Senior Citizen Concession: ಈಗಿನ ಕಾಲದಲ್ಲಿ ಬಸ್, ಕಾರ್ ಮತ್ತು ಇತರೆ ವಾಹನಗಳಿಗೆ ಹೋಲಿಕೆ ಮಾಡಿದರೆ ರೈಲಿನಲ್ಲಿ ಪ್ರಯಾಣ (Rail Travel) ಮಾಡುವವರ ಸಂಖ್ಯೆ ಕೊಂಚ ಜಾಸ್ತಿ ಎಂದು ಹೇಳಬಹುದು. ಹೌದು ರೈಲಿನಲ್ಲಿ ಆರಾಮದಾಯಕವಾಗಿ ಮತ್ತು ಸುಖಕರವಾಗಿ ಪ್ರಯಾಣ ಮಾಡಬಹುದು ಅನ್ನುವ ಕಾರಣಕ್ಕೆ ಸಾಕಷ್ಟು ಜನರು ರೈಲು ಪ್ರಯಾಣವನ್ನು ಇಷ್ಟಪಡುತ್ತಾರೆ. ಇದರ ನಡುವೆ ರೈಲು ಪ್ರಯಾಣ ಮಾಡುವವರಿಗೆ ಭಾರತೀಯ ರೈಲ್ವೆ (Indian Railways) ಈಗಾಗಲೇ ಹಲವು ಸೇವೆಯನ್ನು ಪರಿಚಯಿಸಿದೆ. ಇದರ ನಡುವೆ ಭಾರತೀಯ ರೈಲ್ವೆ ರೈಲಿನಲ್ಲಿ ಪ್ರಯಾಣ ಮಾಡುವ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ನೀಡಿದೆ.
ರೈಲಿನಲ್ಲಿ ಪ್ರಯಾಣ ಮಾಡುವ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್
ಹೌದು ಭಾರತೀಯ ರೈಲ್ವೆ ಈಗಾಗಲೇ ರೈಲಿನಲ್ಲಿ ಪ್ರಯಾಣ ಮಾಡುವ ಹಿರಿಯ ನಾಗರೀಕರಿಗಾಗಿ ಹಲವು ಹೊಸ ಯೋಜನೆ ಜಾರಿಗೆ ತಂದಿದೆ. ಇದರ ನಡುವೆ ಈಗ ಮತ್ತೆ ರೈಲಿನಲ್ಲಿ ಪ್ರಯಾಣ ಮಾಡುವ 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಹಿರಿಯ ಮತ್ತೆ ಗುಡ್ ನ್ಯೂಸ್ ನೀಡಿದೆ. ಹೌದು ರೈಲಿನಲ್ಲಿ ಪ್ರಯಾಣ ಮಾಡುವ ಹಿರಿಯ ನಾಗರಿಕರಿಗೆ ಈಗ ರಿಯಾಯಿತಿ ದರದಲ್ಲಿ ಟಿಕೆಟ್ ನೀಡಲು ಭಾರತೀಯ ರೈಲ್ವೆ ಮುಂದಾಗಿದೆ.
ಹಿರಿಯ ನಾಗರಿಕರಿಗೆ ಟಿಕೆಟ್ ದರದಲ್ಲಿ ರಿಯಾಯಿತಿ

ಈ ಹಿಂದೆ ರೈಲ್ವೆ ಪ್ರಯಾಣಿಕರಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ಘೋಷಣೆ ಮಾಡಿ ಅದನ್ನ ಅರ್ಧಕ್ಕೆ ನಿಲ್ಲಿಸಲಾಗಿತ್ತು, ಆದರೆ ಈಗ ಮತ್ತೆ ರೈಲ್ವೆ ಪ್ರಯಾಣಿಕರಿಗೆ ರಿಯಾಯಿತಿ ನೀಡಲು ಭಾರತೀಯ ರೈಲ್ವೆ ಮುಂದಾಗಿದೆ. ಕರೋನ ಸೋಂಕು ಕಾಣಿಸಿಕೊಂಡ ಸಮಯದಲ್ಲಿ ರೈಲಿನಲ್ಲಿ ಪ್ರಯಾಣ ಮಾಡುವ ಹಿರಿಯ ನಾಗರಿಕರಿಗೆ ಟಿಕೆಟ್ ದರದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ಘೋಷಣೆ ಮಾಡಲಾಗಿತ್ತು. ಈಗ ಮತ್ತೆ ಭಾರತೀಯ ರೈಲ್ವೆ ಹಿರಿಯ ನಾಗರಿಕರಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ನೀಡಲು ಮುಂದಾಗಿದೆ.
