ನಲ್ಲಿ ಅಧಿಕ ಲಾಭವನ್ನು ಪಡೆದುಕೊಂಡರೆ ಅವರು ಕೂಡ ಆದಾಯ ತೆರಿಗೆ ನಿಯಮದ ಅಡಿಯಲ್ಲಿ ತೆರಿಗೆಯನ್ನು ಕಡ್ಡಾಯವಾಗಿ ಪಾವತಿ ಮಾಡಲೇಬೇಕು.
ಬದಲಾದ ಆದಾಯ ತೆರಿಗೆ ನಿಯಮ
ಈ ಹಿಂದೆ FD ಯೋಜನೆ ಮತ್ತು ಮ್ಯೂಚುಯಲ್ ಫಂಡ್ ಯೋಜನೆಗಳಿಗೆ ಯಾವುದೇ ರೀತಿಯ TDS ಇರಲಿಲ್ಲ, ಆದರೆ ಈಗ ನಿಯಮವನ್ನು ಬದಲಾವಣೆ ಮಾಡಲಾಗಿದ್ದು ಬಹುತೇಕ ಎಲ್ಲಾ ಯೋಜನೆಗಳು TDS ನಿಯಮದ ಅಡಿಯಲ್ಲಿ ಬರುತ್ತದೆ ಎಂದು ಹೇಳಬಹುದು. ಈ ಮೂಲಕ ಆದಾಯ ತೆರಿಗೆ ಇಲಾಖೆ ತನ್ನ ಆದಾಯವನ್ನು ಹೆಚ್ಚಿಸಿಕೊಂಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೆಚ್ಚು ಬಡ್ಡಿ ಪಡೆದುಕೊಳ್ಳುವ ಬಹುತೇಕ ಎಲ್ಲಾ ಯೋಜನೆಗಳು ಈ ಆದಾಯ ತೆರಿಗೆ ನಿಯಮದ ಅಡಿಯಲ್ಲಿ ಬರುತ್ತದೆ ಎಂದು ಹೇಳಬಹುದು. ಬದಲಾದ ಆದಾಯ ತೆರಿಗೆ ನಿಯಮಗಳ ಬಗ್ಗೆ ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.