Dhoota : Sameer MD Youtube Video: ಈಗಿನ ಕಾಲದಲ್ಲಿ ಒಬ್ಬ ವ್ಯಕ್ತಿ ಫೇಮಸ್ ಆಗಬೇಕು ಅಂದರೆ ವರ್ಷಗಳ ಕಾಲ ಕಾಯಬೇಕು ಅಂತ ಇಲ್ಲ. ಹೌದು ಸಾಮಾಜಿಕ ಜಾಲತಾಣ ಬಹಳ ಮುಂದುವರೆದಿದ್ದು, ಕೆಲವೇ ದಿನದಲ್ಲಿ ಮತ್ತು ಕೆಲವೇ ಕ್ಷಣದಲ್ಲಿ ಅದೆಷ್ಟೋ ಜನರು ಫೇಮಸ್ ಆಗಿರುವುದನ್ನು ನಾವು ನೀವೆಲ್ಲ ನೋಡಿದ್ದೇವೆ. ಸದ್ಯ Youtube ಒಂದು ವಿಡಿಯೋ ಬಹಳ ವೈರಲ್ ಆಗಿದ್ದು ನಾಲ್ಕು ದಿನದಲ್ಲಿ 35 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಹೌದು Dhoota : Sameer MD ಅನ್ನುವ ವ್ಯಕ್ತಿಯ ಒಂದು ವಿಡಿಯೋ Youtube ಸಕತ್ ಟ್ರೆಂಡಿಂಗ್ ಆಗಿದೆ ಎಂದು ಹೇಳಬಹುದು. ಧರ್ಮಸ್ಥಳ ಸೌಜನ್ಯ (Soujanya Dharmasthala) ಸಾವಿನ ಬಗ್ಗೆ ಈತ ಒಂದು ವಿಡಿಯೋ ಹಾಕಿದ್ದು ಸದ್ಯ ಈ ವಿಡಿಯೋ youtube ಒಂದೇ ದಿನದಲ್ಲಿ 35 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.

ಒಂದೇ ದಿನದಲ್ಲಿ ಫೇಮಸ್ ಆದ Dhoota : Sameer MD Youtuber
ತನ್ನ youtube ಚಾನೆಲ್ ಕೇವಲ 12 ವಿಡಿಯೋ ಶೇರ್ ಮಾಡಿರುವ ಈ Dhoota : Sameer MD ನಾಲ್ಕು ದಿನದ ಸೌಜನ್ಯ ಸಾವು ಹೇಗಾಯಿತು ಮತ್ತು ಅಲ್ಲಿ ನಡೆದ ಕೆಲವು ರಹಸ್ಯಗಳನ್ನ ಬಿಚ್ಚಿಡುವ ಕೆಲಸವನ್ನು ಮಾಡಿದ್ದಾರೆ. 39 ನಿಮಿಷಗಳ ಕಾಲ ಈ ವಿಡಿಯೋ ಸದ್ಯ youtube ನಲ್ಲಿ 35 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಇನ್ನು ಈ ವಿಡಿಯೋ ನೋಡಿ ಎಲ್ಲ ಜನರು ಈತನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೌದು ಸೌಜನ್ಯ ಸಾವಿನ ಬಗ್ಗೆ ವಿಡಿಯೋ ಮಾಡಲು ಸಾಕಷ್ಟು ಜನರು ಹಿಂಜರಿಯುತ್ತಾರೆ, ಆದರೆ ಈತ ಯಾವುದೇ ಭಯ ಇಲ್ಲದೆ 39 ನಿಮಿಷಗಳ ವಿಡಿಯೋ ಶೇರ್ ಮಾಡಿದ್ದು ಸದ್ಯ ಈ ವಿಡಿಯೋ ನೋಡಿದ ಜನರು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ.
ಒಂದೇ ದಿನದಲ್ಲಿ 2 ಲಕ್ಷ Subscriber
Dhoota : Sameer MD youtube ನಲ್ಲಿ ಶೇರ್ ಮಾಡಿರುವ ವಿಡಿಯೋ 35 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನ ಕಾಣುವುದರ ಮೂಲಕ youtube ನಲ್ಲಿ ಟ್ರೆಂಡಿಂಗ್ ಸ್ಥಾನದಲ್ಲಿ ಇದೆ. ಇನ್ನು Dhoota : Sameer MD ವಿಡಿಯೋ ಶೇರ್ ಮಾಡುವ ಮುನ್ನ ಈತನ youtube ಹಿಂಬಾಲಕರ ಸಂಖ್ಯೆ 87 ಸಾವಿರ ಆಗಿತ್ತು, ಆದರೆ ಈಗ ಈತನ youtube ಹಿಂಬಾಲಕರ ಸಂಖ್ಯೆ 2.7 ಲಕ್ಷ ಆಗಿದೆ. ಕೆಲವ ಒಂದೇ ವಿಡಿಯೋ ಶೇರ್ ಮಾಡುವುದರ ಮೂಲಕ ಈತ youtube ನಲ್ಲಿ ದೊಡ್ಡ ದಾಖಲೆ ಮಾಡಿದ್ದಾನೆ ಎಂದು ಹೇಳಬಹುದು.
ಕೆಂಗಣ್ಣಿಗೆ ಕಾರಣವಾದ Dhoota : Sameer MD
ಸದ್ಯ ಈ ವಿಡಿಯೋ youtube ನಲ್ಲಿ ಟ್ರೆಂಡಿಂಗ್ ಆಗಿದ್ದೆ ತಡ ಸಾಕಷ್ಟು ಜನರು ಈತನ ಬಗ್ಗೆ ಕೆಟ್ಟದಾಗಿ ಕೂಡ ಕಾಮೆಂಟ್ ಮಾಡಲು ಆರಂಭ ಮಾಡಿದ್ದಾರೆ. ಕೆಟ್ಟದಾಗಿ ಕಾಮೆಂಟ್ ಮಾಡಿದವರಿಗಿಂತ ಈತನ ವಿಡಿಯೋ ಕಂಡು ಮೆಚ್ಚುಗೆ ವ್ಯಕತಪಡಿಸಿದವರೇ ಜಾಸ್ತಿ. ಇನ್ನು Dhoota : Sameer MD ಶೇರ್ ಮಾಡಿದ ವಿಡಿಯೋಗೆ ಸುಮಾರು 19 ಸಾವಿರಕ್ಕೂ ಅಧಿಕ ಕಮೆಂಟ್ ಬಂದಿದೆ ಮತ್ತು 4.22 ಲಕ್ಷ ಜನರು ಲೈಕ್ ಕೂಡ ಮಾಡಿದ್ದಾರೆ. ಕನ್ನಡದಲ್ಲಿ youtube ನಲ್ಲಿ ಒಂದೇ ವಿಡಿಯೋ ಮೂಲಕ ಅತೀ ಹೆಚ್ಚು ಹಿಂಬಾಲಕರನ್ನು ಗಳಿಸಿಕೊಂಡ Youtuber ಅನ್ನುವ ಬಿರುದನ್ನೂ ಈತ ಪಡೆದುಕೊಂಡಿದ್ದಾನೆ ಎಂದು ಹೇಳಬಹುದು.