FD Scheme Rules: ಈಗಿನ ಕಾಲದಲ್ಲಿ ಜನರು ತಮ್ಮ ಹಣಕ್ಕೆ ಎಲ್ಲಿ ಸುರಕ್ಷತೆ ಇರುತ್ತೋ ಅಲ್ಲಿ ಹೆಚ್ಚು ಹೆಚ್ಚು ಹೂಡಿಕೆ ಮಾಡಲು ಬಯಸುತ್ತಾರೆ. ಹೌದು, ಬ್ಯಾಂಕ್ ಮತ್ತು ಅಂಚೆ ಕಚೇರಿಯಲ್ಲಿ ಜನರ ಹಣಕ್ಕೆ ಸುರಕ್ಷತೆ ಇರುವ ಕಾರಣ ಜನರು ಬ್ಯಾಂಕ್ ಮತ್ತು ಅಂಚೆ ಕಚೇರಿಯ ವಿವಿಧ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಇದರ ನಡುವೆ ಬ್ಯಾಂಕ್ ಮತ್ತು ಅಂಚೆ ಕಚೇರಿಯಲ್ಲಿ ಜನರು ಹೂಡಿಕೆ ಮಾಡುವ ಹಣಕ್ಕೆ ಹೆಚ್ಚು ಬಡ್ಡಿ ಸಿಗುವ ಕಾರಣ ಜನರು ಬ್ಯಾಂಕ್ ಮತ್ತು ಅಂಚೇರಿಯಲ್ಲಿ FD ಯೋಜನೆಯಲ್ಲಿ (Fixed Deposit Scheme) ಹೆಚ್ಚು ಹೆಚ್ಚು ಹೂಡಿಕೆ ಮಾಡಲು ಬಯಸುತ್ತಿದ್ದಾರೆ.
FD ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಹೊಸ ರೂಲ್ಸ್
ಸದ್ಯ ಬ್ಯಾಂಕ್ ಮತ್ತು ಅಂಚೆ ಕಚೇರಿಯ FD ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಈಗ ಕೇಂದ್ರದಿಂದ ಹೊಸ ನಿಯಮ ಜಾರಿಗೆ ಬಂದಿದೆ. ಈಗಾಗಲೇ FD ಯೋಜನೆಯಲ್ಲಿ ಹೂಡಿಕೆ ಮಾಡಿದವರು ಮತ್ತು ಮುಂದಿನ ದಿನಗಳಲ್ಲಿ FD ಯೋಜನೆಯಲ್ಲಿ ಹೂಡಿಕೆ ಮಾಡುವವರು ಬದಲಾದ ಈ ನಿಯಮವನ್ನು ತಿಳಿದುಕೊಳ್ಳುವುದು ಅತೀ ಅವಶ್ಯಕವಾಗಿದೆ. ಹಾಗಾದರೆ FD ಯೋಜನೆಗೆ ಸಂಬಂಧಿಸಿದಂತೆ ಜಾರಿಗೆ ಬಂದಿರುವ ಹೊಸ ನಿಯಮ ಏನು ಅನ್ನುವುದರ ಬಗ್ಗೆ ನವಿಗೆ ತಿಳಿಯೋಣ.

ಅವಧಿಗೂ ಮುನ್ನ FD ಹಣ ಹಿಂಪಡೆಯುವವರಿಗೆ ಹೊಸ ರೂಲ್ಸ್
ಸಾಕಷ್ಟು ಜನರು ಕೆಲವು ಅನಿವಾರ್ಯ ಕಾರಣಗಳಿಂದ ಅವಧಿಗೂ ಮುನ್ನವೇ FD ಹಾನವನ್ನು ಹಿಂಪಡೆಯಲು ಮುಂದಾಗುತ್ತಾರೆ. ಹೌದು ತುರ್ತು ಪರಿಸ್ಥಿತಿಯಲ್ಲಿ FD ಇಟ್ಟ ಹಣವನ್ನು ಜನರು ಹಿಂಪಡೆಯುತ್ತಾರೆ. ಇನ್ನು ಈಗ ಅವಧಿಗೂ ಮುನ್ನವೇ FD ಹಣವನ್ನ ಹಿಂಪಡೆಯುವವರಿಗೆ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಇನ್ನುಮುಂದೆ ಅವಧಿಗೂ ಮುನ್ನವೇ FD ಹಣವನ್ನು ಹಿಂಪಡೆಯುವವರು ದೊಡ್ಡ ಪ್ರಮಾಣದ ನಷ್ಟ ಎದುರಿಸಬೇಕಾಗುತ್ತದೆ.
