Dhootha Sameer MD Latest Video: ಸದ್ಯ Youtube ನಲ್ಲಿ Dhootha : Sameer MD ಅವರ ವಿಡಿಯೋ ಬಹಳ ಸಂಚನ ಸೃಷ್ಟಿಮಾಡಿದೆ ಎಂದು ಹೇಳಬಹುದು. ಹೌದು Dhootha : Sameer MD ಅವರು youtube ನಲ್ಲಿ ಧರ್ಮಸ್ಥಳದ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಸಾಕ್ಷಿಗಳನ್ನು ಕಲೆಹಾಕಿ ಅದನ್ನ ವಿಡಿಯೋ ಮಾಡಿದ್ದರು. ಇನ್ನು ಈ ವಿಡಿಯೋ 80 ಲಕ್ಷಕ್ಕೂ ಅಧಿಕ ಜನರು ವೀಕ್ಷಣೆ ಮಾಡಿದ್ದು ಸದ್ಯ youtube ನಲ್ಲಿ ಈ ವಿಡಿಯೋ ಟ್ರೆಂಡಿಂಗ್ ಸ್ಥಾನವನ್ನು ಕೂಡ ಪಡೆದುಕೊಂಡಿದೆ. ಇನ್ನು ಈ ಒಂದು ವಿಡಿಯೋ ಮೂಲಕ Dhootha : Sameer MD ಅವರ youtube ಚಾನೆಲ್ ಗೆ ಸುಮಾರು 3.8 ಲಕ್ಷ subscriber ಕೂಡ ಬಂದಿದ್ದಾರೆ.
youtube ನಲ್ಲಿ ವೈರಲ್ ಆಯಿತು Dhootha : Sameer MD ವಿಡಿಯೋ
ಧರ್ಮಸ್ಥಳ ಸೌಜನ್ಯ ಸಾವು ಹೇಗಾಯಿತು ಮತ್ತು ಆದರೆ ಹಿಂದೆ ಯಾರ ಯಾರ ಕೈಗಳು ಇತ್ತು ಹಾಗು ಪೋಲೀಸರ ತನಿಖೆ ಯಾವ ರೀತಿಯಲ್ಲಿ ಆಗಿತ್ತು ಅನ್ನುವುದರ ಬಗ್ಗೆ Dhootha : Sameer MD ಅವರು ವಿಡಿಯೋ ಮಾಡಿ ಅದನ್ನು ತಮ್ಮ youtube ಚಾನೆಲ್ ನಲ್ಲಿ ಶೇರ್ ಮಾಡಿದ್ದರು. ಇನ್ನು ಈ ವಿಡಿಯೋ ಶೇರ್ ಮಾಡಿದರೆ ಕೆಲವೇ ದಿನದಲ್ಲಿ ಲಕ್ಷ ಲಕ್ಷ ವೀಕ್ಷಣೆ ಕಾಣುವುದರ ಮೂಲಕ ಈಗ ಈ ವಿಡಿಯೋ 80 ಲಕ್ಷಕ್ಕೂ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ. 39 ನಿಮಿಷ ಇರುವ ಈ ವಿಡಿಯೋಗೆ ಸುಮಾರು 80 ಲಕ್ಷ ವೀಕ್ಷಣೆ ಬಂದಿದ್ದು ಸುಮಾರು 8 ಲಕ್ಷ ಜನರು ಲೈಕ್ ಮಾಡುವುದು ಮಾತ್ರವಲ್ಲದೆ ಸುಮಾರು 32 ಸಾವಿರಕ್ಕೂ ಅಧಿಕ ಜನರು ಕಮೆಂಟ್ ಕೂಡ ಮಾಡಿದ್ದಾರೆ.

