Ganga Kalyana Scheme 2024-25: ತೋಟಕ್ಕೆ ಮತ್ತು ಹೊಲಕ್ಕೆ ನೀರಿಲ್ಲದೆ ಪರದಾಡುತ್ತಿರುವ ರೈತರಿಗೆ ಈಗ ಕರ್ನಾಟಕ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಹೌದು ರೈತರಿಗೆ ಈಗ ಉಚಿತವಾಗಿ ಬೋರ್ ವೆಲ್ ಕೊರೆಸಿಕೊಡಲು ಈಗ ಕರ್ನಾಟಕ ರಾಜ್ಯ ಸರ್ಕಾರ ಅರ್ಜಿ ಆಹ್ವಾನಿಸಿದೆ. ಸರ್ಕಾರದ ನಿಯಮಗಳ ಅಡಿಯಲ್ಲಿ ಬರುವ ರೈತರು ಸರ್ಕಾರ ಯೋಜನೆಯ ಅಡಿಯಲ್ಲಿ ಉಚಿತ ತಮ್ಮ ಹೊಲದಲ್ಲಿ ಬೋರ್ ವೆಲ್ ಕೊರೆಸಿಕೊಳ್ಳಬಹುದಾಗಿದೆ. ಹಾಗಾದರೆ ಯಾವ ಯಾವ ರೈತರಿಗೆ ಸರ್ಕಾರದಿಂದ ಉಚಿತವಾಗೋ ಬೋರ್ ವೆಲ್ ಸಿಗಲಿದೆ ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಅನ್ನುವುದ ಬಗ್ಗೆ ತಿಳಿಯೋಣ.
2025 ನೇ ಶಾಲಿನ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಆಹ್ವಾನ
ಹೌದು, ತೋಟಗಾರಿಕೆ ಇಲಾಖೆಯಿಂದ 2024 -2025 ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಗೆ (Ganga Kalyana Scheme) ಅರ್ಜಿ ಆಹ್ವಾನ ಮಾಡಲಾಗಿದೆ. ಇನ್ನು ಈ ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ರೈತರಿಗೆ ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿಕೊಳ್ಳಲು ಸಹಾಯಧನ ನೀಡಲಾಗುತ್ತದೆ. ಆಸಕ್ತರು ಈ ಯೋಜನೆಗೆ ಅರ್ಜಿ ಸಲ್ಲಿಸುವುದರ ಮೂಲಕ ಈ ಸರ್ಕಾರೀ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ.

ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ
ಆಸಕ್ತ ರೈತರು ತೋಟಗಾರಿಕೆ ಇಲಾಖೆಗೆ ಭೇಟಿನೀಡಿ ಯೋಜನೆಯ ಮಾಹಿತಿಯನ್ನು ಪಡೆದುಕೊಂಡು ಅಗತ್ಯ ದಾಖಲೆ ನೀಡುವುದರ ಮೂಲಕ ಆನ್ಲೈನ್ ಮತ್ತು ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು. ರೈತರು ತಮ್ಮ ಭೂಮಿ ಸಂಬಂಧಿಸಿದ ಅಗತ್ಯ ದಾಖಲೆ ನೀಡುವುದರ ಮೂಲಕ ಗಂಗಾ ಕಲ್ಯಾಣ ಯೋಜನೆಯ ಲಾಭ ಪಡೆದುಕೊಳ್ಳಬಹುದು.
ಬೇಕಾದ ದಾಖಲೆಗಳು ಮತ್ತು ಯೋಜನೆಯ ಷರತ್ತುಗಳು
* ಕೃಷಿ ಚಟುವಟಿಕೆ ನಡಿಯುತ್ತಿರುವ ಜಮೀನಿನಲ್ಲಿ ಮಾತ್ರ ಈ ಯೋಜನೆಯ ಕೊಳೆವೆ ಬಾವಿ ತೆರೆಯಲು ಅವಕಾಶ ಇರುತ್ತದೆ.
* ಈ ಯೋಜನೆಗೆ ಅರ್ಜಿ ಸಲ್ಲಿಸುವ ಕುಟುಂಬದ ಆದಾಯ ವಾರ್ಷಿಕವಾಗಿ ಹಳ್ಳಿ ಪ್ರದೇಶದಲ್ಲಿ 98 ಸಾವಿರ ಮತ್ತು ನಗರ ಪ್ರದೇಶದಲ್ಲಿ 1.20 ಲಕ್ಷ ಮೀರಿರಬಾರದು.
* ಕರ್ನಾಟಕ ಕಾಯಂ ನಿವಾಸಿ ಆಗಿರಬೇಕು ಮತ್ತು ವಯಸ್ಸು 18 ವರ್ಹಾದಿಂದ 60 ವರ್ಷದ ಒಳಗೆ ಇರಬೇಕು.
* ಕೊಳವೆ ಬಾವಿ ಕೊರೆಯುವ ಜನಿಮಿನಿಗೆ ಯಾವುದೇ ಮೂಲದಿಂದ ನೀರಾವರಿ ಸೌಲಭ್ಯ ಕೂಡ ಇರಬಾರದು.
ಗಂಗಾ ಕಲ್ಯಾಣ ಯೋಜನೆಗೆ ಬೇಕಾದ ದಾಖಲೆಗಳು
* ಅಭ್ಯರ್ಥಿಯ ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್
* ಜಾತಿ ಮತ್ತು ಆದಾಯ ಪ್ರಮಾಣಪತ್ರ
* ಜಮೀನಿನ ಪಹಣಿ ಮತ್ತು ಅರ್ಜಿದಾರನ ಭಾವಚಿತ್ರ
* BPL ರೇಷನ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ
ಇನ್ನು ಗಂಗಾ ಕಲ್ಯಾಣ ಯೋಜನೆಗೆ ಆನ್ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು ಅಥವಾ ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರದ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು.