CNG vs Hybrid Vs Electric Cars: ಸಾಮಾನ್ಯವಾಗಿ ಕಾರ್ ಖರೀದಿ (Car Purchase) ಮಾಡುವ ಆಸೆ ಎಲ್ಲರಿಗೂ ಇದ್ದೆ ಇರುತ್ತದೆ. ಅದೇ ರೀತಿಯಲ್ಲಿ ಹಲವು ಕಾರ್ ಕಂಪನಿಗಳು (Car Companies) ಹಲವು ಬಗೆಯ ಕಾರುಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡುವಲ್ಲಿ ಯಶಸ್ವಿಯಾಗಿದೆ. ಇನ್ನು ಇದರ ನಡುವೆ ಜನರಿಗೆ ಯಾವ ಕಾರ್ ಖರೀದಿ ಮಾಡಬೇಕು ಅನ್ನುವ ಗೊಂದಲ ಕೂಡ ಉಂಟಾಗುತ್ತಿದೆ. ಹೌದು ದೇಶದಲ್ಲಿ ಹಲವು ಬಗೆಯ ಎಲೆಕ್ಟ್ರಿಕ್ ಕಾರುಗಳು, ಹೈಬ್ರಿಡ್ ಕಾರುಗಳು ಮತ್ತು CNG ಕಾರುಗಳು ಚಾಲ್ತಿಯಲ್ಲಿ ಇದ್ದು ಯಾವ ಕಾರ್ ಖರೀದಿ ಮಾಡಬೇಕು ಅನ್ನುವ ಗೊಂದಲಕ್ಕೆ ಈಗ ಜನರು ಒಳಗಾಗುತ್ತಿದ್ದಾರೆ. ಹಾಗಾದರೆ CNG, ಎಲೆಕ್ಟ್ರಿಕ್ ಅಥವಾ ಹೈಬ್ರಿಡ್ ಕಾರುಗಳಲ್ಲಿ (Hybrid Cars) ಯಾವ ಕಾರ್ ಬೆಸ್ಟ್ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈಗ ನಿಮಗೆ ತಿಳಿಯೋಣ.
CNG ಕಾರ್ ಖರೀದಿಸಿದರೆ ಆಗುವ ಲಾಭ ಮತ್ತು ನಷ್ಟ
ಸಾಮಾನ್ಯವಾಗಿ ಜನರು CNG ಕಾರ್ ಹೆಚ್ಚು ಮೈಲೇಜ್ ಕೊಡುತ್ತದೆ ಅನ್ನುವ ಕಾರಣಕ್ಕೆ ಖರೀದಿ ಮಾಡುತ್ತಾರೆ. ಯಾವುದೇ ಒಂದು ಕಾರ್ ಖರೀದಿ ಮಾಡುವ ಮುನ್ನ ಆ ಕಾರಿನ ಲಾಭ ಮತ್ತು ನಷ್ಟವನ್ನು ತಿಳಿದುಕೊಳ್ಳುವುದು ಅತೀ ಅಗತ್ಯವಾಗಿದೆ.

CNG ಕಾರಿನ ಲಾಭ
* CNG ಬೆಲೆ ಕಡಿಮೆ ಇರುವ ಕಾರಣ ನೀವು CNG ಕಾರ್ ಖರೀದಿಸಿದರೆ ಹಣ ಉಳಿಸಬಹುದು. ಅದೇ ರೀತಿಯಲ್ಲಿ CNG ಕಾರ್ ಖರೀದಿ ಮಾಡಿದರೆ ಹೆಚ್ಚು ಮೈಲೇಜ್ ಸಿಗುತ್ತದೆ.
* ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳು ಪರಿಸರಕ್ಕೆ ಸಾಕಷ್ಟು ಮಾಲಿನ್ಯ ಉಂಟುಮಾಡುತ್ತದೆ, ಆದರೆ CNG ವಾಹನಗಳು ಪರಿಸರಕ್ಕೆ ಮಾಲಿನ್ಯ ಉಂಟುಮಾಡುವುದಿಲ್ಲ.
* ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಹೋಲಿಕೆ ಮಾಡಿದರೆ ನೀವು CNG ವಾಹನಗಳಲ್ಲಿ ಹೆಚ್ಚು ಮೈಲೇಜ್ ಕಾಣಬಹುದು.
