Today Gold Price: ಚಿನ್ನ (Gold) ಖರೀದಿ ಮಾಡಬೇಕು ಅಂದುಕೊಂಡವರಿಗೆ ಮಾರ್ಚ್ ತಿಂಗಳ ಮೊದಲ ವಾರದಲ್ಲೇ ಬೇಸರದ ಸುದ್ದಿ ಬಂದಿದೆ. ಹೌದು ದೇಶದಲ್ಲಿ ಚಿನ್ನದ ಬೆಲೆ (Gold Price) ಮತ್ತೆ ಏರಿಕೆ ಆಗಿದ್ದು ಇದು ಗ್ರಾಹಕರ ಬೇಸರಕ್ಕೆ ಕಾರಣವಾಗಿದೆ, ಮಾರ್ಚ್ ತಿಂಗಳ ಮೊದಲ ಎರಡು ದಿನ ಸ್ಥಿರತೆ ಕಾಯ್ದುಕೊಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಏರಿಕೆ ಕಂಡಿದ್ದು ದೇಶದಲ್ಲಿ ಚಿನ್ನ ಪ್ರಿಯರ ಬೇಸರಕ್ಕೆ ಕಾರಣವಾಗಿದೆ. ಹಾಗಾದರೆ ದೇಶದಲ್ಲಿ ಇಂದು ಚಿನ್ನದ ಬೆಲೆ ಎಷ್ಟು ಏರಿಕೆ ಆಗಿದೆ ಮತ್ತು ಇಂದಿನಿಂದ ಚಿನ್ನದ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಆಹಿತಿಯನ್ನು ನಾವೀಗ ತಿಳಿಯೋಣ.
ಏರಿಕೆಯಾದ 22 ಕ್ಯಾರಟ್ ಚಿನ್ನದ ಬೆಲೆ
ದೇಶದಲ್ಲಿ ಆಭರಣ ಚಿನ್ನದ ಬೆಲೆ ಮತ್ತೆ ಏರಿಕೆ ಆಗಿದೆ. ಹೌದು ಇಂದು ಚಿನ್ನ ಮಾರುಕಟ್ಟೆಯಲ್ಲಿ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಸುಮಾರು 70 ರೂಪಾಯಿ ಏರಿಕೆ ಕಂಡುಬಂದಿದೆ. ನಿನ್ನೆ 7,940 ರೂಪಾಯಿ ಇದ್ದ 22 ಕ್ಯಾರಟ್ ನ ಚಿನ್ನದ ಬೆಲೆಯಲ್ಲಿ ಇಂದು 70 ರೂ ಏರಿಕೆ ಕಂಡುಬಂದಿದ್ದು ಇಂದು ಚಿನ್ನ ಮಾರುಕಟ್ಟೆಯಲ್ಲಿ 22 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ 8,010 ರೂಪಾಯಿ ಆಗಿದೆ. ಇಂದು 22 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 80,100 ರೂಪಾಯಿ ಆಗಿದೆ ಬೆಲೆಯಲ್ಲಿ 8,100 ರೂಪಾಯಿ ಏರಿಕೆ ಕಂಡುಬಂದಿದೆ ಮತ್ತು 8 ಗ್ರಾಂ ಚಿನ್ನದ ಬೆಲೆ 64,080 ರೂಪಾಯಿ ಆಗಿದೆ. ಅದೇ ರೀತಿಯಲ್ಲಿ ಇಂದು 22 ಕ್ಯಾರಟ್ ನ 100 ಚಿನ್ನದ ಬೆಲೆಯಲ್ಲಿ ಸುಮಾರು 7,000 ರೂ ಏರಿಕೆ ಕಂಡುಬಂದಿದ್ದು 22 ಕ್ಯಾರಟ್ ನ 100 ಗ್ರಾಂ ಚಿನ್ನದ ಬೆಲೆ ಇಂದು 8,01,000 ರೂಪಾಯಿ ಆಗಿದೆ.

ಏರಿಕೆಯಾದ 24 ಕ್ಯಾರಟ್ ಚಿನ್ನದ ಬೆಲೆ
ದೇಶದ ಇಂದು 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಕೂಡ ಗಣನೀಯ ಏರಿಕೆ ಕಂಡುಬಂದಿದೆ. ಹೌದು ಇಂದು 24 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 76 ರೂಪಾಯಿ ಏರಿಕೆ ಆಗಿದೆ. ನಿನ್ನೆ 8,662 ರೂಪಾಯಿ ಇದ್ದ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಇಂದು 76 ರೂಪಾಯಿ ಏರಿಕೆ ಕಂಡುಬಂದಿದ್ದು ಇಂದು ಮಾರುಕಟ್ಟೆಯಲ್ಲಿ 24 ಕ್ಯಾರಟ್ ನ ಒಂದು ಗ್ರಾಂ ಚಿನ್ನದ 8,738 ರೂಪಾಯಿ ಆಗಿದೆ. ಅದೇ ರೀತಿಯಲ್ಲಿ 24 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 760 ರೂಪಾಯಿ ಏರಿಕೆ ಕಂಡುಬಂದ ಕಾರಣ ಇಂದು ಮಾರುಕಟ್ಟೆಯಲ್ಲಿ 24 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 87,380 ರೂಪಾಯಿ ಆಗಿದೆ. 24 ಕ್ಯಾರಟ್ ನ 100 ಗ್ರಾಂ ಚಿನ್ನದ ಬೆಲೆ 8,73,800 ರೂಪಾಯಿ ಆಗಿರುತ್ತದೆ.
ಮಾರ್ಚ್ ಅಂತ್ಯದಲ್ಲಿ 8,500 ರೂಪಾಯಿಗೆ ತಲುಪಲಿದೆ ಆಭರಣ ಚಿನ್ನದ ಬೆಲೆ
ಹೌದು, ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಮಾರ್ಚ್ ತಿಂಗಳ ಅಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ ಇನ್ನಷ್ಟು ಏರಿಕೆ ಕಂಡುಬರಲಿದೆ ಮತ್ತು ಮಾರ್ಚ್ ತಿಂಗಳ ಅಂತ್ಯದಲ್ಲಿ ಆಭರಣ ಚಿನ್ನದ ಬೆಲೆ, ಅಂದರೆ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಇನ್ನಷ್ಟು ಏರಿಕೆ ಕಂಡುಬರಲಿದ್ದು ಬೆಲೆ ಸುಮಾರು 8,500 ರೂಪಾಯಿಗೆ ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಏನೇ ಆಗಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು ಇದು ಬಡಜನರ ಮತ್ತು ಮಧ್ಯಮ ವರ್ಗದ ಜನರ ಬೇಸರಕ್ಕೆ ಕಾರಣವಾಗಿದೆ.