ಸ್ಲೀಪರ್ ಮತ್ತು AC ಬೋಗಿಯಲ್ಲಿ ಪ್ರಯಾಣ ಮಾಡುವವರಿಗೆ ರಿಯಾಯಿತಿ
ಸದ್ಯ ಸ್ಲೀಪರ್ ಮತ್ತು AC ಬೋಗಿಯಲ್ಲಿ ಪ್ರಯಾಣ ಮಾಡುವ ಹಿರಿಯ ನಾಗರಿಕರಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ನೀಡಬೇಕು ಎಂದು ಭಾರತೀಯ ರೈಲ್ವೆಯಲ್ಲಿ ಮನವಿ ಮಾಡಲಾಗಿದೆ. ಈ ರೀತಿಯಲ್ಲಿ ರಿಯಾಯಿತಿ ನೀಡಿದರೆ ಹಿರಿಯ ನಾಗರಿಕರಿಗೆ ಇನ್ನಷ್ಟು ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ. ಇನ್ನು ರೈಲ್ವೆ ಇಲಾಖೆ ಈ ಮನವಿಯನ್ನು ಗಣನೆಗೆ ತಗೆದುಕೊಂಡರೆ ವೃದ್ಧರಿಗೆ ಬಹಳ ಸಹಕಾರಿ ಆಗಲಿದೆ.
ಈ ಹಿಂದೆ ಮನವಿ ನಿರಾಕರಿಸಿದ್ದ ರೈಲ್ವೆ ಸಚಿವರು
ಈ ಹಿಂದೆ ವೃದ್ಧರಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ಕೊಡಬೇಕು ಎಂದು ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ (Ashwini Vaishnav) ಅವರ ಮನವಿ ಸಲ್ಲಿಸಲಾಗಿತ್ತು ಮತ್ತು ಆ ಮನವಿಯನ್ನು ರೈಲ್ವೆ ಸಚಿವರು ನಿರಾಕರಿಸಿದ್ದರು. ಸದ್ಯ ಈಗ ಮತ್ತೆ ಮನವಿ ಸಲ್ಲಿಸಲಾಗಿತ್ತು ರೈಲ್ವೆ ಸಚಿವರು ಈ ಮನವಿಗೆ ಯಾವ ರೀತಿಯಲ್ಲಿ ಉತ್ತರ ನೀಡುತ್ತಾರೆ ಎಂದು ಕಾದು ನೋಡಬೇಕಾಗಿದೆ. ಈ ರೀತಿಯಲ್ಲಿ ರಿಯಾಯಿತಿ ನೀಡಿದರೆ ರೈಲ್ವೆ ಇಲಾಖೆಗೆ ಸಾಕಷ್ಟು ನಷ್ಟವಾಗುತ್ತದೆ ಎಂದು ಈ ಹಿಂದೆ ಸಚಿವರು ಮನವಿಯನ್ನು ತಿರಸ್ಕಾರ ಮಾಡಿದ್ದರು. ಒಂದುವೇಳೆ ರೈಲ್ವೆ ಇಲಾಖೆ ರಿಯಾಯಿತಿ ನೀಡಿದರೆ ಹಿರಿಯ ನಾಗರಿಕರು ಶೇಕಡಾ 40 ರ ತನಕ ರಿಯಾಯಿತಿ ಪಡೆದುಕೊಳ್ಳಬಹುದು.