CNG ವಾಹನಗಳ ನಷ್ಟ
* ಪೆಟ್ರೋಲ್ ಮತ್ತು ಡೀಸೆಲ್ ಎಲ್ಲಾ ನಗರಗಳಲ್ಲಿ ಸಿಗುತ್ತದೆ, ಆದರೆ CNG ನಿಮಗೆ ಎಲ್ಲಾ ಕಡೆಗಳಲ್ಲಿ ಲಭ್ಯವಿಲ್ಲ. CNG ಹಲವು ಪ್ರದೇಶದಲ್ಲಿ ಲಭ್ಯವಾಗಿಲ್ಲದ ಕಾರಣ ನೀವು ಸಮಸ್ಯೆ ಎದುರಿಸಬೇಕಾಗುತ್ತದೆ.
* CNG ಟ್ಯಾಂಕ್ ತುಂಬಲು ತುಂಬಾ ಸಮಯ ತಗೆದುಕೊಳ್ಳುತ್ತದೆ. ಅಷ್ಟೇ ಮಾತ್ರವಲ್ಲದೆ CNG ತುಂಬುವ ಸಮಯದಲ್ಲಿ ಕಾರಿನಲ್ಲಿ ಇದ್ದವರು ಕಾರಿನ ಹೊರಗೆ ಬರುವುದು ಕಡ್ಡಾಯವಾಗಿದೆ. ಈ ಕಾರಣಗಳಿಂದ ಪ್ರಯಾಣಿಕರಿಗೆ ಕೊಂಚ ಸಮಸ್ಯೆ ಉಂಟಾಗಬಹುದು.

ಹೈಬ್ರಿಡ್ ಕಾರುಗಳ ಲಾಭ ಮತ್ತು ನಷ್ಟ
ಹೈಬ್ರಿಡ್ ಕಾರುಗಳಲ್ಲಿ ಹೆಚ್ಚಿನ ವಿಶೇಷತೆ ಮತ್ತು ಲುಕ್ ಚನ್ನಾಗಿ ಇರುತ್ತದೆ ಅನ್ನುವ ಕಾರಣಕ್ಕೆ ಹೆಚ್ಚಿನ ಜನರು ಹೈಬ್ರಿಡ್ ಕಾರುಗಳನ್ನ ಈಗಿನ ಕಾಲದಲ್ಲಿ ಖರೀದಿ ಮಾಡುವುದನ್ನ ನಾವು ನೀವೆಲ್ಲ ಗಮನಿಸಬಹುದು. ಆದೆ ಹೈಬ್ರಿಡ್ ಕಾರುಗಳನ್ನ ಖರೀದಿ ಮಾಡುವ ಸಮಯದಲ್ಲಿ ಕೂಡ ಅದರ ಲಾಭ ನಷ್ಟ ತಿಳಿದುಕೊಳ್ಳುವುದು ಅತೀ ಉತ್ತಮವಾಗಿದೆ.
ಹೈಬ್ರಿಡ್ ಕಾರುಗಳ ಲಾಭ
* ಇತರೆ ಕಾರುಗಳಿಗೆ ಹೋಲಿಕೆ ಮಾಡಿದರೆ ಹೈಬ್ರಿಡ್ ಮಾದರಿಯ ಕಾರುಗಳು ನೋಡಲು ಚನ್ನಾಗಿರುತ್ತದೆ ಮತ್ತು ಮೈಲೇಜ್ ಕೊಡುವ ಸ್ವಲ್ಪ ಹೆಚ್ಚಾಗಿರುತ್ತದೆ.
* ಇನ್ನು ಹೈಬ್ರಿಡ್ ಕಾರುಗಳು ಕಡಿಮೆ ಪ್ರಮಾಣದ CO2 ಅನ್ನು ಹೊರಹಾಕುವ ಕಾರಣ ಮಾಲಿನ್ಯ ಕೂಡ ಕಡಿಮೆ.
* ನೀವು ದೂರದ ಪ್ರಯಾಣ ಮಾಡಲು ಪೆಟ್ರೋಲ್ ಬಳಸಬಹುದು, ಕಡಿಮೆ ದೂರ ಪ್ರಯಾಣ ಮಾಡುವ ಸಮಯದಲ್ಲಿ ವಿದ್ಯುತ್ ಮೋಟಾರ್ ಬಳಸುವ ಆಯ್ಕೆ ಇದರಲ್ಲಿ ಇದೆ.