ಸೌಜನ್ಯ ಕೇಸ್ ಬಗ್ಗೆ ವಿಡಿಯೋ ಮಾಡಿದ Dhootha : Sameer MD ಗೆ ಸಂಕಷ್ಟ
ಹೌದು, ಧರ್ಮಸ್ಥಳ ಸೌಜನ್ಯ ಸಾವಿಗೆ ಸಂಬಂಧಿಸಿದಂತೆ ವಿಡಿಯೋ ಮಾಡಿದ್ದ Dhootha : Sameer MD ಅವರು ಈಗ ದೊಡ್ಡ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಸದ್ಯ ದೊಡ್ಡ ಸನ್ಕಷ್ಟಕ್ಕೆ ಸಿಲುಕಿಕೊಂಡಿರುವ Dhootha : Sameer MD ಅವರು ಈಗ ವಿಡಿಯೋ ಮೂಲಕ ಸಹಾಯವನ್ನು ಕೂಡ ಕೇಳಿದ್ದಾರೆ. ಹೌದು ಇನ್ನೊಂದು ವಿಡಿಯೋ ಶೇರ್ ಮಾಡುವುದರ ಮೂಲಕ Dhootha : Sameer MD ಅವರು, “ನ್ಯಾಯ ಕೇಳುವುದರಲ್ಲಿ ಕೂಡ ಜಾತಿ ಧಾರ್ಮ ಎಲ್ಲಿಂದೋ ಬಂತೋ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ನನ್ನ ಮನೆ ಅಡ್ರೆಸ್ ಲೀಕ್ ಮಾಡಿರುವವರಿಗೆ, ನನ್ನ ಫೋನ್ ನಂಬರ್ ಲೀಕ್ ಮಾಡಿರುವವರಿಗೆ, ನನ್ನನ್ನು ಹುಡುಕಿಕೊಂಡು ಬಂದು ಬಡಿಯೋದು ದೊಡ್ಡ ವಿಷಯ ಅಲ್ಲ, ಹೀಗಾಗಿ youtube ಕಮ್ಯುನಿಟಿಯಲ್ಲಿ ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ ಮತ್ತು ಇದರ ಬಗ್ಗೆ ದನಿ ಎತ್ತಿ” ಎಂದು Dhootha : Sameer MD ಅವರು ಈಗ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.
Dhootha : Sameer MD ಅವರು ಸೌಜನ್ಯ ಸಾವು ಮತ್ತು ಧರ್ಮಸ್ಥಳ ದೇವಾಲಯದ ಬಗ್ಗೆಯೇ ಸಾಕ್ಷಿ ಸಮೇತ ವಿಡಿಯೋ ಮಾಡಿ ಅದನ್ನ youtube ಬಿಡುಗಡೆ ಮಾಡಿದ್ದರು ಮತ್ತು ಈ ವಿಡಿಯೋದಲ್ಲಿ ಯಾರ ಹೆಸರು ತಗೆದುಕೊಳ್ಳದೆ ಇದ್ದರೂ ಕೂಡ ಪರೋಕ್ಷವಾಗಿ ಅವರ ಬಗ್ಗೆ ಮಾತನಾಡಿದ್ದರು. ಸದ್ಯ Dhootha : Sameer MD ಅವರಿಗೆ ಜೀವ ಬೆದರಿಕೆಯ ಕರೆಗಳು ಬಂದಿದೆ ಮತ್ತು ಈ ಕಾರಣಕ್ಕೆ Dhootha : Sameer MD ಅವರು ಎಲ್ಲರೂ ಇದರ ಬಗ್ಗೆ ದನಿ ಎತ್ತಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಸೌಜನ್ಯ ಪರ ದ್ವನಿ ಎತ್ತಿದ ಯುಟ್ಯೂಬರ್ ಗೆ ಬೆದರಿಕೆ pic.twitter.com/b2JOGUmYVD
— ಕನ್ನಡಿಗ ದೇವರಾಜ್ (@sgowda79) March 4, 2025
ಇನ್ನೂ ಹೇಗೆಲ್ಲಾ ದುಡ್ಡು ಮಾಡ್ತೀರೋ,
ಸತ್ತ ಹುಡುಗಿ ಹೆಸರಲ್ಲಿ ಏನೆಲ್ಲಾ ನಡೀತಿದೆ ಅಂತಾ ನೋಡಿದ್ರೆ ಮನುಷ್ಯರ ಮೇಲೆ ನಂಬಿಕೆ ಹೋಗ್ತಿದೆ…..