ಅವಧಿಗೂ ಮುನ್ನ FD ಹಿಂಪಡೆದರೆ ಆಗುವ ನಷ್ಟ ಇಲ್ಲಿದೆ
ಹೌದು, ನೀವು FD ಯೋಜನೆಯ ಹಣವನ್ನು ಅವಧಿಗೂ ಮುನ್ನವೇ ಹಿಂಪಡೆದರೆ ನೀವು ಯೋಜನೆಯ ಸಂಪೂರ್ಣ ಲಾಭ ಪಡೆದುಕೊಳ್ಳಲು ಸಾಧ್ಯವಿಲ್ಲ. ಇನ್ನು ಬ್ಯಾಂಕ್ ನಿಯಮದ ಪ್ರಕಾರ ನೀವು FD ಯೋಜನೆಯ ಹಣವನ್ನು ಅವಧಿಗೂ ಮುನ್ನವೇ ಹಿಂಪಡೆದರೆ ನೀವು ದಂಡ ಕಡ್ಡಾಯವಾಗಿ ಕಟ್ಟಬೇಕು, ಹೌದು ನಿಯಮಗಳ ಪ್ರಕಾರ ನೀವು ಅವಧಿಗೂ ಮುನ್ನ FD ಹಣವನ್ನು ಹಿಂಪಡೆದರೆ ನೀವು ಶೇಕಡಾ 0.50 ರಷ್ಟು ದಂಡ ಪಾವತಿ ಮಾಡಬೇಕು. ಹೌದು ನೀವು 5 ಲಕ್ಷ ರೂ ತನಕ FD ಇಟ್ಟಿದ್ದರೆ ನೀವು ಅದಕ್ಕೆ ಶೇಕಡಾ 0.50 ರಷ್ಟು ದಂಡ ಪಾವತಿ ಮಾಡಬೇಕು. ಅದೇ ರೀತಿಯಲ್ಲಿ ನೀವು 5 ಲಕ್ಷಕ್ಕಿಂತ ಜಾಸ್ತಿ ಮತ್ತು 1 ಕೋಟಿ ರೂಪಾಯಿಗಿಂತ ಕಡಿಮೆ ಹಣ FD ಇಟ್ಟಿದ್ದರೆ ನೀವು ಶೇಕಡಾ 1 ರಷ್ಟು ದಂಡ ಪಾವತಿ ಮಾಡಬೇಕಾಗುತ್ತದೆ.
ಈ ನಷ್ಟದಿಂದ ತಪ್ಪಿಸಿಕೊಳ್ಳುವುದು ಹೇಗೆ
FD ಯೋಜನೆಯನ್ನು ಅವಧಿಗುವ ಮುನ್ನ ಮುರಿಯುವ ಸಂದರ್ಭ ಬರುತ್ತೆ ಅಂತ ನಿಮಗೆ ಮೊದಲೇ ತಿಳಿದಿದ್ದರೆ ನೀವು ಉಪಾಯದ ಮೂಲಕ ದಂಡದಿಂದ ತಪ್ಪಿಸಿಕೊಳ್ಳಬಹುದು. ಹೌದು, FD ಹಣವನ್ನು ಒಂದೇ ಯೋಜನೆಯಲ್ಲಿ ಠೇವಣಿ ಇಡುವ ಬದಲು ಸಣ್ಣ ಸಣ್ಣ ಮೊತ್ತವಾಗಿ ಬೇರೆಬೇರೆ ಠೇವಣಿಯಲ್ಲಿ ಇಡುವುದರ ಮೂಲಕ ನೀವು ದಂಡದಿಂದ ಮುಕ್ತಿ ಪಡೆದುಕೊಳ್ಳಬಹುದು. ಈ ಸಮಯದಲ್ಲಿ ಒಂದು ಸ್ಥಿರ ಠೇವಣಿ ಮುರಿದರೆ ಉಳಿದಾ ಠೇವಣಿಗಳಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.