ಹೈಬ್ರಿಡ್ ಕಾರಿನ ನಷ್ಟ
* ಇತರೆ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಹೋಲಿಕೆ ಮಾಡಿದರೆ ಹೈಬ್ರಿಡ್ ಕಾರುಗಳ ಬೆಲೆ ಜಾಸ್ತಿ.
* ಈ ಕಾರುಗಳು ವಿದ್ಯುತ್ ಮತ್ತು ಪೆಟ್ರೋಲ್ ಎರಡು ಹೊಂದಿರುವ ಕಾರಣ ಈ ಕಾರಿನ ನಿರ್ವಹಣೆ ಕೂಡ ತುಂಬಾ ದುಬಾರಿಯಾಗಿದೆ ಎಂದು ಹೇಳಬಹುದು.

ಎಲೆಕ್ಟ್ರಿಕ್ ಕಾರುಗಳ ಲಾಭ ಮತ್ತು ನಷ್ಟ
ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳು ಹೆಚ್ಚಿನ ಮೈಲೇಜ್ ನೀಡುವುದಿಲ್ಲ ಮತ್ತು ಆರ್ಥಿಕವಾಗಿ ನಷ್ಟ ಉಂಟಾಗುತ್ತದೆ ಅನ್ನುವ ಕಾರಣಕ್ಕೆ ಸಾಕಷ್ಟು ಜನರು ಈಗ ಎಲೆಕ್ಟ್ರಿಕ್ ಕಾರ್ ಖರೀದಿ ಮಾಡುವುದನ್ನು ನಾವು ನೋಡಬಹುದು. ಆದರೆ ಎಲೆಕ್ಟ್ರಿಕ್ ಕಾರ್ ಖರೀದಿ ಮಾಡುವ ಮುನ್ನ ಅದರ ಲಾಭ ನಷ್ಟ ತಿಳಿದುಕೊಳ್ಳಬೇಕು.
ಎಲೆಕ್ಟ್ರಿಕ್ ಕಾರಿನ ಲಾಭ
* ಎಲೆಕ್ಟ್ರಿಕ್ ಕಾರುಗಳು ಪರಿಸರ ಮಾಲಿನ್ಯ ಮಾಡದ ಕಾರಣ ಈ ಕಾರುಗಳು ಪರಿಸರಕ್ಕೆ ಬಹಳ ಉತ್ತಮವಾಗಿದೆ.
* ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಗೆ ಹೋಲಿಕೆ ಮಾಡಿದರೆ ಇದರ ಬ್ಯಾಟರಿ ಚಾರ್ಜ್ ಮಾಡುವ ವೆಚ್ಚ ಬಹಳ ಕಡಿಮೆ.
* ಎಲೆಕ್ಟ್ರಿಕ್ ವಾಹಗಳಿಗೆ ಸರ್ಕಾರ ಸಬ್ಸಿಡಿ ನೀಡುವ ಕಾರಣ ನಮಗೆ ಆರ್ಥಿಕವಾಗಿ ಈ ಕಾರುಗಳು ಹೊರೆಯಾಗುವುದಿಲ್ಲ.
ಎಲೆಕ್ಟ್ರಿಕ್ ಕಾರುಗಳ ನಷ್ಟ
* ಎಲೆಕ್ಟ್ರಿಕ್ ಕಾರುಗಳ ಚಾರ್ಜಿಂಗ್ ಪಾಯಿಂಟ್ ಗಳು ಬಹಳ ಕಡಿಮೆ ಇರುವ ಕಾರಣ ಈ ಕಾರುಗಳು ದೂರ ಪ್ರಯಾಣಕ್ಕೆ ಸೂಕ್ತವಲ್ಲ.
* ಎಲೆಕ್ಟ್ರಿಕ್ ಕಾರುಗಳ ಬ್ಯಾಟರಿ ಚಾರ್ಜ್ ಆಗಲು ಸಾಕಷ್ಟು ಸಮಯ ತಗೆದುಕೊಳ್ಳುತ್ತದೆ.
* ಕಾಲ ಕಳೆದಂತೆ ಬ್ಯಾಟರಿ ಸಾಮರ್ಥ್ಯ ಕಡಿಮೆ ಆಗುತ್ತದೆ ಮತ್ತು ಹೊಸ ಬ್ಯಾಟರಿ ಹಾಕಲು ಸಾಕಷ್ಟು ವೆಚ್ಚ ಕೂಡ ಆಗುತ್ತೆ.